ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ : ಕರ್ನಾಟಕ ಚಾಂಪಿಯನ್
ರಾಯ್ಪುರ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಅದ್ಭುತ ಸಾಧನೆ ತೋರಿಸಿ ಒಟ್ಟಾರೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. 23 ಚಿನ್ನ, 8 ಬೆಳ್ಳಿ ಹಾಗೂ 7 ಕಂಚಿನ ಪದಕಗಳೊಂದಿಗೆ ರಾಜ್ಯವು ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಒಡ
Sports-KITG-Karnataka-Overall-Champion


ರಾಯ್ಪುರ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಅದ್ಭುತ ಸಾಧನೆ ತೋರಿಸಿ ಒಟ್ಟಾರೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. 23 ಚಿನ್ನ, 8 ಬೆಳ್ಳಿ ಹಾಗೂ 7 ಕಂಚಿನ ಪದಕಗಳೊಂದಿಗೆ ರಾಜ್ಯವು ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಒಡಿಶಾ 21 ಚಿನ್ನ, 15 ಬೆಳ್ಳಿ ಮತ್ತು 21 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಜಾರ್ಖಂಡ್ 16 ಚಿನ್ನ, 8 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆತಿಥೇಯ ಛತ್ತಿಸಗಢ 3 ಚಿನ್ನ, 10 ಬೆಳ್ಳಿ ಹಾಗೂ 6 ಕಂಚಿನ ಪದಕಗಳೊಂದಿಗೆ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಕರ್ನಾಟಕ ತಂಡ ಆರಂಭದಿಂದಲೇ ಪದಕಪಟ್ಟಿಯಲ್ಲಿ ಮುನ್ನಡೆ ಸಾಧಿಸಿತು. ವಿಶೇಷವಾಗಿ ಈಜು ವಿಭಾಗದಲ್ಲಿ 15 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆದ್ದು ತಂಡದ ಗೆಲುವಿಗೆ ಬಲವರ್ಧನೆ ನೀಡಿತು. ಅಥ್ಲೆಟಿಕ್ಸ್ನಲ್ಲಿ 5 ಚಿನ್ನ ಮತ್ತು ಕುಸ್ತಿಯಲ್ಲಿ 3 ಚಿನ್ನದ ಪದಕಗಳನ್ನು ಗೆದ್ದಿತು.

ಕರ್ನಾಟಕದ ಮಣಿಕಾಂತ್ ಎಲ್ 8 ಚಿನ್ನ ಮತ್ತು 1 ಬೆಳ್ಳಿ ಪದಕಗಳೊಂದಿಗೆ ಕ್ರೀಡಾಕೂಟದ ಅತ್ಯಂತ ಯಶಸ್ವಿ ಕ್ರೀಡಾಪಟುವಾಗಿದ್ದರೆ, ಧೋನಿಷ್ ಎನ್ 5 ಚಿನ್ನ ಹಾಗೂ 1 ಬೆಳ್ಳಿ ಪದಕಗಳನ್ನು ಗೆದ್ದು ಗಮನಸೆಳೆದರು. ಮಹಿಳಾ ವಿಭಾಗದಲ್ಲಿ ಮೇಘಾಂಜಲಿ 4 ಚಿನ್ನ ಮತ್ತು 2 ಕಂಚಿನ ಪದಕಗಳನ್ನು ಪಡೆದುಕೊಂಡರು.

ಈ ಕ್ರೀಡಾಕೂಟದಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 3,800 ಕ್ರೀಡಾಪಟುಗಳು ಭಾಗವಹಿಸಿದ್ದರು. ಒಟ್ಟು 106 ಚಿನ್ನದ ಪದಕಗಳಿಗಾಗಿ ಸ್ಪರ್ಧೆಗಳು ನಡೆದವು. 25 ರಾಜ್ಯಗಳು ಪದಕಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 20 ರಾಜ್ಯಗಳು ಕನಿಷ್ಠ ಒಂದು ಚಿನ್ನದ ಪದಕ ಗೆದ್ದು ದೇಶಾದ್ಯಂತ ಪ್ರತಿಭೆಯ ವಿಸ್ತಾರವನ್ನು ತೋರಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande