ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ–ಬೆಳ್ಳಿ ಬೆಲೆ ಏರಿಕೆ
ನವದೆಹಲಿ, 09 ಏಪ್ರಿಲ್ (ಹಿ.ಸ.) : ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಆರಂಭಿಕ ವಹಿವಾಟಿನಲ್ಲೇ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಬುಧವಾರದ ಹೋಲಿಕೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹3,670ರಿಂದ ₹4,000ರವರೆಗೆ ಏರಿಕೆಯಾಗಿದೆ. ಅದೇ ವೇಳೆ ಬೆಳ್ಳಿ ಬೆ
Gold silver


ನವದೆಹಲಿ, 09 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಆರಂಭಿಕ ವಹಿವಾಟಿನಲ್ಲೇ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಬುಧವಾರದ ಹೋಲಿಕೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹3,670ರಿಂದ ₹4,000ರವರೆಗೆ ಏರಿಕೆಯಾಗಿದೆ. ಅದೇ ವೇಳೆ ಬೆಳ್ಳಿ ಬೆಲೆಯೂ ಪ್ರತಿ ಕೆಜಿಗೆ ₹10,200ರಷ್ಟು ಏರಿಕೆ ಕಂಡಿದೆ.

ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನವು ಇಂದು 10 ಗ್ರಾಂಗೆ ₹1,53,830 ರಿಂದ ₹1,54,920ರ ನಡುವೆ ವಹಿವಾಟು ನಡೆಸುತ್ತಿದೆ. 22 ಕ್ಯಾರೆಟ್ ಚಿನ್ನದ ಬೆಲೆ ₹1,41,010ರಿಂದ ₹1,42,010ರವರೆಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆ ಏರಿಕೆಯಿಂದಾಗಿ, ದೆಹಲಿಯಲ್ಲಿ ಪ್ರತಿ ಕೆಜಿಗೆ ₹2,60,100ಕ್ಕೆ ತಲುಪಿದೆ.

ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,53,980 ಆಗಿದ್ದರೆ, 22 ಕ್ಯಾರೆಟ್ ಚಿನ್ನ ₹1,41,160ಕ್ಕೆ ಮಾರಾಟವಾಗುತ್ತಿದೆ. ಆರ್ಥಿಕ ರಾಜಧಾನಿ ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನ ₹1,53,830 ಮತ್ತು 22 ಕ್ಯಾರೆಟ್ ಚಿನ್ನ ₹1,41,010 ಇದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande