ಬಳ್ಳಾರಿ ಅಂದ್ರಾಳ್ ಬೈಪಾಸ್ ಬಳಿ ತೆರವು ಕಾರ್ಯಾಚರಣೆ
ಮತ್ತಿತರರು
Evacuation near Andral Bypass


Evacuation near Andral Bypass


ಬಳ್ಳಾರಿ, 22 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾಡಳಿತವು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಬುಧವಾರ ಅಂದ್ರಾಳ್ ಬೈಪಾಸ್ ರಸ್ತೆಯ ಸಮೀಪ ಕಾರ್ಯಾಚರಣೆ ನಡೆಸಿತು.

ಅಂದ್ರಾಳ್ ಗ್ರಾಮದ ಸರ್ವೇ ನಂಬರ್ (01) ಒಂದರಲ್ಲಿ 3 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸಿಮೆಂಟ್ ಕಟ್ಟಡಗಳು ಮತ್ತು ಇತರ ನಿರ್ಮಾಣಗಳನ್ನು ಜಿಲ್ಲಾಡಳಿತವು ಜೆಸಿಬಿ ಯಂತ್ರಗಳ ಸಹಾಯದಿಂದ ತೆರವುಗೊಳಿಸಿದೆ.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್. ಅವರು, ಜಿಲ್ಲಾಡಳಿತದ ಈ ದಿಟ್ಟ ಕ್ರಮವು ಸರ್ಕಾರಿ ಆಸ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದು, ಈ ಒತ್ತುವರಿಯ ಹಿಂದೆ ಯಾರೇ ಇದ್ದರೂ ಮತ್ತು ಯಾರು ಪ್ರಚೋದನೆ ನೀಡುತ್ತಿದ್ದರೂ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದರೆ ಅಥವಾ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಡಿಡಿಎಲ್ಆರ್ ಪ್ರಮೋದ್ ಸೇರಿದಂತೆ ಬಳ್ಳಾರಿ ತಾಲ್ಲೂಕು ತಹಸೀಲ್ದಾರ ಕಚೇರಿಯ ಅಧಿಕಾರಿ- ಸಿಬ್ಬಂದಿ ಹಾಗೂ ಮತ್ತಿತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande