
ಚಿತ್ರದುರ್ಗ, 21 ಮಾರ್ಚ್ (ಹಿ.ಸ.):
ಆ್ಯಂಕರ್:
ಚಿತ್ರದುರ್ಗ ನಗರದ ಕೋಟೆ ಪೊಲೀಸ್ ಠಾಣಾ ಆವರಣದಲ್ಲಿ ಇದೇ ಮಾರ್ಚ್ 24ರಂದು ಬೆಳಿಗ್ಗೆ 11ಕ್ಕೆ ವಾರಸುದಾರರು ಪತ್ತೆಯಾಗದ 30 ಮೋಟಾರ್ ಬೈಕ್‍ಗಳ ಬಹಿರಂಗ ಹರಾಜು ನಡೆಯಲಿದೆ.
ಕೋಟೆ ಪೊಲೀಸ್ ಠಾಣೆಯ ಡಿ.ಪಿ. ಸಂಖ್ಯೆ 11/2026ರ ಅಡಿಯಲ್ಲಿ ಅಮಾನತ್ತುಪಡಿಸಿಕೊಂಡಿದ್ದ ಹಾಗೂ ಮಾಲೀಕರು ಪತ್ತೆಯಾಗದ ಈ ವಾಹನಗಳನ್ನು ಹರಾಜು ಮಾಡಲು ನ್ಯಾಯಾಲಯವು ಅನುಮತಿ ನೀಡಿದೆ.
ಆರ್.ಟಿ.ಒ ಅಧಿಕಾರಿಗಳು ಈಗಾಗಲೇ ಈ ವಾಹನಗಳ ಮೌಲ್ಯಮಾಪನ ಮಾಡಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ಅನುಮೋದನೆಯ ಮೇರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಆಸಕ್ತ ಸಾರ್ವಜನಿಕರು ಇದೇ ಮಾರ್ಚ್ 24ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ಆವರಣದಲ್ಲಿ ನಡೆಯುವ ಹರಾಜಿನಲ್ಲಿ ಭಾಗವಹಿಸಬಹುದು ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa