ಮೇ 3ರಂದು ‘ನಾ ಕಂಡ ಕನ್ನಡ ಮೌಲ್ವಿ’ ಅಭಿನಂದನಾ ಗ್ರಂಥ ಬಿಡುಗಡೆ
ಹುಬ್ಬಳ್ಳಿ, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮಾಸ್ತಿ ಪ್ರಕಾಶನ ವತಿಯಿಂದ ಸಾಹಿತಿ ಹಾಗೂ ಸಮಾಜ ಸೇವಕರಾದ ನವೀದ್ ಮುಲ್ಲಾ ಅವರ ಕುರಿತ ‘ನಾ ಕಂಡ ಕನ್ನಡ ಮೌಲ್ವಿ’ ಅಭಿನಂದನಾ ಗ್ರಂಥವನ್ನು ಮೇ 3ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಗ್ರಂಥವನ್ನು ಮಾಸ್ತಿ ಬಾಬ
Book


ಹುಬ್ಬಳ್ಳಿ, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮಾಸ್ತಿ ಪ್ರಕಾಶನ ವತಿಯಿಂದ ಸಾಹಿತಿ ಹಾಗೂ ಸಮಾಜ ಸೇವಕರಾದ ನವೀದ್ ಮುಲ್ಲಾ ಅವರ ಕುರಿತ ‘ನಾ ಕಂಡ ಕನ್ನಡ ಮೌಲ್ವಿ’ ಅಭಿನಂದನಾ ಗ್ರಂಥವನ್ನು ಮೇ 3ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಈ ಗ್ರಂಥವನ್ನು ಮಾಸ್ತಿ ಬಾಬು ಎಂ. ಅವರು ರಚಿಸಿದ್ದು, ನವೀದ್ ಮುಲ್ಲಾ ಅವರ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನದಿಂದ ಈ ಕೃತಿ ಹೊರತರುತ್ತಿರುವುದಾಗಿ ತಿಳಿಸಲಾಗಿದೆ.

‘ನಾ ಕಂಡ ಕನ್ನಡ ಮೌಲ್ವಿ’ ಕೃತಿ ನೈಜ ಘಟನೆಯಾಧಾರಿತ ವ್ಯಕ್ತಿ ಚಿತ್ರಣವಾಗಿದ್ದು, ಸಾಹಿತ್ಯಾಸಕ್ತರು, ಶಿಕ್ಷಕರು, ಕವಿಗಳು, ಲೇಖಕರು ಸೇರಿದಂತೆ ಎಲ್ಲ ವರ್ಗದ ಓದುಗರೂ ಈ ಪುಸ್ತಕವನ್ನು ಪಡೆದು ಓದುವ ಮೂಲಕ ಪ್ರೋತ್ಸಾಹಿಸಬೇಕು ಎಂದು ನವೀದ್ ಮುಲ್ಲಾ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande