ದೇಶದಲ್ಲಿ ಇಂಧನ ಪೂರೈಕೆ ಸ್ಥಿರ: ವದಂತಿಗಳಿಗೆ ಕಿವಿಗೊಡಬೇಡಿ: ಕೇಂದ್ರ ಸರ್ಕಾರ
ನವದೆಹಲಿ, 08 ಏಪ್ರಿಲ್ (ಹಿ.ಸ.): ಆ್ಯಂಕರ್: ಪಶ್ಚಿಮ ಏಷ್ಯಾದ ಬೆಳವಣಿಗೆಗಳ ನಡುವೆಯೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಪೂರೈಕೆ ಸಂಪೂರ್ಣವಾಗಿ ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾಹಿತಿ ಪ್ರಕಾರ, ತೈಲ ಸಂಸ್ಕರಣಾಗಾರಗ
PC


ನವದೆಹಲಿ, 08 ಏಪ್ರಿಲ್ (ಹಿ.ಸ.):

ಆ್ಯಂಕರ್:

ಪಶ್ಚಿಮ ಏಷ್ಯಾದ ಬೆಳವಣಿಗೆಗಳ ನಡುವೆಯೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಪೂರೈಕೆ ಸಂಪೂರ್ಣವಾಗಿ ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾಹಿತಿ ಪ್ರಕಾರ, ತೈಲ ಸಂಸ್ಕರಣಾಗಾರಗಳು ಸಾಕಷ್ಟು ಕಚ್ಚಾ ತೈಲ ಸಂಗ್ರಹದೊಂದಿಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಅಂತರ್ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಮಾರ್ಚ್ 23ರಿಂದ ಇದುವರೆಗೆ 5 ಕೆಜಿ ತೂಕದ ಸುಮಾರು 8.9 ಲಕ್ಷ ಎಲ್ಪಿಜಿ ಸಿಲಿಂಡರ್ಗಳು ಮಾರಾಟವಾಗಿವೆ ಎಂದು ತಿಳಿಸಿದರು. ಕಳೆದ ಐದು ದಿನಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 1,600 ಜಾಗೃತಿ ಶಿಬಿರಗಳನ್ನು ನಡೆಸಿ 14,000ಕ್ಕೂ ಹೆಚ್ಚು ಸಿಲಿಂಡರ್ಗಳನ್ನು ವಿತರಿಸಿವೆ.

ದೇಶೀಯ ಬಳಕೆದಾರರಿಗೆ ಆದ್ಯತೆ ನೀಡಲಾಗುತ್ತಿದ್ದು, ರಸಗೊಬ್ಬರ ಘಟಕಗಳಿಗೆ ಶೇಕಡಾ 95ರಷ್ಟು ನೈಸರ್ಗಿಕ ಅನಿಲ ಪೂರೈಕೆ ಮಾಡಲಾಗುತ್ತಿದೆ. ಪೆಟ್ರೋಕೆಮಿಕಲ್ ಬಳಕೆಯನ್ನು ಮಿತಿಗೊಳಿಸಿ, ಸಿ3 ಮತ್ತು ಸಿ4 ಸ್ಟ್ರೀಮ್ಗಳನ್ನು ಎಲ್ಪಿಜಿ ಪೂರೈಕೆಗೆ ತಿರುಗಿಸುವ ಕ್ರಮ ಕೈಗೊಳ್ಳಲಾಗಿದೆ.

ಇದಲ್ಲದೆ, ಸುಮಾರು 3.87 ಲಕ್ಷ ಪಿಎನ್ಜಿ ಸಂಪರ್ಕಗಳನ್ನು ನೀಡಲಾಗಿದ್ದು, 4.21 ಲಕ್ಷ ಹೊಸ ಗ್ರಾಹಕರು ನೋಂದಾಯಿಸಿದ್ದಾರೆ. ಅನಗತ್ಯ ಬಳಕೆಯನ್ನು ತಪ್ಪಿಸಲು ಕೆಲ ಗ್ರಾಹಕರು ತಮ್ಮ ಎಲ್ಪಿಜಿ ಸಂಪರ್ಕಗಳನ್ನು ಸ್ವಯಂ ಪ್ರೇರಿತವಾಗಿ ತ್ಯಜಿಸುತ್ತಿದ್ದು, ಇದುವರೆಗೆ 17,000ಕ್ಕೂ ಹೆಚ್ಚು ಸಂಪರ್ಕಗಳನ್ನು ಹಿಂತೆಗೆದುಕೊಳ್ಳಲಾಗಿದೆ.

ಕಾಳ ಸಂತೆ ವಿರುದ್ಧ ಕಣ್ಗಾವಲು ಬಿಗಿಗೊಳಿಸಲಾಗಿದ್ದು, ಇತ್ತೀಚೆಗೆ 4,000 ದಾಳಿಗಳನ್ನು ನಡೆಸಿ 56,000ಕ್ಕೂ ಹೆಚ್ಚು ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. 1,770 ಶೋಕಾಸ್ ನೋಟಿಸ್ಗಳನ್ನು ನೀಡಲಾಗಿದ್ದು, 51 ವಿತರಕರನ್ನು ಅಮಾನತುಗೊಳಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಶ್ಚಿಮ ಏಷ್ಯಾದ ಕದನ ವಿರಾಮವನ್ನು ಸ್ವಾಗತಿಸಿದೆ. ವಕ್ತಾರ ರಣಧೀರ್ ಜೈಸ್ವಾಲ್, ಈ ಕ್ರಮವು ಪ್ರಾದೇಶಿಕ ಶಾಂತಿಗೆ ದಾರಿ ಮಾಡಿಕೊಡಲಿ ಎಂದು ಆಶಿಸಿದರು. ಹಾರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ವ್ಯಾಪಾರ ನಿರಂತರವಾಗಿ ಸಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಲ್ಲಿದ್ದಲು ದಾಸ್ತಾನು ಸಾಕಷ್ಟು

ಕಲ್ಲಿದ್ದಲು ಸಚಿವಾಲಯದ ಪ್ರಕಾರ, ದೇಶದ ಗಣಿಗಳು ಮತ್ತು ವಿದ್ಯುತ್ ಸ್ಥಾವರಗಳಲ್ಲಿ ಸಮರ್ಪಕ ಕಲ್ಲಿದ್ದಲು ಸಂಗ್ರಹವಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ಕೊರತೆ ಇಲ್ಲ. ದೇಶದ ಇಂಧನ ಅವಶ್ಯಕತೆಗಳಲ್ಲಿ ಶೇಕಡಾ 70ರಷ್ಟು ವಿದ್ಯುತ್ ಕಲ್ಲಿದ್ದಲು ಆಧಾರಿತವಾಗಿಯೇ ಪೂರೈಸಲಾಗುತ್ತಿದೆ.

ಒಟ್ಟಾರೆ, ಇಂಧನ ಪೂರೈಕೆ ಸರಾಗವಾಗಿದ್ದು, ನಾಗರಿಕರು ಗಾಬರಿಯಾಗದೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಇಂಧನ ಖರೀದಿಸುವಂತೆ ಸರ್ಕಾರ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande