ಶಕುಂತಲಾ ಬಾಯಿ ಕುರ್ತಕೋಟಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ
ಧಾರವಾಡ, 12 ಮೇ (ಹಿ.ಸ.) : ಆ್ಯಂಕರ್ : ಗಾಂಧಿ ಪ್ರಣೀತ ಮೌಲ್ಯಗಳ ಸ್ವಾತಂತ್ರ್ಯ ಯೋಧರಾಗಿದ್ದ ಶಕುಂತಲಾ ಬಾಯಿ ಕುರ್ತಕೋಟಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಗಿತ್ತು. ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ, ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಕುಂತಲಾ ಬಾಯಿ ಕುರ್
ಶಕುಂತಲಾ ಬಾಯಿ ಕುರ್ತಕೋಟಿ


ಶಕುಂತಲಾ ಬಾಯಿ ಕುರ್ತಕೋಟಿ


ಶಕುಂತಲಾ ಬಾಯಿ ಕುರ್ತಕೋಟಿ


ಧಾರವಾಡ, 12 ಮೇ (ಹಿ.ಸ.) :

ಆ್ಯಂಕರ್ : ಗಾಂಧಿ ಪ್ರಣೀತ ಮೌಲ್ಯಗಳ ಸ್ವಾತಂತ್ರ್ಯ ಯೋಧರಾಗಿದ್ದ ಶಕುಂತಲಾ ಬಾಯಿ ಕುರ್ತಕೋಟಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಗಿತ್ತು.

ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ, ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಕುಂತಲಾ ಬಾಯಿ ಕುರ್ತಕೋಟಿ ಹೋರಾಟ ಸಮಾಜ ಸೇವಾ ಕುರಿತು ಸ್ಮರಿ‌ಸಿಕೊಳ್ಳಲಾಯಿತು.

ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ರೀತಿ, ಹೋರಾಟ, ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರಾಗಿದ್ದ ಶಂಕರ ಕುರ್ತಕೋಟಿ ಅವರ ಪರಿಚಯ, ವಿವಾಹ, ಮುಂದೆ ಖಾದಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕುರಿತು ಸ್ಮರಿಸಿಕೂಳ್ಳಲಾಯಿತು.

ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಧಾರವಾಡ ಜಿಲ್ಲಾಧಿಕಾರಿ ಅವರು ಉದ್ಘಾಟಿ‌ಸಿದರು.

ಪರಿಸರವಾದಿ ಹಿರೇಮಠ ಮಾತನಾಡಿದರು

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಪೀಠದ ನಿವೃತ್ತ ಉಪನ್ಯಾಸಕ ಶಿವಾನಂದ ಶೆಟ್ಟರ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಗೋಪಾಲ ದಾಬಡೆ ಅವರು ಮಾತನಾಡಿ, ಶಕುಂತಲಾ ಬಾಯಿ ಕುರ್ತಕೋಟಿ ಅವರ ನಂತರ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯ ಕ್ರಮ ಎಂದಿನಂತೆ ನಡೆಯಬೇಕು. ಧಾರವಾಡದ ಸ್ವಚ್ಛತೆ ಕಾಳಜಿ ಅಗತ್ಯ ಎಂದು ಕಳಕಳಿ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಧಾರವಾಡ ತಾಲೂಕಿನ ಗದಗ, ಹೆಬ್ಸಳ್ಳಿ ಮುಂತಾದೆಡೆಯ ಹಿರಿಯ ಖಾದಿ ಕಾರ್ಯಕರ್ತರನ್ನು ಸನ್ಮಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಖಾದಿ ಕೇಂದ್ರಗಳ ಮುಖ್ಯಸ್ಥರು ಸಿದ್ಧಾಂತಿ ಅವರು ಶಕುಂತಲಾ ತಾಯಿ.ಶಂಕರ ಅವರ ಒಡನಾಟ ಸ್ಮರಿಸಿಕೊಂಡರು.

ಇದೇ ರೀತಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಪತ್ರಕರ್ತ ಮನೋಹರ ಯಡವಟ್ಟಿ ಅವರು ಶಕುಂತಲಾ ತಾಯಿ ಅವರ ಸಂಪರ್ಕ, ಸೇವೆ ಸ್ಮರಿಸಿಕೊಂಡರು.

ಜಯಲಕ್ಷ್ಮೀ ಯಂಡಿಗೇರಿ, ಭಾರತಿ ಸಾಳಂಕಿ, ಶಿವಕುಮಾರ ರೇವಡಿ, ರಾಮನಾಥ ಬನಶಂಕರಿ ಅವರು ‌ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಧಾರವಾಡದ ಯೋಗ ಮಿತ್ರ ಮಹಿಳಾ ಮಂಡಳದವ ರಿಂದ ಶಕುಂತಲಾ ಬಾಯಿ ಕುರ್ತಕೋಟಿ ಕುರಿತು ರೂಪಕ ಪ್ರದರ್ಶನವಾಯಿತು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande