
ನವದೆಹಲಿ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಆರಂಭಿಕ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹450ರಿಂದ ₹490ರವರೆಗೆ ಕುಸಿದಿದ್ದು, ಬೆಳ್ಳಿ ಬೆಲೆ ಎರಡು ದಿನಗಳ ಬಳಿಕ ಪ್ರತಿ ಕೆಜಿಗೆ ₹5,000ರಷ್ಟು ಇಳಿಕೆಯಾಗಿದೆ.
ಪ್ರಸ್ತುತ, 24 ಕ್ಯಾರೆಟ್ ಚಿನ್ನದ ಬೆಲೆ ದೇಶದ ವಿವಿಧ ಭಾಗಗಳಲ್ಲಿ 10 ಗ್ರಾಂಗೆ ₹1,50,430ರಿಂದ ₹1,52,180ರ ನಡುವೆ ವಹಿವಾಟು ನಡೆಸುತ್ತಿದೆ. 22 ಕ್ಯಾರೆಟ್ ಚಿನ್ನವು ₹1,37,890ರಿಂದ ₹1,39,490ರ ಮಟ್ಟದಲ್ಲಿ ಮಾರಾಟವಾಗುತ್ತಿದೆ.
ಬೆಳ್ಳಿ ದರವು ದೆಹಲಿಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸುಮಾರು ₹2,54,900ಕ್ಕೆ ತಲುಪಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa