ಬಳ್ಳಾರಿ : ಜಿಲ್ಲೆಯ ರೈಲ್ವೆ ಅಭಿವೃದ್ಧಿಗಾಗಿ ಸಂಸದರ ಜೊತೆ ಚರ್ಚೆ
ಬಳ್ಳಾರಿ, 21 ಮಾರ್ಚ್ (ಹಿ.ಸ.) ಆ್ಯಂಕರ್ : ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಬಳ್ಳಾರಿ ಭಾಗದ ರೈಲ್ವೆ ಸಮಸ್ಯೆಗಳ ಕುರಿತು ಸಂಸದ ಈ. ತುಕಾರಾಂ ಅವರ ಜೊತೆ ಒಂದು ಗಂಟೆ ಕಾಲ ಚರ್ಚಿಸಿ, ಎರೆಡು ರೈಲುಗಳ ಪುನರಾರಂಭ ಮತ್ತು ಹೊಸ ಮಾರ್ಗಗಳ ಕುರಿತು ಶನಿವಾರ ಮನವಿ ಸಲ್ಲಿಸಿದ್ದಾರೆ. ಕರ್
ಬಳ್ಳಾರಿ : ಜಿಲ್ಲೆಯ ರೈಲ್ವೆ ಅಭಿವೃದ್ಧಿಗಾಗಿ ಸಂಸದರ ಜೊತೆ ಚರ್ಚೆ


ಬಳ್ಳಾರಿ : ಜಿಲ್ಲೆಯ ರೈಲ್ವೆ ಅಭಿವೃದ್ಧಿಗಾಗಿ ಸಂಸದರ ಜೊತೆ ಚರ್ಚೆ


ಬಳ್ಳಾರಿ : ಜಿಲ್ಲೆಯ ರೈಲ್ವೆ ಅಭಿವೃದ್ಧಿಗಾಗಿ ಸಂಸದರ ಜೊತೆ ಚರ್ಚೆ


ಬಳ್ಳಾರಿ : ಜಿಲ್ಲೆಯ ರೈಲ್ವೆ ಅಭಿವೃದ್ಧಿಗಾಗಿ ಸಂಸದರ ಜೊತೆ ಚರ್ಚೆ


ಬಳ್ಳಾರಿ : ಜಿಲ್ಲೆಯ ರೈಲ್ವೆ ಅಭಿವೃದ್ಧಿಗಾಗಿ ಸಂಸದರ ಜೊತೆ ಚರ್ಚೆ


ಬಳ್ಳಾರಿ, 21 ಮಾರ್ಚ್ (ಹಿ.ಸ.)

ಆ್ಯಂಕರ್ : ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಬಳ್ಳಾರಿ ಭಾಗದ ರೈಲ್ವೆ ಸಮಸ್ಯೆಗಳ ಕುರಿತು ಸಂಸದ ಈ. ತುಕಾರಾಂ ಅವರ ಜೊತೆ ಒಂದು ಗಂಟೆ ಕಾಲ ಚರ್ಚಿಸಿ, ಎರೆಡು ರೈಲುಗಳ ಪುನರಾರಂಭ ಮತ್ತು ಹೊಸ ಮಾರ್ಗಗಳ ಕುರಿತು ಶನಿವಾರ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಕೆ.ಎಂ. ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಕೊಲ್ಹಾಪುರ್ - ಮುನಗೂರು ರೈಲು ಮತ್ತು ಶಿವಮೊಗ್ಗ ಚೆನ್ನೈ ರೈಲು ಸೇರಿದಂತೆ ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ನಿತ್ಯ ಬೆಳಗ್ಗೆ `ವಂದೇ ಭಾರತ್' ಇಲ್ಲವೇ ಇಂಟರ್ಸಿಟಿ ರೈಲನ್ನು ಆರಂಭಿಸಬೇಕು. ಬಳ್ಳಾರಿಯ ಬೈಪಾಸ್ ರೈಲ್ವೆ ನಿಲ್ದಾಣವನ್ನು ಪ್ರಾರಂಭಿಸಿ ಮೈಸೂರು - ಅಜ್ಮೀರ್ ರೈಲು ಬಳ್ಳಾರಿ - ಹೊಸಪೇಟೆ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕು ಎಂದು ಮನವಿ ಸಲ್ಲಿಸಿತು.

ಬಳ್ಳಾರಿ - ಸಿರುಗುಪ್ಪ ಮತ್ತು ಸಿಂಧನೂರು ನೂತನ ರೈಲು ಮಾರ್ಗವನ್ನು ಪ್ರಾರಂಭಿಸಬೇಕು. ಹಗರಿ ಆಧುನಿ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಬೇಕು. ಅಲ್ಲದೇ, ಬಳ್ಳಾರಿ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಸುಧಾ ಕ್ರಾಸ್ ರೈಲ್ವೆ ಬ್ರಿಡ್ಜ್, ರೇಡಿಯೋಪಾರ್ಕ್ ರೈಲ್ವೆ ಮೇಲ್ಸೇತುವೆ, ಬಳ್ಳಾರಿ ರೈಲ್ವೆ ನಿಲ್ದಾಣ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.

ಸಂಸದರಾದ ಈ. ತುಕಾರಾಂ ಅವರು, ಸುಧಾ ಕ್ರಾಸ್ ರೈಲ್ವೆ ಬ್ರಿಡ್ಜ್, ರೇಡಿಯೋಪಾರ್ಕ್ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ಪೂರ್ಣಗೊಳ್ಳಲು ಇದ್ದ ಸಮಸ್ಯೆಗಳು ಪರಿಹಾರವಾಗಿವೆ. ಶೀಘ್ರದಲ್ಲೇ ಕಾಮಗಾರಿ ವೇಗವನ್ನು ಪಡೆಯಲಿದೆ ಎಂದರು.

ಸಮಿತಿಯ ಮುಖಂಡರಾದ ಪಿ. ಯೋಗಿರಾಜ್, ಕುಪಗಲ್ ವೀರೇಶ್, ಪಿ. ಬಂಡೇಗೌಡ, ಎಚ್.ಕೆ. ಗೌರಿಶಂಕರ್, ಕೆ.ಎಂ. ಉಮಾಪತಿಗೌಡ, ಬಿ.ಎಂ. ಎರ್ರಿಸ್ವಾಮಿ, ಸಿಂಧುವಾಳ ಮಹೇಶ್ ಗೌಡ, ಎ.ಪಿ. ಉಮೇಶ್, ಬಸವರಾಜ್, ಶ್ರೀಧರಗೌಡ, ಪಿ. ಭರತಂರಾಜ್, ಕೋಳೂರು ಚಂದ್ರಶೇಖರಗೌಡ, ಬಿ.ಎಂ. ಬಸವರಾಜ್ ಇನ್ನಿತರರು ಈ ಸಂದರ್ಭದಲ್ಲಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande