ನಾನು ಮತ್ತು ನನ್ನದು ಎನ್ನುವ ಮನೋಭಾವವೇ ಯುದ್ಧಗಳಿಗೆ ಮೂಲ ಕಾರಣ: ಮೋಹನ್ ಭಾಗವತ್
ಬೆಳಗಾವಿ, 28 ಮಾರ್ಚ್ (ಹಿ.ಸ.): ಆ್ಯಂಕರ್: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದ ಯುವ ಸಮಾವೇಶದಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಜಾಗತಿಕ ಯುದ್ಧಗಳ ಹಿನ್ನೆಲೆ ಕುರಿತು ಮಾತನಾಡಿ, “ನಾನು ಮತ್ತು ನನ್ನದು ಎನ್ನುವ ಮನೋಭಾವವೇ ಯುದ್ಧಗಳಿಗೆ ಮೂಲ ಕಾರಣ” ಎಂದ
ಮೋಹನ್ ಭಾಗವತ


ಬೆಳಗಾವಿ, 28 ಮಾರ್ಚ್ (ಹಿ.ಸ.):

ಆ್ಯಂಕರ್:

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದ ಯುವ ಸಮಾವೇಶದಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಜಾಗತಿಕ ಯುದ್ಧಗಳ ಹಿನ್ನೆಲೆ ಕುರಿತು ಮಾತನಾಡಿ, “ನಾನು ಮತ್ತು ನನ್ನದು ಎನ್ನುವ ಮನೋಭಾವವೇ ಯುದ್ಧಗಳಿಗೆ ಮೂಲ ಕಾರಣ” ಎಂದು ಹೇಳಿದರು.

ಶ್ರೀ ಕ್ಷೇತ್ರ ಯಡೂರು ಕಾಡದೇವರ ಮಠದ ಆಶ್ರಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇರಾನ್-ಇಸ್ರೇಲ್ ಸಂಘರ್ಷ ದೀರ್ಘಕಾಲ ಮುಂದುವರಿಯುವ ಆತಂಕವಿದೆ ಎಂದು ಅಭಿಪ್ರಾಯಪಟ್ಟರು. “ಈ ಸಂಘರ್ಷವು ರಷ್ಯಾ-ಯುಕ್ರೇನ್ ಯುದ್ಧದಷ್ಟು ಹಳೆಯದಲ್ಲ. ಆದರೂ ಇದು ಹೆಚ್ಚು ದಿನಗಳವರೆಗೆ ನಡೆಯುವ ಸಾಧ್ಯತೆ ಕಾಣುತ್ತಿದೆ,” ಎಂದು ಹೇಳಿದರು.

“ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಮಾನವ ಧರ್ಮ ಮತ್ತು ಹಿಂದೂ ಧರ್ಮದ ಮೌಲ್ಯಗಳನ್ನು ನೆನಪಿಸಿಕೊಳ್ಳಬೇಕು. ಭಾರತವು ವಿಶ್ವದ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧ ಹೊಂದಿದೆ,” ಎಂದು ಅವರು ತಿಳಿಸಿದರು.

ಹಿಂದೂ ಸಮಾಜದಲ್ಲಿ ಪೂಜೆ, ಆಹಾರದಲ್ಲಿ ಭಿನ್ನತೆ ಇದ್ದರೂ ಆದಿಕಾಲದಿಂದಲೂ ಏಕತೆಯಿಂದ ಬದುಕುತ್ತಿರುವುದನ್ನು ಅವರು ಉದಾಹರಿಸಿದರು. ಹಿಂದೂ ಸಮಾಜವು ಇತರರನ್ನು ಬಲವಂತವಾಗಿ ಪರಿವರ್ತಿಸುವ ಪರಂಪರೆ ಹೊಂದಿಲ್ಲವೆಂದು ಅವರು ಒತ್ತಿಹೇಳಿದರು.

ಕಾರ್ಯಕ್ರಮದ ಅಂಗವಾಗಿ ಮೋಹನ್ ಭಾಗವತ್ ಅವರಿಗೆ ತುಲಾಭಾರ ನೆರವೇರಿಸಲಾಯಿತು. ಶ್ರೀಶೈಲ ಜಗದ್ಗುರು ಚನ್ನರಾಮಸಿದ್ಧ ಶ್ರೀಗಳ ನೇತೃತ್ವದಲ್ಲಿ ಯಡೂರಿನ ಶ್ರೀ ಕಾಡದೇವರ ಮಠದಲ್ಲಿ ಗೋವು ತುಲಾಭಾರ ನಡೆಯಿತು.

ಗೋವುಗಳಿಗೆ ನೀಡುವ ಆಹಾರದ ತೂಕದ ಮೂಲಕ ತುಲಾಭಾರ ನಡೆಸಿದ ಬಳಿಕ ಮೋಹನ್ ಭಾಗವತ ಗೋ ಪೂಜೆ ನೆರವೇರಿಸಿ ಗೋವುಗಳಿಗೆ ಮೇವು ಹಾಕಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande