ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ
ಬೆಂಗಳೂರು, 01 ಮೇ (ಹಿ.ಸ.) : ಆ್ಯಂಕರ್ : ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೇಲ್ವೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಯಶವಂತಪುರ – ಯೋಗ ನಗರಿ ಋಷಿಕೇಶ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲುಗಳ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ
ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ


ಬೆಂಗಳೂರು, 01 ಮೇ (ಹಿ.ಸ.) :

ಆ್ಯಂಕರ್ : ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೇಲ್ವೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಯಶವಂತಪುರ – ಯೋಗ ನಗರಿ ಋಷಿಕೇಶ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲುಗಳ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ.

ರೈಲ್ವೆ ಪ್ರಕಟಣೆಯ ಪ್ರಕಾರ, ಪ್ರತಿ ಗುರುವಾರ ಯಶವಂತಪುರದಿಂದ ಹೊರಡುವ 06597 ಯಶವಂತಪುರ–ಯೋಗ ನಗರಿ ಋಷಿಕೇಶ ವಿಶೇಷ ಎಕ್ಸ್ಪ್ರೆಸ್ ರೈಲು, ಇದುವರೆಗೆ ಏಪ್ರಿಲ್ 30, 2026ರವರೆಗೆ ಮಾತ್ರ ಸಂಚರಿಸಲು ನಿಗದಿಯಾಗಿತ್ತು. ಇದೀಗ ಇದರ ಸಂಚಾರವನ್ನು ಮೇ 7, 2026ರಿಂದ ಜುಲೈ 9, 2026ರವರೆಗೆ ವಿಸ್ತರಿಸಲಾಗಿದೆ.

ಇದೇ ರೀತಿ, ಮರು ಪ್ರಯಾಣದ ದಿಕ್ಕಿನಲ್ಲಿ ಪ್ರತಿ ಶನಿವಾರ ಯೋಗ ನಗರಿ ಋಷಿಕೇಶದಿಂದ ಹೊರಡುವ 06598 ಯೋಗ ನಗರಿ ಋಷಿಕೇಶ–ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು, ಇದುವರೆಗೆ ಮೇ 2, 2026ರವರೆಗೆ ಮಾತ್ರ ನಿಗದಿಯಾಗಿದ್ದು, ಇದೀಗ ಮೇ 9, 2026ರಿಂದ ಜುಲೈ 11, 2026ರವರೆಗೆ ವಿಸ್ತರಿಸಲಾಗಿದೆ.

ಈ ಎರಡೂ ವಿಶೇಷ ರೈಲುಗಳು ತಮ್ಮ ಪ್ರಸ್ತುತ ಸಮಯ, ನಿಲ್ದಾಣಗಳು ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರೆಯಲಿವೆ. ಒಟ್ಟು ಎರಡೂ ದಿಕ್ಕುಗಳಲ್ಲಿ ತಲಾ 10 ಪ್ರಯಾಣಗಳನ್ನು ಪೂರ್ಣಗೊಳಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ, 06597 ರೈಲು ಯೋಗ ನಗರಿ ಋಷಿಕೇಶ ರೈಲು ನಿಲ್ದಾಣ ತಲುಪುವ ಸಮಯದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದ್ದು, ಹಿಂದಿನ 10:20 ಗಂಟೆಯ ಬದಲು ಈಗ ಬೆಳಿಗ್ಗೆ 10:15ಕ್ಕೆ ತಲುಪಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande