ಜಲ ಸಂರಕ್ಷಣೆಗಾಗಿ ಸಂಕಲ್ಪ ಅಗತ್ಯ:ಸಚಿವ ಎನ್.ಎಸ್. ಭೋಸರಾಜು
ಬೆಂಗಳೂರು, 22 ಮಾರ್ಚ್ (ಹಿ.ಸ.): ಆ್ಯಂಕರ್:ನಾಡಿನ ಜನತೆಗೆ ‘ವಿಶ್ವ ಜಲ ದಿನದ ಅಂಗವಾಗಿ ಶುಭಾಶಯಗಳನ್ನು ತಿಳಿಸಿರುವ ಸಚಿವ ಎನ್.ಎಸ್. ಭೋಸರಾಜು, ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದ್ದಾರೆ. ಈ ವರ್ಷದ ವಿಶ್ವ ಜಲ ದಿನದ ಘೋಷವಾಕ್ಯ ನೀರು ಹರಿಯುವ ಕಡೆ ಸಮಾನತೆ ನೆಲೆಸುತ್
Bosraju


ಬೆಂಗಳೂರು, 22 ಮಾರ್ಚ್ (ಹಿ.ಸ.):

ಆ್ಯಂಕರ್:ನಾಡಿನ ಜನತೆಗೆ ‘ವಿಶ್ವ ಜಲ ದಿನದ ಅಂಗವಾಗಿ ಶುಭಾಶಯಗಳನ್ನು ತಿಳಿಸಿರುವ ಸಚಿವ ಎನ್.ಎಸ್. ಭೋಸರಾಜು, ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದ್ದಾರೆ.

ಈ ವರ್ಷದ ವಿಶ್ವ ಜಲ ದಿನದ ಘೋಷವಾಕ್ಯ ನೀರು ಹರಿಯುವ ಕಡೆ ಸಮಾನತೆ ನೆಲೆಸುತ್ತದೆ ಎಂಬ ಮಹತ್ವದ ಸಂದೇಶವನ್ನು ನೀಡುತ್ತದೆ. ನೀರು ಕೇವಲ ಪ್ರಕೃತಿ ಸಂಪನ್ಮೂಲವಲ್ಲ, ಅದು ಸಮಾನತೆ, ಘನತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಮೂಲಾಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ನೀರನ್ನು ಸೃಷ್ಟಿಸುವ ಶಕ್ತಿ ಮಾನವನಲ್ಲಿಲ್ಲ. ಆದರೆ ಪೂರ್ವಜರು ನಿರ್ಮಿಸಿದ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಪ್ರಕೃತಿಯ ವರದಾನವಾದ ನೀರನ್ನು ಮುಂದಿನ ಪೀಳಿಗೆಗಳಿಗೆ ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಇದರೊಂದಿಗೆ ಸುಸ್ಥಿರ ಹಾಗೂ ಸಮೃದ್ಧ ಕರ್ನಾಟಕ ನಿರ್ಮಾಣ ಸಾಧ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೀರನ್ನು ಮಿತವಾಗಿ ಬಳಸುವುದು ಹಾಗೂ ಜಲಮೂಲಗಳ ಸಂರಕ್ಷಣೆ ಮಾಡುವ ಮೂಲಕ ಭವಿಷ್ಯದ ಪೀಳಿಗೆಗೆ ಜಲಭದ್ರತೆ ಒದಗಿಸಬೇಕು. “ನೀರಿದ್ದರೆ ನಾಳೆ” ಎಂಬ ಸತ್ಯವನ್ನು ಅರಿತು, ಹನಿ ಹನಿ ನೀರನ್ನು ಉಳಿಸಲು ಈ ವಿಶ್ವ ಜಲ ದಿನದಂದು ಸಂಕಲ್ಪ ಮಾಡೋಣ ಎಂದು ಅವರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande