ಸಚಿವ ಎಚ್ ಕೆ ಪಾಟೀಲರಿಂದ ಜನಾದೇಶಕ್ಕೆ ಅಪಚಾರ: ಲಿಂಗರಾಜ ಪಾಟೀಲ
ಗದಗ, 05 ಮಾರ್ಚ್ (ಹಿ.ಸ.) ಆ್ಯಂಕರ್:ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಗದಗ ಬೆಟಗೇರಿ ನಗರಸಭೆ ಚುನಾವಣೆ ನಡೆಸಿದ ಬಗ್ಗೆ ಜಿಲ್ಲಾ ಆಡಳಿತ ತಪ್ಪೊಪ್ಪಿಗೆ ಪತ್ರ ನೀಡಿ ಹೈಕೋರ್ಟ್ ನಲ್ಲಿ ಬಚಾವ್ ಆಗಿರಬಹುದು ಆದರೆ ಜಿಲ್ಲಾಡಳಿತ ದುರ್ಭಳಕೆ ಮಾಡಿಕೊಂಡು ಅಧಿಕಾರಕ್ಕಾಗಿ ಜನಾದೇಶವನ್ನೇ ಬಲಿಕೊಟ್ಟ ಜಿಲ್ಲಾ ಉಸ್ತು
ಫೋಟೋ


ಗದಗ, 05 ಮಾರ್ಚ್ (ಹಿ.ಸ.)

ಆ್ಯಂಕರ್:ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಗದಗ ಬೆಟಗೇರಿ ನಗರಸಭೆ ಚುನಾವಣೆ ನಡೆಸಿದ ಬಗ್ಗೆ ಜಿಲ್ಲಾ ಆಡಳಿತ ತಪ್ಪೊಪ್ಪಿಗೆ ಪತ್ರ ನೀಡಿ ಹೈಕೋರ್ಟ್ ನಲ್ಲಿ ಬಚಾವ್ ಆಗಿರಬಹುದು ಆದರೆ ಜಿಲ್ಲಾಡಳಿತ ದುರ್ಭಳಕೆ ಮಾಡಿಕೊಂಡು ಅಧಿಕಾರಕ್ಕಾಗಿ ಜನಾದೇಶವನ್ನೇ ಬಲಿಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲರು ಅವಳಿ ನಗರದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಅವರು ಆಗ್ರಹಿಸಿದ್ದಾರೆ.

ಅಂದು ಚುನಾವಣೆ ನಡೆಯುವ ಪ್ರಕ್ರಿಯೆ ಇನ್ನು ಪೂರ್ಣಗೊಳ್ಳುವ ಮುನ್ನವೇ ತಡೆಯಾಜ್ಞೆ ಆದೇಶ ನೀಡಿದ ಧಾರವಾಡ ಹೈಕೋರ್ಟ್ ನ್ಯಾಯಾದೀಶರು ಅಡ್ವಕೇಟ್ ಜನರಲ್ ಅವರಿಗೆ ಈ ಕೂಡಲೇ ಜಿಲ್ಲಾಧಿಕಾರಿಗೆ ವಿಷಯ ತಲುಪಿಸಿ ಚುನಾವಣೆ ತಡೆಹಿಡಿಯಲು ಹೇಳಿದ್ದುoಟು,ವಿಚಾರಣೆ ಸಭಾಂಗಣದಿಂದಲೇ ಸಂಪರ್ಕ ಸಾಧಿಸಿ ಜಿಲ್ಲಾಡಳಿತಕ್ಕೆ ಆದೇಶದ ವಿಷಯ ತಲುಪಿಸಿದ ಬಗ್ಗೆ ಮರಳಿ ಅಡ್ವಕೇಟ್ ಜನರಲ್ ಅವರು ನ್ಯಾಯಾದೀಶರಿಗೆ ಸ್ಪಷ್ಟಿಕರಣ ತಿಳಿಸಿದ್ದು ಆಯ್ತು, ಆದರೆ ಜಿಲ್ಲಾಡಳಿತ ನಗರಸಭೆ ಆವರಣಕ್ಕೆ ಆ ಕೂಡಲೇ ಬರಲೇ ಇಲ್ಲ,ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಸಿಸಿ ಪಾಟೀಲ ಅವರು ಜಿಲ್ಲಾಧಿಕಾರಿಗೆ ಫೋನ್ ಮಾಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದೀರಿ ಇದರ ಪರಿಣಾಮವನ್ನ ತಾವು ಎದರಿಸಬೇಕಾಗುತ್ತದೆ ಎಂದು ಹೇಳಿದ ಮೇಲೆ ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದರು.

ನಗರಸಭೆ ಆವರಣದ ಗೇಟು, ಕಟ್ಟಡದ ಬಾಗಿಲು ಕಿಡಕಿ ಅಷ್ಟೇ ಅಲ್ಲದೆ ಸಂಪರ್ಕ್ ಸಾಧನವಾದ ಸ್ಥಿರ ದೂರವಾಣಿ, ಮೊಬೈಲ್, ಪ್ಯಾಕ್ಸ್ ಎಲ್ಲವನ್ನು ಬಂದ ಮಾಡಿಕೊಂಡು ಪೊಲೀಸರ ಸರ್ಪಗಾವಲು ರಚಿಸಿಕೊಂಡ ಚುನಾವಣಾಧಿಕಾರಿ ಆದ ಉಪ ವಿಭಾಗಾಧಿಕಾರಿ ಹೈಕೋರ್ಟ್ ಆದೇಶ ತಂದ ಅಪರ ಜಿಲ್ಲಾಧಿಕಾರಿಯನ್ನೇ ಒಳ ಬಿಟ್ಟುಕೊಳ್ಳದೆ ಚುನಾವಣೆ ನಡೆಸುತ್ತಾರೆ ಅಂದರೆ ಅದರ ಹಿಂದಿನ ಶಕ್ತಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಅಂದರೆ ತಪ್ಪಾಗಲಾರದು.

ಈ ಹಿಂದೆ 2007-12 ರ ಅವಧಿಯಲ್ಲಿ ಬಿಜೆಪಿ 20, ಜೆಡಿಎಸ್ 02 ಸ್ಥಾನಗಳನ್ನ ಪಡೆದು ಸ್ಪಷ್ಟ ಬಹುಮತದಿಂದ ಅಧಿಕಾರ ಮಾಡುತ್ತಿದಾಗ, ಕೇವಲ 13 ಸ್ಥಾನಗಳನ್ನ ಹೊಂದಿರುವ ಕಾಂಗ್ರೆಸ್ ಪಕ್ಷ ನಂತರದ 30 ತಿಂಗಳು ಅವಧಿಗೆ ನಮ್ಮ ಪಕ್ಷದ 7 ಸದಸ್ಯರನ್ನು ಆಮಿಷದಿಂದ ಪಕ್ಷಾoತರ ಮಾಡಿಸಿಕೊಂಡು ಅಧಿಕಾರ ಕಿತ್ತುಕೊಂಡಿತು. ಹೀಗೆ ಅಧಿಕಾರ ಪಡೆದ ಕಾಂಗ್ರೆಸ್ ನೇತೃತ್ವದ ಆಡಳಿತ ಮಂಡಳಿಯು ಗದಗ ನಗರ ಹೃದಯ ಭಾಗದಲ್ಲಿರುವ 54 ವಕಾರ ಸಾಲ್ ಸೈಟ್ಗಳನ್ನು ಅಲ್ಲಿದ್ದ ಬಾಡಿಗೆದಾರರಿಗೆ 50/50 ರ ಅನುಪಾತದಲ್ಲಿ ಖರೀದಿಗೆ ಕೊಡಲು ಠರಾವ್ ಪಾಸ್ ಮಾಡಿತ್ತು.ಆದರೆ ಸರ್ಕಾರದ ಹಂತದಲ್ಲಿ ಒಪ್ಪಿಗೆ ಸಿಗದಕಾರಣಕ್ಕೆ ಅಲ್ಲಿಗೆ ನಿಂತಿತು.

ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅವರು ಬೆಂಬಲಿಸಲಿಲ್ಲ ಎಂಬ ರಾಜಕೀಯ ಕಾರಣಕ್ಕಾಗಿ ವಕಾರ ಸಾಲ ಕಟ್ಟಡಗಳನ್ನ ಜಿಲ್ಲಾಡಳಿತ ಉಪಯೋಗಿಸಿಕೊಂಡು ತೆರುವುಗೊಳಿಸಲಾಯಿತು. ಇದರ ವಿರುದ್ಧ ವಕಾರ ಸಾಲ ಅನುಭೋಗದಾರರು ಸದರಿ ಅನ್ಯಾಯದ ವಿರುದ್ಧ ಹೈಕೋರ್ಟ್ ಹೋಗಿದ್ದರಿಂದ 99 ವರ್ಷ ಲೀಜ್ ಆಧಾರದಲ್ಲಿ ಇದ್ದ ಅನುಭೋಗದಾರರು ಅರ್ಜಿ ಸಲ್ಲಿಸಿದಲ್ಲಿ ಯೋಗ್ಯ ನಿರ್ಣಯವನ್ನ ನಗರಸಭೆ ತಗೆದುಕೊಳ್ಳಬಹುದು ಅಂತ ಹೈಕೋರ್ಟ್ ದ್ವಿಸದಸ್ಯ ಪೀಠ ಆದೇಶ ನೀಡಿತ್ತು.

ಅದರ ಹಿನ್ನೆಲೆಯಲ್ಲಿ ಈಗಿರುವ ನಗರಸಭೆ ಆಡಳಿತ ಮಂಡಳಿ ಮೊದಲು ಇದ್ದದುಕಿಂತ 10 ಪಟ್ಟು ಬಾಡಿಗೆ ಹೆಚ್ಚಿಸಿ 5 ವರ್ಷದ ಲೀಜ್ ಅವಧಿಯನ್ನ ನವೀಕರಿಸಲು ಠರಾವ್ ಪಾಸ್ ಮಾಡಿದರೆ ಅದರಲ್ಲಿಯ ತಾಂತ್ರಿಕ ಅಂಶಗಳನ್ನೇ ಮುಂದಿಟ್ಟುಕೊಂಡು ಜನರಿಂದ ಆಯ್ಕೆಯಾದವರ ಸದಸ್ಯತ್ವನ್ನ ರದ್ದುಗೊಳಿಸುವ ಹಂತಕ್ಕೆ ಹೋಗಿ ಅಧಿಕಾರ ಕಿತ್ತುಕೊಳ್ಳುವ ಕೀಳು ಮಟ್ಟದ ರಾಜಕೀಯವನ್ನ ಕಾಂಗ್ರೆಸ್ ಮಾಡಬಾರದಿತ್ತು.

ಅಧಿಕಾರ ಜನರ ಆಶೀರ್ವಾದದಿಂದ ಪಡೆದುಕೊಳ್ಳಬೇಕೆ ಹೊರೆತು ದುಂಡಾವರ್ತನೆ ಮಾಡಿ ಕಿತ್ತುಕೊಳ್ಳುವದು ಅಲ್ಲ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ನಡೆಸಿದ ಘಟನೆ ಕುರಿತು ಜಿಲ್ಲಾ ಆಡಳಿತವೇ ತನ್ನ ತಪ್ಪನ್ನು ಒಪ್ಪಿಕೊಂಡಿರುವುದು ಅತ್ಯಂತ ಗಂಭೀರ ಮತ್ತು ವಿಷಾದನೀಯ ಬೆಳವಣಿಗೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯದ ಆದೇಶಗಳಿಗೆ ಗೌರವ ನೀಡುವುದು ಸರ್ಕಾರದ ಎಲ್ಲ ಅಂಗಗಳ ಮೂಲಭೂತ ಕರ್ತವ್ಯ. ಕಾನೂನು ಮತ್ತು ನ್ಯಾಯಾಂಗದ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ನಡೆದ ಈ ಘಟನೆಯ ಹಿಂದಿನ ಶಕ್ತಿಯಾಗಿ ಕಾರ್ಯನಿರ್ವಹಿಸಿದರೆಂದು ಆರೋಪಗಳು ಕೇಳಿಬರುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರು ರಾಜ್ಯದ ಒಬ್ಬ ಹಿರಿಯ ರಾಜಕಾರಣಿ, ಅವರಿಂದ ನಾವ್ಯಾರು ಇಂತಹದನ್ನು ನಿರೀಕ್ಷೆ ಮಾಡಿರಲಿಲ್ಲ.

ಸಂವಿಧಾನ ಬದ್ದವಾದ ಪ್ರಜಾಪ್ರಭುತ್ವ ವ್ಯೆವಸ್ತೆಗೆ ದಕ್ಕೆ ತರುವ ಇಂತಹ ಘಟನೆಗೆ ಕಾರಣರಾದ ಜಿಲ್ಲಾಡಳಿತ ಅಧಿಕಾರಿಗಳನ್ನ ಕೂಡಲೇ ಬೇರೆ ಜಿಲ್ಲೆಗೆ ವರ್ಗಾಯಿಸಬೇಕು ಇಲ್ಲವೇ ತಾವಾದರೂ ಈಗಿದ್ದ ಕಾನೂನು ಮಂತ್ರಿ ಪದವಿಯನ್ನು ಬದಲಾಯಿಸಿಕೊಳ್ಳಬೇಕು.

ಜನರು ನೀಡಿದ ಮತದ ಆದೇಶವನ್ನು ಗೌರವಿಸುವುದು ರಾಜಕೀಯ ನಾಯಕರ ಮೊದಲ ಜವಾಬ್ದಾರಿ,ಈ ವಿಚಾರದಲ್ಲಿ ಸಚಿವರು ನೈತಿಕ ಹೊಣೆ ಹೊತ್ತು ಅವಳಿ ನಗರದ ಜನತೆಯ ಕ್ಷಮೆ ಕೇಳಬೇಕು,ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟವರು ಕಾನೂನು ಮತ್ತು ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಲಿಂಗರಾಜ ಪಾಟೀಲ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande