
ಗದಗ, 31 ಮಾರ್ಚ್ (ಹಿ.ಸ.)
ಆ್ಯಂಕರ್:- 2024-25 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಯೋಜನೆಯಡಿ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ 08 ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳನ್ನು ಉತ್ತೇಜಿಸಿ, ಪ್ರಚಾರ ಮಾಡುವ ದೃಷ್ಟಿಯಿಂದ ಪರಿಶಿಷ್ಟ ಜಾತಿಗೆ ಸೇರಿದ 100 ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಪಂಗಡದ 60 ಅಭ್ಯರ್ಥಿಗಳು, ಒಟ್ಟು 160 ಅಭ್ಯರ್ಥಿಗಳಿಗೆ ಒಂದು ತಿಂಗಳ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡಿ, ಸದರಿ ಅಭ್ಯರ್ಥಿಗಳಿಗೆ ಜಾಕೆಟ್ ಹಾಗೂ ಒಂದು ಜೊತೆ ಸ್ಪೋರ್ಟ ಶೂ ಗಳನ್ನು ಒದಗಿಸುವಂತೆ ಕೇಂದ್ರ ಕಛೇರಿಯಿಂದ ಸೂಚಿಸಲಾಗಿತ್ತು.
ಅದರಂತೆ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಗದಗ ಕಛೇರಿಯಲ್ಲಿ ಪ್ರವಾಸಿ ಮಾರ್ಗದರ್ಶಿಗಳಿಗೆ ಜಾಕೆಟ್ ಹಾಗೂ ಒಂದು ಜೊತೆ ಸ್ಪೋರ್ಟ ಶೂ ವಿತರಿಸಲಾಯಿತು.
ಪ್ರವಾಸಿ ಮಾರ್ಗದರ್ಶಿ ಪ್ರವೀಣ ತೆಗ್ಗಿನಮನಿ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಈ ಯೋಜನೆ ಸಹಕಾರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಕೊಟ್ರೇಶ್ವರ.ವಾಯ್.ವಿಭೂತಿ ಹಾಗೂ .ಬಸವರಾಜ ಕಡೆಮನಿ, ಪ್ರವಾಸಿ ಮಾರ್ಗದರ್ಶಿಗಳು, ಕಚೇರಿ ಸಿಬ್ಬಂದಿ ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP