
ಗದಗ, 25 ಮಾರ್ಚ್ (ಹಿ.ಸ.)
ಆ್ಯಂಕರ್:- ಕರ್ನಾಟಕ ಸಹಕಾರಿ ಸಂಘಗಳ ನಿಯಮಗಳು 1960ರ ಅನ್ವಯ ನಿಯಮ 14(ಜಿ) ಪ್ರಕಾರ, 2026 ರಿಂದ 2029ರ ಅವಧಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಜಿಲ್ಲಾ ಸಂಘ, ಗದಗ ಇದರ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ತಾಲೂಕ ಪಂಚಾಯತ ಗದಗದ ಸಹಾಯಕ ಲೆಕ್ಕಾಧಿಕಾರಿ ಸೋಮಶೇಖರ ಅವರು ಸಹಾಯಕ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿದರು.
ಈ ಚುನಾವಣೆಯಲ್ಲಿ ಕೆಳಕಂಡ ಅಭ್ಯರ್ಥಿಗಳು ಗದಗ ಜಿಲ್ಲೆಯ ವಿವಿಧ ಹುದ್ದೆಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಅಧ್ಯಕ್ಷರು: ಶ್ರೀ ರಿಯಾಜ್ ಕೆ. ಖತೀಬ್
ಉಪಾಧ್ಯಕ್ಷರು: ಶ್ರೀ ಮಂಜುನಾಥ ಗಣಿ
ಉಪಾಧ್ಯಕ್ಷರು (ಮಹಿಳೆ): ಶ್ರೀಮತಿ ಶಿಲ್ಪಾ ಕವಲೂರ
ಖಜಾಂಚಿ: ಶ್ರೀಮತಿ ಶಿವಲೀಲಾ ಅಂಗಡಿ
ರಾಜ್ಯ ಪರಿಷತ್ ಸದಸ್ಯರು: ಶ್ರೀ ಮಹೇಶ ಅಲ್ಲಿಪೂರ
ಸಂಘಟನಾ ಕಾರ್ಯದರ್ಶಿ: ಶ್ರೀ ಎಸ್.ವೈ. ಕುಂಬಾರ
ಸಂಘಟನಾ ಕಾರ್ಯದರ್ಶಿ (ಮಹಿಳೆ): ಶ್ರೀಮತಿ ಸುಜಾತಾ ಕಪ್ಪಲಿ
ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಮತಿ ಜ್ಯೋತ್ಸ್ನಾ ಎಜ್ರಾ ಸಾಮುವೆಲ್
ಕ್ರೀಡಾ ಕಾರ್ಯದರ್ಶಿ: ಶ್ರೀ ಶರಣಪ್ಪ ನರೇಗಲ್
ಇದಲ್ಲದೆ, ಸಂಘದ ಗೌರವಾಧ್ಯಕ್ಷರಾಗಿ ಶ್ರೀ ಕುಮಾರ ಪೂಜಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನವಾಗಿ ರಚನೆಯಾದ ಸಂಘದ ಪದಾಧಿಕಾರಿಗಳಿಗೆ ಹಲವು ಅಧಿಕಾರಿಗಳು ಹಾಗೂ ವಿವಿಧ ವೃಂದದ ಸಂಘಟನೆಗಳು ಅಭಿನಂದನೆಗಳನ್ನು ಸಲ್ಲಿಸಿ, ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP