ಚನ್ನಸಂದ್ರ ಯಾರ್ಡ್ ಕಾಮಗಾರಿ : ಹಲವು ರೈಲುಗಳಿಗೆ ಭಾಗಶಃ ರದ್ದತಿ, ಮಾರ್ಗ ಬದಲಾವಣೆ
ಬೆಂಗಳೂರು, 01 ಮೇ (ಹಿ.ಸ.) : ಆ್ಯಂಕರ್ : ಚನ್ನಸಂದ್ರ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಯಾರ್ಡ್ ಮರುವಿನ್ಯಾಸ ಕಾಮಗಾರಿಯ ಹಿನ್ನೆಲೆಯಲ್ಲಿ, ಬೆಂಗಳೂರು ವಿಭಾಗದ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳು ಭಾಗಶಃ ರದ್ದಾಗಲಿದ
ಚನ್ನಸಂದ್ರ ಯಾರ್ಡ್ ಕಾಮಗಾರಿ : ಹಲವು ರೈಲುಗಳಿಗೆ ಭಾಗಶಃ ರದ್ದತಿ, ಮಾರ್ಗ ಬದಲಾವಣೆ


ಬೆಂಗಳೂರು, 01 ಮೇ (ಹಿ.ಸ.) :

ಆ್ಯಂಕರ್ : ಚನ್ನಸಂದ್ರ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಯಾರ್ಡ್ ಮರುವಿನ್ಯಾಸ ಕಾಮಗಾರಿಯ ಹಿನ್ನೆಲೆಯಲ್ಲಿ, ಬೆಂಗಳೂರು ವಿಭಾಗದ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳು ಭಾಗಶಃ ರದ್ದಾಗಲಿದ್ದು, ಇನ್ನೂ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಕಟಣೆಯ ಪ್ರಕಾರ, ಮೇ 3 ಮತ್ತು 4ರಂದು ಸಂಚರಿಸುವ 11301 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್–ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣ ಎಕ್ಸ್ಪ್ರೆಸ್ ರೈಲು ಯಲಹಂಕ ಮತ್ತು ಕೆಎಸ್ಆರ್ ಬೆಂಗಳೂರು ನಡುವಿನ ಭಾಗದಲ್ಲಿ ರದ್ದಾಗಲಿದೆ. ಇದೇ ರೀತಿ 11302 ಕೆಎಸ್ಆರ್ ಬೆಂಗಳೂರು–ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಕ್ಸ್ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು–ಯಲಹಂಕ ನಡುವೆ ರದ್ದಾಗಲಿದ್ದು, ಯಲಹಂಕ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.

ಇನ್ನು, ಮೇ 2ರಿಂದ 4ರವರೆಗೆ ಸಂಚರಿಸುವ 20687 ಎಸ್ಎಸ್ಎಸ್ ಹುಬ್ಬಳ್ಳಿ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ರದ್ದಾಗಲಿದೆ. ಅದೇ ಸಮಯದಲ್ಲಿ, ಮೇ 3ರಿಂದ 5ರವರೆಗೆ ಸಂಚರಿಸುವ 20688 ಕೆಎಸ್ಆರ್ ಬೆಂಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು–ಯಶವಂತಪುರ ನಡುವೆ ರದ್ದಾಗಿದ್ದು, ಯಶವಂತಪುರ ನಿಲ್ದಾಣದಿಂದಲೇ ಹೊರಡಲಿದೆ.

ಇದೇ ರೀತಿಯಲ್ಲಿ, ಮೇ 2 ಮತ್ತು 3ರಂದು ಸಂಚರಿಸುವ 18463 ಭುವನೇಶ್ವರ–ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಎಕ್ಸ್ಪ್ರೆಸ್ ಹಾಗೂ ಮೇ 3 ಮತ್ತು 4ರಂದು ಸಂಚರಿಸುವ 18464 ಕೆಎಸ್ಆರ್ ಬೆಂಗಳೂರು–ಭುವನೇಶ್ವರ ಪ್ರಶಾಂತಿ ಎಕ್ಸ್ಪ್ರೆಸ್ ರೈಲುಗಳು ಕ್ರಮವಾಗಿ ಯಲಹಂಕ–ಕೆಎಸ್ಆರ್ ಬೆಂಗಳೂರು ಮತ್ತು ಕೆಎಸ್ಆರ್ ಬೆಂಗಳೂರು–ಯಲಹಂಕ ನಡುವಿನ ಭಾಗದಲ್ಲಿ ರದ್ದಾಗಲಿವೆ.

ಇನ್ನೊಂದೆಡೆ, ಕೆಲವು ರೈಲುಗಳ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ. 16593 ಕೆಎಸ್ಆರ್ ಬೆಂಗಳೂರು–ಹಜೂರ್ ಸಾಹಿಬ್ ನಾಂದೇಡ್ ಎಕ್ಸ್ಪ್ರೆಸ್ ಸೇರಿದಂತೆ ಕೆಲವು ರೈಲುಗಳು ಕೆಎಸ್ಆರ್ ಬೆಂಗಳೂರು–ಯಶವಂತಪುರ–ಯಲಹಂಕ ಮಾರ್ಗವಾಗಿ ಸಂಚರಿಸಲಿದ್ದು, ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಹಾಗೆಯೇ 12647 ಕೊಯಮತ್ತೂರು–ಹಜರತ್ ನಿಜಾಮುದ್ದೀನ್, 12785/12786 ಕಾಚಿಗುಡ–ಅಶೋಕಪುರಂ, 17290 ಮೈಸೂರು–ಕಾಕಿನಾಡ ಟೌನ್ ಹಾಗೂ 22692 ಹಜರತ್ ನಿಜಾಮುದ್ದೀನ್–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲುಗಳು ಬದಲಿ ಮಾರ್ಗಗಳಲ್ಲಿ ಸಂಚರಿಸಲಿವೆ.

ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ರೈಲುಗಳ ವೇಳಾಪಟ್ಟಿ ಮತ್ತು ನಿಲ್ದಾಣ ಮಾಹಿತಿ ಪರಿಶೀಲಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande