
ಬಾಗಲಕೋಟೆ, 22 ಮಾರ್ಚ್ (ಹಿ.ಸ.)
ಆ್ಯಂಕರ್ : ಇತ್ತೀಚಿನ ದಿನಗಳಲ್ಲಿ ಇಮೇಲ್ ಹಾಗೂ ಎಸ್ಎಂಎಸ್ ಮೂಲಕ ನಡೆಯುವ ಸೈಬರ್ ವಂಚನೆಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವಂತೆ ಬಾಗಲಕೋಟೆ ಜಿಲ್ಲಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಅನುಮಾನಾಸ್ಪದ ಲಿಂಕ್ಗಳು ಅಥವಾ ಅಟ್ಯಾಚ್ಮೆಂಟ್ಗಳನ್ನು ಕ್ಲಿಕ್ ಮಾಡಬಾರದು. ತುರ್ತು ಮಾಹಿತಿ ಕೇಳುವ ಅಥವಾ ಭಯ ಹುಟ್ಟಿಸುವ ಸಂದೇಶಗಳನ್ನು ನಂಬದೆ ಜಾಗ್ರತೆ ವಹಿಸಬೇಕು ಎಂದು ಪ್ರಕಟಣೆಯಲ್ಲಿ ಮೂಲಕ ಸಲಹೆ ನೀಡಿದ್ದಾರೆ.
ಅಪರಿಚಿತ ವ್ಯಕ್ತಿಗಳಿಂದ ಬಂದ ಇಮೇಲ್ಗಳಿಗೆ ಪ್ರತಿಕ್ರಿಯಿಸಬಾರದು ಹಾಗೂ ತಮ್ಮ ವೈಯಕ್ತಿಕ ಮಾಹಿತಿ, ಓಟಿಪಿ , ಪಾಸ್ವರ್ಡ್ ಸೇರಿದಂತೆ ಯಾವುದೇ ಗುಪ್ತ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸೂಚಿಸಲಾಗಿದೆ.
ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡುವಂತೆ ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande