

ಕೊಪ್ಪಳ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಅನ್ನ, ಅಕ್ಷರ, ಅರಿವು ಆರೋಗ್ಯ, ಆಧ್ಯಾತ್ಮದ ದಾಸೋಹದ ಕ್ಷೇತ್ರ ಶ್ರೀ ಗವಿಮಠ. ತಾವು ಪೂಜಿಸುವ ದೇವಮಂದಿರದಲ್ಲಿ ದೀಪ ಹಚ್ಚುವುದಕ್ಕಿಂತ ದೀಪವೇ ಇಲ್ಲದ ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರ ದೀಪ ಹಚ್ಚುವ ಕಾರ್ಯವೇ ಪೂಜೆ ಎಂದು ಅರಿತವರು ಶ್ರೀ ಮಠದ ಪೂಜ್ಯರು.
ಈ ನಾಡಿನ ಮಕ್ಕಳ ಏಳ್ಗೆಗಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿವುದರ ಜೊತೆಗೆ ಮುಖ್ಯವಾಗಿ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಶ್ರೀ ಗವಿಮಠವು ಆಶ್ರಯ ತಾಣವಾಗಿದೆ. 1951ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಆರಂಭವಾದ ಶ್ರೀ ಗವಿಸಿದ್ದೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯದಲ್ಲಿ ಇಂದು 5000 ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಬೆಳಗಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಗುರುಕುಲ ಕಾಲೇಜು ಸ್ಥಾಪಿಸುವ ಉದ್ಧೇಶ.
ಗ್ರಾಮಿಣ ಮಟ್ಟದಲ್ಲಿ ಉತ್ತಿರ್ಣರಾದ ಪ್ರತಿಭಾವಂತ ವಿದ್ಯಾರ್ಥಿನಿಯರು ಬಡತನ, ಬಸ್ಸಿನ ಪ್ರಯಾಣದ ಅನಾನುಕೂಲ, ನೀಟ್, ಸಿ.ಇ.ಟಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ದುಬಾರಿ ಶುಲ್ಕ ನೀಡಲಾಗದೆ ಅನೇಕ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಬಾರದೆಂದು ಇದನ್ನರಿತ ಶ್ರೀ ಗವಿಮಠವು ಕೊಪ್ಪಳ ನಗರದ 11ಕಿ.ಮೀ ದೂರದಲ್ಲಿ ಕೋಳೂರು-ಕಾಟ್ರಳ್ಳಿ ಸಮೀಪದ 48ಎಕರೆ ಸ್ಥಳದಲ್ಲಿ ಒಟ್ಟು 1500ವಿದ್ಯಾರ್ಥಿನಿಯರಿಗಾಗಿ ಶ್ರೀ ಗವಿಸಿದ್ದೇಶ್ವರ ಗುರುಕುಲ ವಸತಿಯುಕ್ತ ಬಾಲಕಿಯರ ಪದವಿ ಪೂರ್ವ ಕಾಲೇಜ್ ಸಕಲ ಸೌಲಭ್ಯದೊಂದಿಗೆ ಸುಮಾರು 1,53,400ಚದರ ಅಡಿಯಲ್ಲಿ ಗುರುಕುಲದ ಬೃಹತ್ ಕಟ್ಟಡಗಳನ್ನು 60ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಪ್ರಸ್ತುತ ವರ್ಷ (2026-2027)ರಲ್ಲಿ ಕಲಾ 1 ವಿಭಾಗವನ್ನು, ವಿಜ್ಞಾನ 2 ವಿಭಾಗಗಳನ್ನು ಹಾಗೂ (ವಿಜ್ಞಾನ ವಿಷಯದಲ್ಲಿ ಧೀರ್ಘಾವಧಿ) ವಿದ್ಯಾರ್ಥಿಗಳಿಗೆ 2 ವಿಭಾಗಗಳನ್ನು ಪ್ರಾರಂಬಿಸಿ ಈ ವರ್ಷ 600 ಮಕ್ಕಳಿಗೆ ಪ್ರವೇಶಾತಿ ನೀಡಲಾಗುವುದು. ಕಲಾ ವಿದ್ಯಾರ್ಥಿಗಳಿಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಎರಡು ವರ್ಷದಲ್ಲಿ ನೀಡಲಾಗುವುದು. ಹಾಗೆಯೇ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು.
ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿ ತರಬೇತಿ (ಕೋಚಿಂಗ್) ಪಡೆಯಲಿಚ್ಚಿಸುವ ವಿದ್ಯಾರ್ಥಿನಿಯರಿಗೆ ಪ್ರವೇಶ ಪರೀಕ್ಷೆಯ ಮುಖಾಂತರ ಪ್ರವೇಶಾತಿ ನೀಡಲಾಗುವುದು. ವಿದ್ಯಾರ್ಥಿಗಳ ಪ್ರವೇಶ ದಿನಾಂಕದ ಮಾಹಿತಿಯನ್ನು ಶ್ರೀ ಗವಿಸಿದ್ಧೇಶ್ವರ ಗುರುಕುಲ ಮುಖಾಂತರ ತಿಳಿಸಲಾಗುವುದು.
ಇಂತಹ ಮಹತ್ವದ ಕಾರ್ಯವನ್ನು ನೆರವೇರಿಸಲು ಅನೇಕ ಜನ ತಮ್ಮ ಹಣೆಯ ಬೆವರಿನ ಹಣವನ್ನು ಸಾವಿರಾರು ಮಕ್ಕಳ ಹಣೆಬರಹವನ್ನು ಬದಲಿಸಲು ಉದಾರ ಹೃದಯವಂತರು ಹಾಗೂ ನಾಡಿನ ಸಧ್ಭಕ್ತರು ಮುಕ್ತ ಮನಸ್ಸಿನಿಂದ ದಾನಗೈದಿರುವರು. ಅವರ ದಾಸೋಹ ಫಲವೇ ಶ್ರೀ ಗವಿಸಿದ್ಧೇಶ್ವರ ಗುರುಕುಲ ಕಾಲೇಜು ನಿರ್ಮಾಣಗೊಂಡಿದೆ. ಪ್ರಸ್ತುತ ಕಾಲೇಜಿನ ಸುಂದರ ಪರಿಸರ ಸ್ನೇಹಿ ಕಟ್ಟಡವನ್ನು ದಿನಾಂಕ : 03.05.2026 ರವಿವಾರದಂದು ಬೆಳಗ್ಗೆ 10:30ಗಂಟೆಗೆ ದಯಮಾಡಿಸುವ ಪೂಜ್ಯರು, ಭಕ್ತರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ತಮ್ಮೆಲ್ಲರ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜಿನಲ್ಲಿರುವ ಸೌಲಭ್ಯಗಳು
ಪದವಿ ಪೂರ್ವ ಕಾಲೇಜ್ ಕಟ್ಟಡದ ಸೌಲಭ್ಯ (58000 ಚದರ ಅಡಿ ಇದೆ)
1) ಪ್ರಾಚಾರ್ಯರ ಕೊಠಡಿ
2) ಉಪ ಪ್ರಾಚಾರ್ಯರ ಕೊಠಡಿ
3) ಆಡಳಿತ ಮಂಡಳಿ ಕೊಠಡಿ
4) ಸಭಾಂಗಣ ಕೊಠಡಿ
5) 4 ಪ್ರಯೋಗಾಲಯಗಳು (ರಸಯಾನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ಗಣಕಯಂತ್ರ)
6) ಗ್ರಂಥಾಲಯ (ಒಳಾಂಗಣ ಹಾಗೂ ಹೊರಾಂಗಣ ಓದುವ ಸೌಲಭ್ಯ)
7) ಪ್ರತೇಕವಾದ ಪುರುಷರ ಹಾಗೂ ಮಹಿಳಾ ಸಿಬ್ಬಂದಿ ಕೊಠಡಿ
8) 14 ಬೋಧನಾ ಕೊಠಡಿ
9) ಶೌಚಾಲಯಗಳು (ವಿಶೇಷ ಚೇತನರಿಗೆ ಒಳಗೊಂಡತೆ)
10) ಕುಡಿಯುವ ನೀರಿನ ವ್ಯವಸ್ಥೆ
ವಸತಿ ನಿಲಯ (42000 ಚದರ ಅಡಿ ಇದೆ)
1) ಪ್ರತಿ ಅಂತಸ್ತಿನಲ್ಲಿ 8 ಕೊಠಡಿಗಳನ್ನು ಒಳಗೊಂಡ 24 ಡಾರ್ಮಿಟರಿಗಳು
2) ಪ್ರತಿ ಅಂತಸ್ತಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಗನಿಗುಣವಾಗಿ ವಿವಿಧ ಸವಲತ್ತುಗಳು
3) ಪ್ರತಿ ಫ್ಲೊರ್ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ
4) ಪ್ರತಿ ಅಂತಸ್ತುಗೂ ಮೇಲ್ವಿಚಾರಕರ ಕೊಠಡಿ
5) ಪ್ರಾಥಮಿಕ ಚಿಕಿತ್ಸಾ ಕೊಠಡಿ
ಭೋಜನಾಲಯ ಹಾಗೂ ಸಭಾಂಗಣ (55000 ಚದರ ಅಡಿ ಇದೆ)
1) ನಿರ್ವಹಣಾ ಕಛೇರಿ
2) ಸಭಾಂಗಣ
3) ವೇದಿಕೆ
4) 1600 ವಿದ್ಯಾರ್ಥಿನಿಯರ ಏಕಕಾಲಕ್ಕೆ ಪ್ರಸಾದ ಸ್ವೀಕರಿಸುವ ಸಾಮಥ್ಯದ ಊಟದ ಹಾಲ್( ದಾಸೋಹ ಭವನ)
5) ರೊಟ್ಟಿ, ಚಪಾತಿ ಮಾಡುವ ಮಷಿನ್ ಮತ್ತು ಸ್ಟೀಮ್ ಕುಕ್ಕಿಂಗ್ ಮಷಿನ್ ಸೌಲಭ್ಯ ಇರುತ್ತದೆ.
6) ವಿಶಾಲ ಮತ್ತು ಪ್ರತ್ಯೆಕ ಆಧುನಿಕ ಸುವ್ಯವಸ್ಥಿತಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೈ ತೊಳೆಯು ಸ್ಥಳ
7) ಅತ್ಯಾಧುನಿಕ ಅಡುಗೆ ಮನೆ ಸೌಲಭ್ಯ
8) ಪರಿಸರ ಸ್ನೇಹಿ ( ಗಾಳಿ, ಬೆಳಕಿನ ವ್ಯವಸ್ಥೆ) ವಾತಾವರಣ ಹೊಂದಿದೆ.
9) ಜಪಾನಿನ ಮಿಯಾವಾಸಿ ಮಾದರಿ/ಎಚ್ಟಿಪಿ ಮಾದರಿ ನೀರಿನ ಮರುಬಳಕೆ
ಕ್ರಿಡಾಂಗಣ ( 6 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.)
ಆರು ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಕ್ರಿಡಾಂಗಣವನ್ನು ಸಿದ್ಧಗೂಳಿಸಲಾಗಿದೆ.
400ಮೀ ಅಥ್ಲೇಟಿಕ್ ಕ್ರಿಡಾಂಗಣ
ವಾಲಿಬಾಲ್, ಪುಟ್ಬಾಲ್, ಖೋಖೋ ಪಂದ್ಯಗಳ ಕ್ರೀಡಾ ಆವರಣ ನಿರ್ಮಿಸಲಾಗಿದೆ.
ಯೋಗಭ್ಯಾಸ ತರಬೇತಿ
ಗುರುಕುಲ ಆವರಣದಲ್ಲಿ (48 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.)
ಸುಂದರವಾದ ಪರಿಸರ ಸ್ನೇಹಿ ವಾತಾವರಣ.
ಜಪಾನಿನ ಮಿಯುವಾಕಿ ಮಾದರಿಯಲ್ಲಿ ಸುಮಾರು 22000 ಗೀಡಗಳನ್ನು ನೆಡಲಾಗಿದೆ.
ಈ ಮಾದರಿ ಇರುವ ಕಲ್ಯಾಣ ಕರ್ನಾಟಕದ ಮೊದಲ ಮಹಾವಿದ್ಯಾಲಯವಾಗಿದೆ.
ಎಸ್ .ಟಿ .ಪಿ ಮಾರಿಯಲ್ಲಿ ನೀರಿನ ಮರುಬಳಕೆ ಮಾದರಿ ಅಳವಡಿಸಲಾಗಿದೆ.
ಎರಡು ಎಕರೆ ವಿಸ್ತಾರವಾದ ಸುಂದರವಾದ ಕೆರೆಯನ್ನು ನಿರ್ಮಿಸಲಾಗಿದೆ.
ಆವರಣದಲ್ಲಿ ವಿಭಿನ್ನ ಜಾತಿಯ ತೆಂಗು, ಮಹಾಗನಿ, ಚಿಕ್ಕು, ಹಲಸು, ಹೂವಿನ ಸಸಿಗಳನ್ನು ನೆಡಲಾಗಿದೆ.
ನುರಿತ ಉಪನ್ಯಾಸಕರಿಂದ ವಿಷಯವಾರು ಬೋಧನೆ
ವಿಷಯಾದರಿತ ನುರಿತ ಬೋಧಕರಿಂದ ಬೋಧನೆ
ಗ್ರೀನ್ ಮತ್ತು ಡಿಜಿಟಲ್ ಲೈಬ್ರರಿ
ಮಹಾವಿದ್ಯಾಲಯದಲ್ಲಿ ಬೋಧಿಸುವ ವಿಷಯಗಳು
ವಿಜ್ಞಾನ ವಿಭಾಗ
ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಗಣೀತ, ಜೀವಶಾಸ್ತ್ರ
ಕಲಾ ವಿಭಾಗದಲ್ಲಿ
ಇತಿಹಾಸ, ಶಿಕ್ಷಣ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ
ಹೆಚ್ಚಿನ ಮಾಹಿತಿಗಾಗಿ :
ಕಾಲೇಜಿನ ವೆಬ್ಸೈಟ್ www.ssmtgavimathkoppal.org
ಮೊಬೈಲ್ ಸಂಖ್ಯೆ : 9900229660
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್