
ನವದೆಹಲಿ, 05 ಮಾರ್ಚ್ (ಹಿ.ಸ.):
ಆ್ಯಂಕರ್:
ದೇಶೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ಆರಂಭಿಕ ವಹಿವಾಟು ಏರಿಕೆಯ ಸ್ವರೂಪ ತೋರಿಸಿತು. ವಹಿವಾಟು ಬಲದಿಂದ ಆರಂಭವಾದರೂ, ಕೆಲವೇ ನಿಮಿಷಗಳಲ್ಲಿ ಲಾಭದ ಬುಕಿಂಗ್ ಹಾಗೂ ಮಾರಾಟದ ಒತ್ತಡದಿಂದ ಸೂಚ್ಯಂಕಗಳಲ್ಲಿ ಅಲ್ಪ ಕುಸಿತ ಕಂಡುಬಂತು. ಆದರೆ ಕೆಂಪು ವಲಯ ತಲುಪುವ ಮುನ್ನವೇ ಖರೀದಿ ಬೆಂಬಲ ಮತ್ತೆ ಹೆಚ್ಚಾಗಿ, ಮಾರುಕಟ್ಟೆ ಚೇತರಿಕೆಯ ಹಾದಿ ಹಿಡಿದಿತು.
ವಹಿವಾಟಿನ ಮೊದಲ ಒಂದು ಗಂಟೆಯ ಬಳಿಕ, ಬಿ ಎಸ್ ಸಿ ಸೂಚ್ಯಂಕ ಶೇಕಡಾ 0.45ರಷ್ಟು ಹಾಗೂ ನಿಪ್ಟಿ 50 ಶೇಕಡಾ 0.50ರಷ್ಟು ಏರಿಕೆಯಲ್ಲಿ ವಹಿವಾಟು ನಡೆಸುತ್ತಿದ್ದವು.
ಪ್ರಮುಖ ಷೇರುಗಳಾದ ಹಿಂಡಾಲ್ಕೊ ಇಂಡಸ್ಟ್ರೀಸ್, ಕೋಲ್ ಇಂಡಿಯಾ, ಒಎನ್‌ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಎನ್‌ಟಿಪಿಸಿ ಮೊದಲ ಗಂಟೆಯಲ್ಲೇ ಶೇ. 3.72ರಿಂದ ಶೇ. 2.39ರಷ್ಟು ಲಾಭ ದಾಖಲಿಸಿದವು. ಮತ್ತೊಂದೆಡೆ, ಅದಾನಿ ಎಂಟರ್‌ಪ್ರೈಸಸ್, ಮ್ಯಾಕ್ಸ್ ಹೆಲ್ತ್‌ಕೇರ್, ಎಚ್‌ಡಿಎಫ್‌ಸಿ ಲೈಫ್, ಎಚ್‌ಸಿಎಲ್ ಟೆಕ್ನಾಲಜೀಸ್ ಹಾಗೂ ಎಟರ್ನಲ್ ಲಿಮಿಟೆಡ್ ಶೇ. 1.03ರಿಂದ ಶೇ. 0.65ರಷ್ಟು ನಷ್ಟ ಅನುಭವಿಸಿದವು.
ಒಟ್ಟು 2,724 ಷೇರುಗಳಲ್ಲಿ ಸಕ್ರಿಯ ವಹಿವಾಟು ನಡೆದಿದ್ದು, ಅವುಗಳಲ್ಲಿ 1,940 ಷೇರುಗಳು ಹಸಿರು ವಲಯದಲ್ಲಿ ಮತ್ತು 784 ಷೇರುಗಳು ಕೆಂಪು ವಲಯದಲ್ಲಿ ವಹಿವಾಟು ನಡೆಸುತ್ತಿದ್ದವು. ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 18 ಷೇರುಗಳು ಏರಿಕೆಯಲ್ಲಿ ಉಳಿದರೆ, 12 ಷೇರುಗಳು ಕುಸಿತ ಕಂಡವು. ನಿಫ್ಟಿಯ 50 ಷೇರುಗಳಲ್ಲಿ 29 ಷೇರುಗಳು ಲಾಭದಲ್ಲಿದ್ದು, 21 ಷೇರುಗಳು ನಷ್ಟದಲ್ಲಿದ್ದವು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa