ಕೊಪ್ಪಳ ಬಲ್ಡೋಟ ಹೋರಾಟ ಐತಿಹಾಸಿಕ ಹಂತ ತಲುಪುತ್ತದೆ: ಬರಗೂರು ರಾಮಚಂದ್ರಪ್ಪ
ಬೆಂಗಳೂರು, 23 ಮಾರ್ಚ್ (ಹಿ.ಸ.) ಆ್ಯಂಕರ್ : ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೊಪ್ಪಳ ನಗರ, ಭಾಗ್ಯನಗರ ಪಟ್ಟಣದ 1.5 ಲಕ್ಷ ಜನರ ಆರೋಗ್ಯ ಕಾಪಾಡಲು 54 ಸಾವಿರ ಕೋಟಿ ವೆಚ್ಚದಲ್ಲಿ ಬಲ್ಡೋಟ ವಿಸ್ತರಣೆಯಾಗುತ್ತಿದ್ಧು ಇದನ್ನು ಸರ್ಕಾರ ರದ್ದುಗೊಳಿಸಬೇಕು. ಈಗಿರುವ ಇದರ ಪೆಲೆಟ್ ಘಟಕದ ಪರವಾನಗಿ ರದ್ದುಪಡಿಸಬೇ
ಕೊಪ್ಪಳ ಬಲ್ಡೋಟ ಹೋರಾಟ  ಐತಿಹಾಸಿಕ ಹಂತ ತಲುಪುತ್ತದೆ: ಬರಗೂರು ರಾಮಚಂದ್ರಪ್ಪ


ಕೊಪ್ಪಳ ಬಲ್ಡೋಟ ಹೋರಾಟ  ಐತಿಹಾಸಿಕ ಹಂತ ತಲುಪುತ್ತದೆ: ಬರಗೂರು ರಾಮಚಂದ್ರಪ್ಪ


ಬೆಂಗಳೂರು, 23 ಮಾರ್ಚ್ (ಹಿ.ಸ.)

ಆ್ಯಂಕರ್ : ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೊಪ್ಪಳ ನಗರ, ಭಾಗ್ಯನಗರ ಪಟ್ಟಣದ 1.5 ಲಕ್ಷ ಜನರ ಆರೋಗ್ಯ ಕಾಪಾಡಲು 54 ಸಾವಿರ ಕೋಟಿ ವೆಚ್ಚದಲ್ಲಿ ಬಲ್ಡೋಟ ವಿಸ್ತರಣೆಯಾಗುತ್ತಿದ್ಧು ಇದನ್ನು ಸರ್ಕಾರ ರದ್ದುಗೊಳಿಸಬೇಕು. ಈಗಿರುವ ಇದರ ಪೆಲೆಟ್ ಘಟಕದ ಪರವಾನಗಿ ರದ್ದುಪಡಿಸಬೇಕು, ಗಿಣಿಗೇರಿ, ಕನಕಾಪುರ, ಹಿರೇಬಗನಾಳ, ಅಲ್ಲಾನಗರ, ಕಾಸನಕಂಡಿ, ಚಿಕ್ಕಬಗನಾಳ, ಕುಣಿಕೇರಿ, ಲಾಚನಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ, ಬಸಾಪುರ, ಬೇವಿನಹಳ್ಳಿ, ಹುಲಿಗಿ ಮುಂತಾದ 20 ಗ್ರಾಮಗಳ ಜನರು ಜೀವಕ್ಕೆ ಕಂಟಕವಾದ, ವಿಷಾನಿಲ, ಹೊರಸೂಸುವ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ತಂಡದ ವರದಿಯ ಶಿಫಾರಸಿನಂತೆ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು.

ಬಲ್ಡೋಟ ಕಂಪನಿ ಅತಿಕ್ರಮಿಸಿ ಬಸಾಪುರ ಕೆರೆ 44.35 ಎಕರೆ ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 5713/2009 ರಿ ಆದೇಶದಂತೆ ಸಾರ್ವಜನಿಕರಿಗೆ ಮುಕ್ತಗೊಳಿಸಿಬೇಕು , ಸರ್ಕಾರ 2007ರಲ್ಲಿ ಮಾಡಿದ ಕೆರೆ ಮಂಜೂರಿ ಅಧಿಸೂಚನೆ ರದ್ದುಗೊಳಿಸಬೇಕು, ತಜ್ಞರ ವರದಿಯಂತೆ ತುಂಗಭದ್ರಾ ನದಿ ನೀರು ವಿಶೇಷವಾಗಿ ಬಳಕೆಗೂ ಯೋಗ್ಯವಿಲ್ಲ. ನದಿ ಮಾಲಿನ್ಯ ಮಾಡಿದ ಕಾರ್ಖಾನೆಗಳನ್ನು ಮುಚ್ಚಿ ಲಕ್ಷಾಂತರ ಜನರ ಜೀವ, ಆರೋಗ್ಯ ಉಳಿಸಬೇಕು. ಕಾರ್ಖಾನೆ ಬಾಧಿತ ಹಳ್ಳಿಗಳ ಜನರ ಆರೋಗ್ಯ ಸಮೀಕ್ಷೆಯನ್ನು ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಮೂಲಕ, ಪರಿಸರ ಮಾಲಿನ್ಯದ ಸಮೀಕ್ಷೆಯನ್ನು ಭಾರತೀಯ ವಿಜ್ಞಾನಗಳ ಸಂಸ್ಥೆ (ಐಐಎಸ್ಸಿ) ಮೂಲಕ ಮೋಡಿಸಬೆಕು, ಮಾಲಿನ್ಯದಿಂದ ಹಾಳಾದ ಹಳ್ಳಿಗಳ ಪುನರುಜ್ಜೀವನಕ್ಕಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಧರಣಿ ಒತ್ತಾಯಿಸಿತು.

ಹೋರಾಟ ಬೆಂಬಲಿಸಿ ರಾಜ್ಯದ ಸಾಕ್ಷಿ ಪ್ರಜ್ಞೆ, ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಇಂದು ಕೊಪ್ಪಳದಿಂದ ರಾಜಧಾನಿಗೆ ಹೋರಾಟ ತಲುಪಿಸಿದ ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ. ಜಾಗತೀಕರಣ ಜಾರಿಯಾದ ಮೇಲೆ ಇದು ಇಡೀ ದೇಶದ ಸಮಸ್ಯೆಯಾಗಿದೆ. ಆದರೆ ಕೊಪ್ಪಳ ಜನ ಜೀವ ಉಳಿಸಿ ಬೆಳೆಸುವ ಬೇಡಿಕೆ ಇಟ್ಟು ಹೋರಾಡುವುದು ವಿಶಿಷ್ಟವಾಗಿದೆ. ಇದು ದೈತ್ಯ ಬಂಡವಾಳ ಹೂಡಿಕೆ ಮಾಡಿದಾಗ ನಾವು ಗಿಡ, ಮರ ಉಳಿಸಿ ಎಂದು ಕೇಳುವುದು ತಪ್ಪಿ ಜೀವ ಉಳಿಸಿ ಎಂದು ಹೋರಾಟ ನಡೆಸುವುದು ಎಂಥ ವಿಪರ್ಯಾಸ. ಈ ಹೋರಾಟ ಗೆದ್ದು ಚರಿತ್ರೆಯಲ್ಲಿ ದಾಖಲಾಗಲಿದೆ, ನಾನೂ ಸಹ ಇದನ್ನು ಗಟ್ಟಿಗೊಳಿಸಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ, ಮುಖ್ಯ ಮಂತ್ರಿಗಳ ಭೇಟಿಗೆ ಬರುತ್ತೇನೆ ಎಂದರು.

ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ನನ್ನ ಮೇಲೆ ಎಲ್ಲಾ ಕಾಲದಿಂದ ಮಾಡಿದವರ ತಪ್ಪುಗಳ ಭಾರ ಬಿದ್ದಿದೆ. ನಾನು ಹಳ್ಳಿಯನ್ನು ಸುತ್ತಾಡಿ ಜನರನ್ನು ಮಾತನಾಡಿಸಿದಾಗ ಅವರು ತೋಡಿಕೊಂಡ ಗೋಳು ಅಷ್ಟಿಷ್ಟಲ್ಲ. ಅವರು ಇಲ್ಲಿಯವರೆಗೆ ಬಂದು ನೋವು ತೋಡಿಕೊಂಡು ಸರ್ಕಾರದ ಗಮನ ಸೆಳೆದಿದ್ದಾರೆ. ನಾನು ಈ ಹೋರಾಟದ ಜೊತೆಗಿದ್ದೇನೆ ಎಂದಾಗ ಸಂಘಟಕರು ಮೊದಲು ರಾಜೀನಾಮೆ ಸಲ್ಲಿಸಿ ಹೋರಾಟ ಮಾಡಲು ಬನ್ನಿ, ನಾವು ಮತ್ತೊಮ್ಮೆ ಗೆಲ್ಲಿಸುತ್ತೇವೆ ಎಂದರು.

ಸರಕಾರದ ಪರವಾಗಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮನವಿ ಸ್ವೀಕರಿಸಿ ಮಾತನಾಡಿ, ನಾನು ಆರೋಗ್ಯಕ್ಕೆ ಸಂಬಂಧಿಸಿದ ಸಚಿವನಾಗಿ ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಸರ್ಕಾರ ನಿಮ್ಮ ಕಷ್ಟಕ್ಕೆ ನಿಲ್ಲುತ್ತದೆ ಎಂದರು.

ಕೊಪ್ಪಳ ಮಾಜಿ ಸಂಸದರಾದ ಸಂಗಣ್ಣ ಕರಡಿ ಧರಣಿ ಬೆಂಬಲಿಸಿ ಮಾತನಾಡಿ, ಒಂದು ಲಕ್ಷ ರೂ. ದೇಣಿಗೆ ಘೋಷಣೆ ಮಾಡಿದರು.

ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಬೇಡಿಕೆ ಪತ್ರ ಸಚಿವರಿಗೆ ಸಲ್ಲಿಸಿ ಆರೋಗ್ಯ ಕಾಪಾಡಿ ಎಂದರು. ಜಂಟಿ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರೂಪಿಸಿದರು. ಧರಣಿಯಲ್ಲಿ ಬಡಗಲಪುರ ನಾಗೇಂದ್ರ, ಎಚ್. ಆರ್. ಬಸವರಾಜಪ್ಪ, ಸೂರ್ಯಕಾಂತ ಗುಣಕಿಮಠ, ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ, ವೀರೇಶ ಮಹಾಂತಯ್ಮನಮಠ, ರಾಜು ಬಾಕಳೆ, ಸರೋಜಾ ಬಾಕಳೆ, ಸಾವಿತ್ರಿ ಮಜುಂದಾರ್, ಡಾ. ಮಂಜುನಾಥ ಸಜ್ಜನ್, ರಮೇಶ ತುಪ್ಪದ, ಸಂತೋಷ ದೇಶಪಾಂಡೆ, ಮಾಲಾ ಬಡಿಗೇರ, ಮಂಜುನಾಥ ಅಂಗಡಿ, ಶರಣಪ್ಪ ಸಜ್ಜನ್, ಈರಪ್ಪ ಕಂಬಳಿ, ಕೃಷ್ಣಾರಡ್ಡಿ ಗಲಿಬಿ, ನಿವೃತ್ತ ಕಲಬುರ್ಗಿ ವಿವಿ ಹಿಂದಿ ವಿಭಾಗದ ಮುಖ್ಯಸ್ಥರಾದ ಕಾಶಿನಾಥ್ ಅಂಬಲಗಿ, ರಂಗ ನಿರ್ದೇಶಕ ಕವಿ ಸೂರ್ಯಕಾಂತ ಗುಣಕಿಮಠ, ನಿವೃತ್ತ ಭಾಷಾಂತರ ಇಲಾಖೆ ಮುಖ್ಯಸ್ಥರು ಸಾಹಿತಿ ಈರಪ್ಪ ಕಂಬಳಿ, ಪತ್ರಿಕಾ ಕರ್ತರು ಟಿ. ಟಿ. ಕಸ್ತೂರಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಕರ್ನಾಟಕ ರೈತ ಸಂಘ (ಏಐಯುಕೆಎಸ್) ರಾಜ್ಯಾಧ್ಯಕ್ಷ ಡಿ. ಎಚ್. ಪೂಜಾರ್, ಶಿಕ್ಷಣ ಉಳಿತಸಿ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ವಿಎನ್ ರಾಜಶೇಖರ ಪರಿಸರಕ್ಕಾಗಿ ನಾವು ಸಂಘಟನೆಯ ಗೌರವಾಧ್ಯಕ್ಷರಾದ ಆಂಜನೇಯ ರೆಡ್ಡಿ, ನಿವೃತ್ತ ಪ್ರಾಚಾರ್ಯರು ಕಥೆಗಾರರು ಮಲ್ಲಿಕಾರ್ಜುನ್ ಹಿರೇಮಠ, ಉಪನ್ಯಾಸಕ ರಾಜೇಶ್ ಭಟ್, ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಈ. ಬಸವರಾಜ, ಶಂಕರ ಹೂಗಾರ, ಡಾ. ಬಸವರಾಜ ಪೂಜಾರ್, ಶರಣು ಪಾಟೀಲ್, ಪ್ರಕಾಶಕ ಡಿ. ಎಂ. ಬಡಿಗೇರ್, ಮೂಕಪ್ಪ ಮೇಸ್ತ್ರಿ ಬಸಾಪುರ, ಬಸವರಾಜ್ ಪೂಜಾರ್ ಕಾಸನಕಂಡಿ, ಮಹೇಶ ವದ್ನಾಳ, ಮಹಿಳಾ ಸಂಘದ ವಿದ್ಯಾ ನಾಲ್ವಾಡ, ವಿಶಾಲಾಕ್ಷಿ ಹಳಪೇಟಿ, ಹಿರೇಬಗ್ನಾಳ ರತ್ನಮ್ಮ, ಹುಸೇನಮ್ಮ ಗಾಂಧಿನಗರ, ಗಣೇಶರೆಡ್ಡಿ ಕನಕಗಿರಿ, ಮಕ್ಬುಲ್ ರಾಯಚೂರು, ನಟರಾಜ ಸವಡಿ, ಚನ್ನವೀರಯ್ಯ ಹಿರೇಮಠ, ಯಮನೂರಪ್ಪ ಹಳ್ಳಿಕೇರಿ, ಹುಲಿಗೇಶ ಬೋವಿ, ಗಣೇಶ ವಿಶ್ವಕರ್ಮ, ಶ್ರೀನಿವಾಸ್ ಎಚ್ ಕಾಸನಕಂಡಿ, ಗಣೇಶ್ ರೆಡ್ಡಿ ನಕಗಿರಿ, ಸುಭಾನ್ ಸಾಬ್ ನೀರಲಗಿ, ಎಸ್. ಎಂ. ಕಂಬಾಳಿಮಠ, ಹನುಮಂತಪ್ಪ ಗೊಂದಿ, ಎಲ್ಲಪ್ಪ ಬಿ ಬಂಡಿ, ಮಂಜುನಾಥ ಕೊಂಡನಳ್ಳಿ, ಜಗದೀಶ್ ಕುಂಬಾರ, ಮಲ್ಲಪ್ಪ ಮೇಟಿ ಸೇರಿ ಅನೇಕರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande