ಹನುಮಂತನಗರ ನಾಟಕೋತ್ಸವದಲ್ಲಿ ಡಿಐಜಿಪಿ ದೇವರಾಜ್ ಭಾಗಿ
ಹನುಮಂತನಗರ ನಾಟಕೋತ್ಸವದಲ್ಲಿ ಡಿಐಜಿಪಿ ದೇವರಾಜ್ ಭಾಗಿ
ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ ಚಿಕ್ಕನಹಳ್ಳಿ ವೀರಾಂಜನೇಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ನಡೆದ ನಾಟಕೋತ್ಸವದಲ್ಲಿ ಡಿಐಜಿಪಿ ಡಿ. ದೇವರಾಜ್ ಮಾತನಾಡಿದರು.


ಕೋಲಾರ, ೦೬ ಏಪ್ರಿಲ್ (ಹಿ.ಸ) :

ಆ್ಯಂಕರ್ : ಭಕ್ತಿಯ ಜೊತೆಗೆ ಧೈರ್ಯದ ಸಂಕೇತವಾಗಿ ಪ್ರತಿಯೊಂದು ಹಳ್ಳಿಯಲ್ಲಿ ಹನುಮಂತ ದೇವಾಲಯಗಳಿವೆ. ಶ್ರೀರಾಮನಿಗಿಂತ ಜಾಸ್ತಿ ನಂಬಿಕೆಯನ್ನು ಹನುಮಂತನಲ್ಲಿ ಕಾಣಬಹುದಾಗಿದೆ ಆಂಜನೇಯ ಎಂದರೆ ಭಯಕ್ಕೆ ಧೈರ್ಯಕೊಡುತ್ತದೆ ಎಂಬ ಭಾವನೆಯಲ್ಲಿ ನಿತ್ಯ ಪೂಜೆ ಪುರಸ್ಕಾರ ಮಾಡಿಕೊಂಡು ಬಂದಿದ್ದೇವೆ ಎಂದು ಬೆಂಗಳೂರು ತರಬೇತಿ ವಿಭಾಗದ ಡಿಐಜಿಪಿ ಡಿ.ದೇವರಾಜ್ ತಿಳಿಸಿದರು.

ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಮಜರಾ ಹನುಮಂತನಗರದಲ್ಲಿ ಭಾನುವಾರ ಶ್ರೀ ವೀರಾಂಜನೇಯ ಸ್ವಾಮಿಯ ೪೭ ವರ್ಷದ ಜಾತ್ರಾ ಮಹೋತ್ಸವದ ಭಾಗವಾಗಿ ರಾತ್ರಿ ನಡೆದ ನಾಟಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರುಹನುಮಂತನ ಭಕ್ತಿ, ಶ್ರೀರಾಮನ ಮೇಲಿನ ನಂಬಿಕೆ ಹಾಗೂ ಅಚಲ ಶ್ರದ್ಧೆ ಎಲ್ಲರಿಗೂ ಆದರ್ಶ ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಭಗವಂತನನ್ನು ನಂಬಿ ಮುಂದುವರಿದರೆ ಯಶಸ್ಸು ಸಾಧಿಸಬಹುದು ಕಷ್ಟ ಅಂತ ಬಂದಾಗ ಕಣ್ಣು ಮುಚ್ಚಿ ಸಹಾಯ ಮಾಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳ ಬೇಕು ಎಂದರು.

ಈ ಸಂದರ್ಭದಲ್ಲಿ ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಡಿ.ನಾಗರಾಜಪ್ಪ, ವಕ್ಕಲೇರಿ ಸೊಸೈಟಿ ಅಧ್ಯಕ್ಷ ಎಂ.ಪಾಲಾಕ್ಷಗೌಡ, ಬೆಳಮಾರನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪಾಶ್ವಗಾನಹಳ್ಳಿ ಅಶ್ವಾಥ್ ರಾಮ್, ಬೆಟ್ಟಬೆಣಜೇನಹಳ್ಳಿ ಲೋಕೇಶ್, ವಕ್ಕಲೇರಿ ಮಂಜುನಾಥ್, ನೆರ್ನಹಳ್ಳಿ ಕೋಲಾರಪ್ಪ, ಮುನಿರೆಡ್ಡಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande