

ಬೆಂಗಳೂರು, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ಮೈಸಾ ಚಿತ್ರಕ್ಕಾಗಿ ಬ್ಯಾಂಕಾಕ್ ನಲ್ಲಿ ಕಠಿಣ ಹ್ಯಾಂಡ್-ಟು-ಹ್ಯಾಂಡ್ ಕಂಬಾಟ್ ತರಬೇತಿ ಪಡೆಯುತ್ತಿದ್ದಾರೆ.
ಚಿತ್ರದಲ್ಲಿ ವಿಭಿನ್ನ ಹಾಗೂ ಆಕ್ಷನ್ ಪ್ಯಾಕ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಶ್ಮಿಕಾ, ಪ್ರತಿದಿನ ಸುಮಾರು 8 ಗಂಟೆಗಳ ಕಾಲ ತರಬೇತಿ ಪಡೆಯುತ್ತಿರುವ ಚಿತ್ರಗಳು ಬಿಡುಗಡೆಯಾಗಿವೆ. ಈ ತರಬೇತಿಯಲ್ಲಿ ಯುದ್ಧ ಕೌಶಲ್ಯ, ಫಿಟ್ನೆಸ್ ಹಾಗೂ ಆಕ್ಷನ್ ದೃಶ್ಯಗಳಿಗೆ ಅಗತ್ಯವಾದ ತಂತ್ರಗಳನ್ನು ಅಭ್ಯಾಸ ಮಾಡಲಾಗುತ್ತಿದೆ.
ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಈ ತರಬೇತಿ ಮೂಲಕ ರಶ್ಮಿಕಾ ತಮ್ಮ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಚಿತ್ರದ ಆಕ್ಷನ್ ದೃಶ್ಯಗಳು ಹಾಗೂ ರಶ್ಮಿಕಾ ಅವರ ಹೊಸ ಲುಕ್ ದೊಡ್ಡ ಪರದೆಯ ಮೇಲೆ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa