
ಕೊಪ್ಪಳ, 24 ಮಾರ್ಚ್ (ಹಿ.ಸ.)
ಆ್ಯಂಕರ್: ಬೇಸಿಗೆಯ ತೀವ್ರ ಬಿಸಿಲಿನ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ಸಾರ್ವಜನಿಕರ ದಾಹ ನೀಗಿಸುವ ಉದ್ದೇಶದಿಂದ, ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ, ಮಾನವಿ ಕೊಪ್ಪಳ ಶಾಖೆ ಇದರಿಂದ ಕೊಪ್ಪಳ ನಗರದ ಲೇಬರ್ ಸರ್ಕಲ್,ಗುಪ್ತಾ ಪೆಟ್ರೋಲ್ ಬoಕ್ ಹತ್ತಿರ ಶುದ್ಧ ಕುಡಿಯುವ ನೀರಿನ ಅರವಟಿಗೆಯನ್ನು ಪ್ರಾರಂಭಿಸಲಾಗಿದೆ.ಹಾಗೂ
ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ|| ಶಂಕರಗೌಡ ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ನೆರವೇರಿತು
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವೀರೇಶ ಎನ್. ಹೊಸೂರ್ ಅವರು ಮಾತನಾಡಿ ವರ್ಷ ದಿಂದ ವರ್ಷಕ್ಕೆ ಬಿಸಿಲಿನ ತಾಪ ಮಾರ್ಚ್ ತಿಂಗಳಿಂದ ಹೆಚ್ಚಾಗುವದರಿಂದ ಪಟ್ಟಣಕ್ಕೆ ಬರುವ ಸಾವಿರಾರು ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ನೀರಿನ ದಾಹ ತಣಿಸಲು ಸಹಕಾರಿಯಾಗಿದೆ ಎಂದರು ನಮ್ಮ ಸಂಸ್ಥೆಯ ಶಾಖೆಗಳು ಇರುವ ಮಾನವಿ ಲಿಂಗಸಗೂರು,ಸಿರವಾರ,ದೇವದುರ್ಗ,ರಾಯಚೂರು ,ಸಿಂಧನೂರ,ಗಂಗಾವತಿ,ಹುಣಸಗಿ ಹಾಗೂ ಯಾದಗಿರಿ ನಗರಗಳಲ್ಲಿ ದಿನ ಆಗಮಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ
ಕೊಪ್ಪಳ ನಗರ ಠಾಣೆಯ ಸಿ.ಪಿ.ಐ ಪರಸಪ್ಪ ತುರಡಗಿ ಅವರು ಅರವಟಿಗೆಯನ್ನು ಉದ್ಘಾಟಿಸಿ, ಸಂಘದ ಈ ಜನಪರ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿರ್ದೇಶಕರಾದ ಶಂಕರಗೌಡ ಹಿರೇಗೌಡ್ರು, ಚಂದ್ರಶೇಖರಗೌಡ ಎಂ. ಪಾಟೀಲ್, ಕಾಶಿನಾಥ ರಡ್ಡಿ, ಪ್ರಭು ಬಬ್ಲಿ, ಸೋಮನಗೌಡ ಹೊಗರನಾಳ, ಫಕ್ರುದ್ದೀನ್ ನದಾಫ್ ಹಾಗೂ ಆಶೀಪ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಶಾಖಾ ವ್ಯವಸ್ಥಾಪಕರಾದ ಶ್ರೀ ಮಲ್ಲನಗೌಡ ಮುದೇನೂರ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಭಾಗವಹಿಸಿ, ಸಾರ್ವಜನಿಕ ಸೇವೆಗೆ ಚಾಲನೆ ನೀಡಿದರು.
ಬೇಸಿಗೆಯ ಅವಧಿಯಲ್ಲಿ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್