ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ಮಾಡಿಲ್ಲ : ಪ್ರಯೋಗಾಲಯ ಸಿಬ್ಬಂದಿ ಸ್ಪಷ್ಟನೆ
ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ಮಾಡಿಲ್ಲ : ಪ್ರಯೋಗಾಲಯ ಸಿಬ್ಬಂದಿ ಸ್ಪಷ್ಟನೆ
ರಾಘವೇಂದ್ರ .ಬಿ


ಕೋಲಾರ, ೧೬ ಏಪ್ರಿಲ್ (ಹಿ.ಸ) :

ಆ್ಯಂಕರ್ : ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ಮಾಡಲಾಗಿದೆ ಎಂದು ತಮ್ಮ ಮೇಲೆ ಹೊರೆಸಿರುವ ಬಹುದೊಡ್ಡ ಆರೋಪ ಸತ್ಯಕ್ಕೆ ದೂರವಾದದ್ದು ತಾವು ಯಾವುದೇ ರೀತಿಯಲ್ಲಿ ಆಸ್ಪತ್ರೆಯ ರಕ್ತ ಪರೀಕ್ಷಾ ಕೇಂದ್ರದಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ನಡೆಸಿಲ್ಲ ಎಂದು ಕೋಲಾರ ಜಿಲ್ಲಾಸ್ಪತ್ರೆಯ ರಕ್ತ ಪರೀಕ್ಷೆ ಕೇಂದ್ರದ ಎನ್.ಹೆಚ್.ಎಂ ಸಿಬ್ಬಂದಿ ಮಾಜಿ ರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ತಾವು ರಕ್ತ ಪರೀಕ್ಷಾ ಕೇಂದ್ರದಲ್ಲಿ ಕಳೆದ ಮೂರು ತಿಂಗಳ ಹಿಂದೆ ಕೆಲಸ ನಿರ್ವಹಿಸಿದ್ದೆ. ಪ್ರಸ್ತುತ ಆಸ್ಪತ್ರೆ ಆವರಣದ ಟಿಬಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ೮ ವರ್ಷಗಳಿಂದ ತಮ್ಮ ವಿರುದ್ಧ ಯಾವುದೇ ಆರೋಪವಿಲ್ಲ. ಕರ್ತವ್ಯ ನಿಷ್ಠೆಯಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದು ಕಳೆದ ೨೦೨೩ರ ನಂತರ ತಾವು ಸ್ನೇಹಿತರೊಟ್ಟಿಗೆ ಜೊತೆ ಗೂಡಿ ಖಾಸಗಿ ಲ್ಯಾಬ್ ಸಹಕಾರದೊಂದಿಗೆ ರಕ್ತ ಪರೀಕ್ಷಾ ಯಂತ್ರ ಖರೀದಿಸಿದ್ದೆವು. ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಆ ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷೆಗೆ ಒಳ ಪಡುವ ರಕ್ತದ ಪರೀಕ್ಷಾ ವರದಿಯನ್ನು ತಮ್ಮ ಸ್ನೇಹಿತರು ವಾಟ್ಸಪ್ ಮೂಲಕ ಕಳುಹಿಸುತ್ತಿದ್ದರು. ಅದನ್ನು ವರದಿ ರೂಪದಲ್ಲಿ ಆಸ್ಪತ್ರೆಯ ಕಂಪ್ಯೂಟರ್ನಲ್ಲಿ ವಿವರವಾಗಿ ತಯಾರಿಸಿ ಪುನಃ ವಾಟ್ಸ್ ಆಫ್ ಮೂಲಕ ಕಳುಹಿಸುತ್ತಿದ್ದೆ ವಿನಃ ತಾವು ಯಾವುದೇ ರೀತಿಯ ಪ್ರಾಣಿಗಳ ರಕ್ತ ಪರೀಕ್ಷೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ತಮ್ಮ ಕರ್ತವ್ಯ ಹಾಗೂ ರಕ್ತ ಪರೀಕ್ಷಾ ಕೇಂದ್ರದ ಯಂತ್ರವನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಡಿಲ್ಲ, ಈ ಕುರಿತು ತಮ್ಮ ಮೇಲೆ ನಡೆದ ವಿಚಾರಣೆಯಲ್ಲೂ ಸ್ಪಷ್ಟಪಡಿಸಲಾಗಿದೆ. ಆದರೂ ತಮ್ಮ ಮೇಲೆ ಇಷ್ಟೊಂದು ಗಂಭೀರ ಆರೋಪ ಹೊರೆಸಿರುವುದು ದುರಾದೃಷ್ಟಕರ ಎಂದಿರುವ ರಾಘವೇಂದ್ರ. ರಕ್ತ ಪರೀಕ್ಷಾ ಕೇಂದ್ರದ ಯಂತ್ರದಲ್ಲಿ ರಕ್ತ ಪರೀಕ್ಷೆ ನಡೆಸಿರುವ ಇತಿಹಾಸವಿರುತ್ತದೆ. ಅದನ್ನು ಡಿಲಿಟ್ ಮಾಡಲಾಗದು ಅದನ್ನು ಸೂಕ್ತ ತಂತ್ರಜ್ಞಾನದಿAದ ಬೇಕಿದ್ದಲ್ಲಿ ತನಿಖೆಗೆ ಒಳಪಡಿಸಲಿ ತಾವು ಸಿದ್ದವಿದ್ದು ವಿನಾಕಾರಣ ತಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗಿದೆ ಎಂದಿದ್ದಾರೆ.

ಪ್ರಾಣಿ ಹಾಗೂ ಮನುಷ್ಯನ ರಕ್ತ ಪರೀಕ್ಷೆ ಹಾಗೂ ಇತರೇ ಸ್ಕಾö್ಯನಿಂಗ್ಗಳಿಗೆ ಬೇರೆ ಬೇರೆ ರೀತಿಯ ಯಂತ್ರಗಳನ್ನು ಬಳಸುವುದಿಲ್ಲ. ಎಲ್ಲಾದಕ್ಕೂ ಒಂದೇ ರೀತಿಯ ಯಂತ್ರವನ್ನು ಬೇರೆ ಬೇರೆ ಸಮಯದಲ್ಲಿ ಬಳಕೆ ಮಾಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಪರಿಣಾಮ ಬೀರಲಾಗುವುದಿಲ್ಲ ಎಂದು ತಿಳಿದ ಮೇಲೆಯೇ ಖಾಸಗಿ ಲ್ಯಾಬ್ ನಲ್ಲಿ ನಡೆಸಲಾಗುತ್ತಿದ್ದ ಪರೀಕ್ಷೆಯ ವರದಿಯನ್ನು ತಮಗೆ ಕಳುಹಿಸಿದ ಮೇಲೆ ಅದರ ಸವಿಸ್ತಾರ ವಿವರವನ್ನು ಕಂಪ್ಯೂಟರ್ನಲ್ಲಿ ತಯಾರಿಸಿ ಅದನ್ನು ವಾಟ್ಸ್ ಆಫ್ ಮೂಲಕ ನೀಡಲಾಗುತ್ತಿತ್ತು ಎಂದು ವಿವರಿಸಿದ್ದಾರೆ.

ತಾವು ಎನ್.ಹೆಚ್.ಎಂ.ಎಸ್ ಸಿಬ್ಬಂದಿ ಆಗಿದ್ದು, ತಮ್ಮ ವಿರುದ್ಧ ಆಸ್ಪತ್ರೆಯ ಕೆಲ ಖಾಯಂ ಸಿಬ್ಬಂದಿಗಳು ಉದ್ದೇಶ ಪೂರ್ವಕವಾಗಿ ತಮ್ಮ ಕೆಲಸಕ್ಕೆ ತೊಂದರೆ ನೀಡುವ ಉದ್ದೇಶದಿಂದ ತಮ್ಮ ಮೇಲೆ ಗೂಬೆ ಕೂರಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಪರೀಕ್ಷಾ ಕೇಂದ್ರದಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ನಡೆಸಲಾಗಿದೆ ಎಂದು ತಮ್ಮ ಮೇಲೆ ಹೊರೆಸಿರುವ ಆರೋಪ ಸುಳ್ಳಾಗಿದ್ದು ತಾವು ಯಾವುದೇ ರೀತಿಯಲ್ಲಿಯೂ ಈ ಕೃತ್ಯವೆಸಗಿಲ್ಲ. ತಮ್ಮ ಮೇಲೆ ಹೊರೆಸಲಾಗಿರುವ ಆರೋಪಕ್ಕೂ ತಮಗೂ ಯಾವುದೇ ಸಂಬAಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande