
ಬಳ್ಳಾರಿ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ - ಲೇಖಕರೂ ಆಗಿರುವ ಸಿದ್ದರಾಮ ಕಲ್ಮಠ ಅವರ ಸಾಹಿತ್ಯ ಸೇವೆ ಮತ್ತು ಸೌಹಾರ್ದತೆಯ ಸಂದೇಶಕ್ಕಾಗಿ ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯು ಮಂಡ್ಯದಲ್ಲಿ ಅವರನ್ನು ಗೌರವಿಸಿ, ಅಭಿನಂದಿಸಿದೆ.
ಮಂಡ್ಯದ ಗಾಂಧಿಭವನದಲ್ಲಿ ನಡೆದ ‘ಸೌಹಾರ್ದಸಿರಿ ಸಾಧಕರಿಗೆ ಗೌರವ ಸನ್ಮಾನ’ವನ್ನು ಮುಖ್ಯ ಅತಿಥಿಗಳಾದ
ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾಗಿರುವ ಟಿ.ಎ. ನಾರಾಯಣಗೌಡ, ನಿವೃತ್ತ ನ್ಯಾಯಾಧೀಶರಾದ ನಬಿ ರಸೂಲ್ ಮಮದಾಪುರ, ಝಾಕೀರ್ ಹುಸೇನ್ ಉಚ್ಚಿಲ, ಮುಖ್ತಾರ್ ಅಹ್ಮದ್, ಮುಷ್ತಾಕ್ ಹೆನ್ನಾಬೈಲು, ಅನುಪಮ ಮಾಸಪತ್ರಿಕೆಯ ಸಂಪಾದಕಿ ಎಂ. ಶೆಹನಾಜ್, ಅನೀಸ್ ಪಾಷಾ ಸೇರಿ ಗಣ್ಯರು ಅಭಿನಂದಿಸಿದರು.
ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಅವರು ಟೆಲಿಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಮಹಮ್ಮದ್ ಶಫಿ ಮುಲ್ಲಾ ಅವರು ಅಧ್ಯಕ್ಷತೆ ವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್