
ಗಂಗಾವತಿ, 31 ಮಾರ್ಚ್ (ಹಿ.ಸ.)
ಆ್ಯಂಕರ್:ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ
ರಾಯಚೂರು ವಲಯ (ಕೊಪ್ಪಳ ಜಿಲ್ಲೆ)ವತಿಯಿಂದ ಜಿಲ್ಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಆಯ್ಕೆ ಟ್ರಯಲ್ಸ್ ನೆಡೆಸಲು ಗಂಗಾವತಿ ತಾಲ್ಲುಕ ಕ್ರೀಡಾಂಗಣದಲ್ಲಿ ಏ.3 ರಂದು 14 ವರ್ಷದೊಳಗಿನವರಿಗೆ ಏ.4 ರಂದು 16 ವರ್ಷದ ಒಳಗಿನವರಿಗೆ ಮತ್ತು ಏ.5 ರಂದು 19 ವರ್ಷದೊಳಗಿನ ಬಾಲಕರ ಕ್ರಿ-'ಕೆಟ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಒಟ್ಟು ಮೂರು ದಿನ ಕ್ರಿಕೆಟ್ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು.ಆಸಕ್ತ ಕ್ರಿಕೆಟ್ ಪಟುಗಳು ತಮ್ಮ ಆಧಾರ್ ಕಾರ್ಡ, ಜನುಮದಿನದ ದಾಖಲೆ ಪತ್ರ ಶಾಲಾ ದೃಡಿಕರಣ ಪತ್ರ ಹಾಗೂ ಬಿಳಿ ಸಮವಸ್ತ್ರದೊಂದಿಗೆ ಕನಕಗಿರಿ ರಸ್ತೆಯ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 7.00 ಗಂಟೆಗೆ ಉಪಸ್ಥಿತಿಯಲ್ಲಿರಬೇಕು. ಕ್ರೀಡಾಪಟುಗಳು ತಮ್ಮ ಉತ್ತಮ ಪ್ರದರ್ಶನದ ಮೂಲಕ ರಾಯಚೂರು ವಲಯ ಕೊಪ್ಪಳ ಜಿಲ್ಲಾ ತಂಡಕ್ಕೆ ಆಯ್ಕೆಯಾಗಬಹುದು ಎಂದು
ರಾಜೇಶ್ ಪಲ್ಲಕ್ಕಿ ಜಿಲ್ಲಾ ಸಂಚಾಲಕರು : 9886399200 ಚಂದ್ರು ಮೈಲಾರಿ ರಾಯಚೂರ್ ವಲಯ ಅಧ್ಯಕ್ಷರು : 9448633748 ಕುಶಾಲ್ ಪಾಟೀಲ್ ರಾಯಚೂರು ವಲಯ ಕನ್ವಿನರ್ : 9448476889 ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್