
ಹಾಸನ, 21 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು. ವೆಬ್ ಸೈಟ್ hಣಣಠಿs://sevಚಿsiಟಿಜhugs.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ತಮ್ಮ ಅರ್ಜಿಯನ್ನು ಯಾವ ಹಂತದಲ್ಲಿದೆ ಎಂಬುವುದನ್ನು ಪರಿಶೀಲಿಸಿಕೊಂಡು, ಹಾಗೂ ಪರಿಶೀಲನೆಗೆ ಬಾಕಿ ಉಳಿದಿರುವ ಅಭ್ಯರ್ಥಿಗಳೂ ಮಾತ್ರ ಸೂಚಿಸಲ್ಪಟ್ಟ ಇಲಾಖೆಯ ಕಚೇರಿಗಳಿಗೆ ತಮ್ಮ ಎಲ್ಲ ಮೂಲ ಅಂಕಪಟ್ಟಿ ಹಾಗು ಇತರೆ ಪ್ರಮಾಣ ಪತ್ರಗಳೊಂದಿಗೆ ಖುದ್ದಾಗಿ ಭೇಟಿ ನೀಡಿ, ಪರಿಶಿಲಿಸಿ ಶ್ರೀಘ್ರವಾಗಿ ದೃಡೊಕರಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಈಗಾಗಲೇ ನೋಂದಾಯಿಸಿಕೊಂಡು ಹಣ ಪಡೆಯುತ್ತಿರುವ ಫಲಾನುಭವಿಗಳು ಪ್ರತಿ ತಿಂಗಳು 25ನೇ ದಿನಾಕದೊಳಗೆ ಸ್ವಯಂ-ಘೋಷಣೆಯನ್ನು ಮಾಡಿಕೊಳ್ಳಬೇಕಾಗಿ ಈ ಮೂಲಕ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08172-296374 ಸಂಪರ್ಕಿಸುವಂತೆ ಉದ್ಯೊಗಾಧಿಕಾರಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa