ಬಿಜೆಪಿ ಮುಖಂಡ ಎಂ. ಪಂಪಾಪತಿ ಶೆಟ್ಟಿ ನಿಧನ
ಸಿರುಗುಪ್ಪ, 22 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅಖಂಢ ಬಳ್ಳಾರಿ ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದ ಸಿರುಗುಪ್ಪ ನಿವಾಸಿ ಮುಳ್ಳೂರು ಪಂಪಾಪತಿ ಶೆಟ್ಟಿ (88) ಅವರು ಬುಧವಾರ ಮೃತಪಟ್ಟಿದ್ದು, ಮೃತರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ 10 ಗಂಟೆಯ ಒಳಗಾಗಿ ತುಂಗಭದ್ರಾ ನದಿ ತೀರದಲ್ಲಿರುವ ಹರಿಶ್
ಸಿರುಗುಪ್ಪ,


ಸಿರುಗುಪ್ಪ, 22 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅಖಂಢ ಬಳ್ಳಾರಿ ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದ ಸಿರುಗುಪ್ಪ ನಿವಾಸಿ ಮುಳ್ಳೂರು ಪಂಪಾಪತಿ ಶೆಟ್ಟಿ (88) ಅವರು ಬುಧವಾರ ಮೃತಪಟ್ಟಿದ್ದು, ಮೃತರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ 10 ಗಂಟೆಯ ಒಳಗಾಗಿ ತುಂಗಭದ್ರಾ ನದಿ ತೀರದಲ್ಲಿರುವ ಹರಿಶ್ಚಂದ್ರಘಾಟ್ನಲ್ಲಿ ನೆರವೇರಲಿದೆ.

ಮೃತರು ಮೂವರು ಗಂಡು ಮಕ್ಕಳು, ಒಬ್ಬ ಪುತ್ರಿ, ಸೊಸೆಯಂದಿರರು - ಅಳಿಯ ಮತ್ತು ಮೊಮ್ಮಕ್ಕಳನ್ನು, ಆಪ್ತರನ್ನು - ಅಭಿಮಾನಿಗಳನ್ನು ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ.

25 ವರ್ಷಗಳ ಕಾಲ ಬಿಜೆಪಿಯಲ್ಲಿ ಶ್ರಮಿಸಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯ ಬೇರುಗಳನ್ನು ಗಟ್ಟಿಯಾಗಿ ಬೇರೂರಿಸುವಲ್ಲಿ ಹಗಲಿರುಳು ಶ್ರಮಿಸಿದ್ದರು.

ವಿವರಗಳಿಗಾಗಿ ಮಂಜುನಾಥ್ ಶೆಟ್ಟಿ, ಪುತ್ರ ; 7019800811 ಗೆ ಸಂಪರ್ಕಿಸಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande