
ಗುವಾಹಟಿ, 29 ಮಾರ್ಚ್ (ಹಿ.ಸ.):
ಆ್ಯಂಕರ್:
ಬಿಜೆಪಿಯ ಸ್ಟಾರ್ ಪ್ರಚಾರಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಸ್ಸಾಂ ರಾಜ್ಯದ ಧೇಕಿಯಾಜುಲಿ, ತಿಹು ಮತ್ತು ನಲ್ಬರಿ ಪ್ರದೇಶಗಳಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಎರಡು ದಿನಗಳ ಪ್ರವಾಸದ ಭಾಗವಾಗಿ ಶನಿವಾರ ಸಂಜೆ ಅವರು ಗುವಾಹಟಿಗೆ ಆಗಮಿಸಿದ್ದು, ಅಲ್ಲಿನ ರೋಡ್ ಶೋ ಭಾರೀ ಜನಸಾಗರವನ್ನು ಸೆಳೆದಿತ್ತು. ಈ ರೋಡ್ ಶೋ ಚುನಾವಣಾ ಕಣಕ್ಕೆ ಹೊಸ ಚೈತನ್ಯ ತುಂಬಿದಂತಾಗಿದೆ.
ಭಾನುವಾರ ತಿಹುವಿನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಶಾ ಮಾತನಾಡಲಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲದೆ ಧೇಕಿಯಾಜುಲಿ ಮತ್ತು ನಲ್ಬರಿಯಲ್ಲೂ ಅವರು ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಈ ವೇಳೆ ಬಿಜೆಪಿ ಅಭ್ಯರ್ಥಿಗಳಾದ ಜಯಂತಮಲ್ಲ ಬರುವಾ, ಚಂದ್ರಮೋಹನ್ ಪಟ್ವಾರಿ ಮತ್ತು ಅಶೋಕ್ ಸಿಂಘಾಲ್ ಪರ ಶಾ ಮತಯಾಚನೆ ನಡೆಸಲಿದ್ದಾರೆ.
ಗೃಹ ಸಚಿವರ ಭೇಟಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಕಾರ್ಯಕ್ರಮಗಳಿಗಾಗಿ ಬಿಜೆಪಿ ಕಾರ್ಯಕರ್ತರು ವ್ಯಾಪಕ ಸಿದ್ಧತೆ ನಡೆಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa