ಕೇರಳ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ
ತಿರುವನಂತಪುರಂ, 31 ಮಾರ್ಚ್ (ಹಿ.ಸ.): ಆ್ಯಂಕರ್:ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇರಳ ವಿಧಾನಸಭಾ ಚುನಾವಣೆಗೆ ತನ್ನ ಮಹತ್ವದ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ. “ಇದು ಬದಲಾವಣೆ, ಇದು ಅಭಿವೃದ್ಧಿ ಹೊಂದಿದ ಕೇರಳ” ಎಂಬ ಧ್ಯೇಯವಾಕ್ಯದೊಂದಿಗೆ ರೂಪಿಸಿರುವ ಈ ಪ್ರಣಾಳಿಕೆ ರಾಜ್ಯದ ಸಮಗ್ರ ಅಭಿವೃದ್
Bjp


ತಿರುವನಂತಪುರಂ, 31 ಮಾರ್ಚ್ (ಹಿ.ಸ.):

ಆ್ಯಂಕರ್:ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇರಳ ವಿಧಾನಸಭಾ ಚುನಾವಣೆಗೆ ತನ್ನ ಮಹತ್ವದ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ. “ಇದು ಬದಲಾವಣೆ, ಇದು ಅಭಿವೃದ್ಧಿ ಹೊಂದಿದ ಕೇರಳ” ಎಂಬ ಧ್ಯೇಯವಾಕ್ಯದೊಂದಿಗೆ ರೂಪಿಸಿರುವ ಈ ಪ್ರಣಾಳಿಕೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರ್ಗಸೂಚಿ ನೀಡುತ್ತದೆ.

ತಿರುವನಂತಪುರದ ಶ್ರೀ ಮೂಲಮ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಟಿವಿ-20 ಪಕ್ಷದ ಮುಖ್ಯ ಸಂಯೋಜಕ ಸಾಬು ಜೇಕಬ್, ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಪ್ರಮುಖ ಭರವಸೆಗಳು:

ಬಡ ಕುಟುಂಬಗಳಿಗೆ ವರ್ಷಕ್ಕೆ 2 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು (ಓಣಂ ಮತ್ತು ಕ್ರಿಸ್‌ಮಸ್ ಸಂದರ್ಭದಲ್ಲಿ)

ಪ್ರತಿ ಮನೆಗೆ ತಿಂಗಳಿಗೆ 20,000 ಲೀಟರ್ ಉಚಿತ ಕುಡಿಯುವ ನೀರು

ವೃದ್ಧರು, ವಿಧವೆಯರು ಸೇರಿದಂತೆ ಅರ್ಹರಿಗೆ ₹3,000 ಮಾಸಿಕ ಪಿಂಚಣಿ

ನಿರ್ಗತಿಕ ಮಹಿಳೆಯರಿಗೆ ‘ಭಕ್ತ ಆರೋಗ್ಯ ಸುರಕ್ಷಾ ಕಾರ್ಡ್’ ಮೂಲಕ ₹2,500 ಸಹಾಯ

ಮೂಲಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳು:

ಕೇರಳದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಭರವಸೆ

ತಿರುವನಂತಪುರಂ–ಕಣ್ಣೂರು ನಡುವೆ ಹೈಸ್ಪೀಡ್ ರೈಲು ಕಾರಿಡಾರ್

ತಿರುವನಂತಪುರಂ ಮತ್ತು ಕೋಝಿಕ್ಕೋಡ್ ನಗರಗಳಲ್ಲಿ ಮೆಟ್ರೋ ಯೋಜನೆಗಳು

ಧಾರ್ಮಿಕ ಹಾಗೂ ಆಡಳಿತ ಸುಧಾರಣೆ:

ದೇವಸ್ವಂ ಮಂಡಳಿಗಳ ಪುನರ್‌ರಚನೆ

ಶಬರಿಮಲೆ ಸಂಬಂಧಿತ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವ ಭರವಸೆ

ಪ್ರಣಾಳಿಕೆ ಬಿಡುಗಡೆ ವೇಳೆ ಎನ್‌ಡಿಎ ಮೈತ್ರಿ ಪಕ್ಷಗಳ ಸಕ್ರಿಯ ಹಾಜರಾತಿ ಗಮನ ಸೆಳೆಯಿತು. ಇದರಿಂದ ಕೇರಳದ ಸಾಂಪ್ರದಾಯಿಕ ಎಲ್‌ಡಿಎಫ್–ಯುಡಿಎಫ್ ರಾಜಕೀಯಕ್ಕೆ ಪರ್ಯಾಯವಾಗಿ ಬಿಜೆಪಿ ತನ್ನನ್ನು ಬಲವಾಗಿ ಸ್ಥಾಪಿಸಲು ಮುಂದಾಗಿದೆ ಎಂಬ ಸಂದೇಶ ವ್ಯಕ್ತವಾಗಿದೆ.

ಪ್ರಚಾರದ ಅಂಗವಾಗಿ ನಿತಿನ್ ನವೀನ್ ತಿರುವನಂತಪುರದ ಅಟ್ಟಿಂಗಲ್‌ನಲ್ಲಿ ರೋಡ್‌ ಶೋ ನಡೆಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಲ್ಲಿ ಭಾರೀ ಪ್ರಚಾರ ಸಭೆಗಳು ನಡೆಯಲಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande