
ಬಳ್ಳಾರಿ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪರಿಶಿಷ್ಟ ಜಾತಿ ಸಮುದಾಯದಲ್ಲಿ ಬಹುಸಂಖ್ಯಾತ, ಅತ್ಯಂತ ಹಿಂದುಳಿದ ಹಾಗು ಸಂವಿದಾನ ಬದ್ಧ್ದ ಮೀಸಲಾತಿ ಸೌಲಭ್ಯಗಳಿಂದಲೂ ವಂಚಿತಗೊಂಡಿರುವ ಮಾದಿಗ ಸಮುದಾಯಕ್ಕೆ ಪ್ರತ್ತೇಕ ಒಳಮೀಸಲಾತಿ ನೀಡಬೇಕು ಎಂದು
ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾಗಿರುವ ಹೆಚ್. ಹನುಮಂತಪ್ಪ ಅವರು ಆಗ್ರಹಿಸಿದ್ದಾರೆ.
ಒಳ ಮೀಸಲಾತಿಯನ್ನು ವಿರೋಧಿಸಿ ಮಾತನಾಡಿರುವ ಅವರು, ಕಳೆದ 30 ವರುಷಗಳಿಂದಲೂ ಹೋರಾಟ ಮಾಡಿರುವ ಮಾದಿಗ ಸಮಾಜಕ್ಕೆ ಶೇ. 6ರಷ್ಟು ಒಳಮೀಸಲಾತಿ ನೀಡಬೇಕೆಂದು ನ್ಯಾಯಮೂರ್ತಿ ಸದಾಶಿವ ಆಯೋಗ, ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಹಾಗು ಮಾಧುಸ್ವಾಮಿ ಸಂಪುಟ ಉಪ ಸಮಿತಿಯು ಶಿಫಾರಸ್ಸು ಮಾಡಿದ್ದರೂ ಮುಖ್ಯಮಂತ್ರಿಗಳು ಕಾಜಿ ಪಂಚಾಯತಿ ರೀತಿಯಲ್ಲಿ ಶೇ. 5.25 ರಂತೆ
ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿರುವುದನ್ನು ಮಾದಿಗ ಸಮುದಾಯವು ಯಾವುದೇ ಕಾರಣಕ್ಕೂ ಒಪ್ಪುವದಿಲ್ಲ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್