ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ `ದಶಕದ ಶ್ರೇಷ್ಠ ಕಾದಂಬರಿ ಸ್ಪರ್ಧೆ'
ಬೆಂಗಳೂರು, 23 ಮಾರ್ಚ್ (ಹಿ.ಸ.) ಆ್ಯಂಕರ್ : ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 12ನೇ ಸಮ್ಮೇಳನವು ನಡೆಯಲಿದೆ. ಇದರ ಸವಿನೆನಪಿಗಾಗಿ “ದಶಕದ ಶ್ರೇಷ್ಠ ಕಾದಂಬರಿ ಆಯ್ಕೆಗಾಗಿ ಸ್ಪರ್ಧೆ” ನಡೆಯಲಿದೆ. 2015 ರಿಂದ 2025 ರವರೆಗೆ ಪ್ರಕಟವಾದ ಇತಿಹಾಸ, ಸಾಮಾಜಿಕ, ಪತ್ತೆದಾರಿ, ಚರಿತ್ರೆ,
ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ `ದಶಕದ ಶ್ರೇಷ್ಠ ಕಾದಂಬರಿ ಸ್ಪರ್ಧೆ'


ಬೆಂಗಳೂರು, 23 ಮಾರ್ಚ್ (ಹಿ.ಸ.)

ಆ್ಯಂಕರ್ : ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 12ನೇ ಸಮ್ಮೇಳನವು ನಡೆಯಲಿದೆ. ಇದರ ಸವಿನೆನಪಿಗಾಗಿ “ದಶಕದ ಶ್ರೇಷ್ಠ ಕಾದಂಬರಿ ಆಯ್ಕೆಗಾಗಿ ಸ್ಪರ್ಧೆ” ನಡೆಯಲಿದೆ.

2015 ರಿಂದ 2025 ರವರೆಗೆ ಪ್ರಕಟವಾದ ಇತಿಹಾಸ, ಸಾಮಾಜಿಕ, ಪತ್ತೆದಾರಿ, ಚರಿತ್ರೆ, ಕೌಟುಂಬಿಕ, ಪೌರಾಣಿಕ, ವೈಚಾರಿಕ, ವೈಜ್ಞಾನಿಕ, ವ್ಯಕ್ತಿಚರಿತ್ರೆ , ಸಾಹಸಮಯ ಹೀಗೆ ಯಾವುದೇ ಪ್ರಾಕಾರದ ಪ್ರಕಟವಾದ ಕಾದಂಬರಿಗಳು, ಈ ಸ್ಪರ್ಧೆಗೆ ಅರ್ಹ.

ಪ್ರಕಟಿತ ತಮ್ಮ ಕಾದಂಬರಿಗಳ 3 ಪ್ರತಿಯೊಂದಿಗೆ, ಸಂಪೂರ್ಣ ಬಯೋಡಾಟಾ, ಭಾವಚಿತ್ರದೊಂದಿಗೆ ದಿನಾಂಕ 15-10-2026 ರೊಳಗೆ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬೇಕು.

ಸಂಸ್ಥೆಯ ವಿಳಾಸ : ಅಧ್ಯಕ್ಷರು, ಕಾದಂಬರಿ ಸ್ಪರ್ಧೆ ವಿಭಾಗ, ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ನಂ. 468/ಸುರ್ವೆ, 13ನೇ ಮುಖ್ಯರಸ್ತೆ, 3ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸೆ್ತ, ಮಂಜುನಾಥನಗರ, ಬೆಂಗಳೂರು-560010. ಮೊ : 9845307327.

ಆಯ್ಕೆಯಾದ 10 ಕೃತಿಗಳಿಗೆ ತಲಾ 5000 ರೂ. ನಗದು ಬಹುಮಾನದೊಂದಿಗೆ ರಾಷ್ಟ್ರಮಟ್ಟದ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗೌರವವಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆಯವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande