ಕೇಶವ ನಮನ’ ಕಾರ್ಯಕ್ರಮ: ಶತಕಂಠ ಗಾಯನದಲ್ಲಿ ಮೊಳಗಿದ ರಾಷ್ಟ್ರಭಕ್ತಿ
ಹುಬ್ಬಳ್ಳಿ, 21 ಮಾರ್ಚ್ (ಹಿ.ಸ.): ಆ್ಯಂಕರ್: ಲೋಕಹಿತ ಟ್ರಸ್ಟ್ ಹಾಗೂ ಸಹಯೋಗ ಸಂಸ್ಕಾರ ಭಾರತಿ ವತಿಯಿಂದ ಹುಬ್ಬಳ್ಳಿ ನಗರದಲ್ಲಿ “ಕೇಶವ ನಮನ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ “ಶತ ಕಂಠ ಗಾಯನ” ವಿಶೇಷ ಆಕರ್ಷಣೆಯಾಗಿದ್ದು, ನೂರುಕ್ಕೂ
ನರೇಂದ್ರ


ಹುಬ್ಬಳ್ಳಿ, 21 ಮಾರ್ಚ್ (ಹಿ.ಸ.):

ಆ್ಯಂಕರ್:

ಲೋಕಹಿತ ಟ್ರಸ್ಟ್ ಹಾಗೂ ಸಹಯೋಗ ಸಂಸ್ಕಾರ ಭಾರತಿ ವತಿಯಿಂದ ಹುಬ್ಬಳ್ಳಿ ನಗರದಲ್ಲಿ “ಕೇಶವ ನಮನ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ “ಶತ ಕಂಠ ಗಾಯನ” ವಿಶೇಷ ಆಕರ್ಷಣೆಯಾಗಿದ್ದು, ನೂರುಕ್ಕೂ ಹೆಚ್ಚು ಗಾಯಕರಿಂದ ರಾಷ್ಟ್ರಭಕ್ತಿ ಗೀತೆಗಳು ಮೊಳಗಿದವು. ದೇಶಭಕ್ತಿಯ ಮನೋಭಾವನೆಗೆ ಸಾಕ್ಷಿಯಾದ ಈ ಗಾಯನ ಕಾರ್ಯಕ್ರಮವು ಪ್ರೇಕ್ಷಕರಲ್ಲಿ ಉತ್ಸಾಹ ತುಂಬಿತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರಕರಾದ ನರೇಂದ್ರ ಅವರು, ಡಾ. ಕೇಶವ ಬಲಿರಾಮ ಹೆಡ್ಗೇವಾರ್ ಅವರ ಜೀವನ ಮತ್ತು ಸಾಧನೆಗಳನ್ನು ಸ್ಮರಿಸಿದರು.

ಹನ್ನೊಂದನೇ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡರೂ ದೇಶಭಕ್ತಿಯ ದಾರಿಯಿಂದ ವಿಚಲಿತರಾಗದೆ ಡಾಕ್ಟರ್‌ಜಿ, ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ನಂತರ ಕ್ರಾಂತಿಕಾರ್ಯಗಳಲ್ಲಿ ತೊಡಗಿಕೊಂಡರು. ಕಾಂಗ್ರೆಸ್‌ನಲ್ಲಿಯೂ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ದೇಶದ ಗುಲಾಮಗಿರಿಯ ಮೂಲ ಕಾರಣಗಳ ಬಗ್ಗೆ ಆಳವಾದ ಚಿಂತನೆ ನಡೆಸಿದರು ಎಂದು ಹೇಳಿದರು.

“ದೇಶಭಕ್ತಿ ಕೇವಲ ಭಾವನೆ ಅಲ್ಲ, ಅದು ನಡವಳಿಕೆಯಾಗಬೇಕು. ರಾಜಿಯಿಲ್ಲದ ದೇಶಭಕ್ತಿ ಪ್ರತಿಯೊಬ್ಬರಲ್ಲೂ ಬೆಳೆಬೇಕು” ಎಂದು ಅವರು ಹೇಳಿದರು.

ಹಿಂದೂ ಸಂಘಟನೆಗಾಗಿ ಕೈಗೊಂಡ ಪ್ರಯತ್ನಕ್ಕೆ ಆರಂಭದಲ್ಲಿ ಅಪಹಾಸ್ಯ ಎದುರಾದರೂ, ತಮ್ಮ ದೃಢ ಸಂಕಲ್ಪದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ವಿಶ್ವದ ಅತಿದೊಡ್ಡ ಸಂಘಟನೆಯಾಗಿ ರೂಪಿಸಿದವರು ಡಾಕ್ಟರ್‌ಜಿ ಎಂದು ತಿಳಿಸಿದರು.

ಇಂದು ಸಂಘವು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಜ್ಜನರ ಸಂಘಟನೆಯ ಮೂಲಕ ರಾಷ್ಟ್ರ ನಿರ್ಮಾಣವೇ ಉದ್ದೇಶವಾಗಿದೆ. ಪ್ರತಿಯೊಬ್ಬರೂ ದೇಶಕ್ಕಾಗಿ ಹೆಚ್ಚಿನ ಸಮಯ ಮೀಸಲಿಟ್ಟು ಸೇವೆ ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande