
ವಿಜಯಪುರ, 05 ಮಾರ್ಚ್ (ಹಿ.ಸ.)
ಆ್ಯಂಕರ್ : ಶ್ರೀಶೈಲ ಪಾದಯಾತ್ರಾರ್ಥಿಗಳಿಗೆ ಹಣ್ಣು,ಮಜ್ಜಿಗೆ ಉಪಹಾರ ನೀಡುವ ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಬಾಗಲಕೋಟೆ ಎಸ್ ಪಿ ದಂಪತಿಗಳು ಮಿಂದೆದ್ದರು.
ಹೌದು, ಪ್ರತಿ ವರ್ಷ ಶ್ರೀಶೈಲಕ್ಕೆ ಭಕ್ತರು ಪಾದಯಾತ್ರೆ ಹೊಗುವುದು ವಾಡಿಕೆ. ಆದರೆ ಈ ಬಾರಿ ಪಾದಯಾತ್ರೆಗೆ ಹೊಗುವ ಭಕ್ತರ ಸೇವೆಗೆ ಎಸ್ ಪಿ ದಂಪತಿ ಮುಂದಾಗಿದ್ದು ವಿಶೇಷ. ಮಗುವಿನ ಸಮೇತ ಹೆದ್ದಾರಿ ಬಳಿ ನಿಂತು, ಪಾದಯಾತ್ರಾರ್ಥಿಗಳಿಗೆ ಉಪಹಾರ,ಹಣ್ಣು ,ಮಜ್ಜಿಗೆ ನೀಡಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಹಾಗೂ ಪತ್ನಿ
ಬಾಗಲಕೋಟೆ ಹಮಾಲರ ಕಾಲೋನಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ತಮ್ಮ ಸೇವೆ ಸಲ್ಲಿಸಿದ್ದು ಮೆಚ್ಚುಗೆ ಪಾತ್ರವಾಗಿದೆ.
ಶ್ರೀಶೈಲ ಪಾದಯಾತ್ರಾರ್ತಿಗಳಿಗೆ ಹಣ್ಣು ಹಂಪಲು ಉಪಹಾರ ವಿತರಣೆ, ಪಾದಯಾತ್ರಾರ್ಥಿಗಳಿಗೆ ಹಣ್ಣು, ಮಜ್ಜಿಗೆ ನೀಡಿದರು. ಶ್ರೀಶೈಲ ಮಲ್ಲಿಕಾರ್ಜುನನ ಮೇಲೆ ಭಕ್ತಿ ಮೆರೆದ ಎಸ್ ಪಿ ಹಾಗೂ ಪತ್ನಿ ,ಮಗುವಿನ ಸೇವೆಗೆ ಭಕ್ತರು ಹಾಗೂ ಜನ ಮೆಚ್ಚುಗೆ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande