ಮಾರ್ಚ್ 23 ರಂದು ಹೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ
ಧಾರವಾಡ, 20 ಮಾರ್ಚ್ (ಹಿ.ಸ.): ಆ್ಯಂಕರ್: ಹೆಸ್ಕಾಂ ಶಹರ ಉಪ ವಿಭಾಗ 2 ರ ಕಛೇರಿಯಲ್ಲಿ ಗ್ರಾಹಕರ ಕುಂದು ಕೊರೆತಗಳ ಸಭೆಯನ್ನು ಮಾರ್ಚ್ 23, 2026 ರಂದು ಸೋಮವಾರ ಮದ್ಯಾಹ್ನ 3 ಗಂಟೆಗೆ ಧಾರವಾಡದ ವಿಜಯಾ ರಸ್ತೆ, ಶಹರ ಉಪ ವಿಭಾಗ 2 ರ ಹೆಸ್ಕಾಂ ಕಚೇರಿಯಲ್ಲಿ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಹೆಸ್ಕಾಂ
ಮಾರ್ಚ್ 23 ರಂದು ಹೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ


ಧಾರವಾಡ, 20 ಮಾರ್ಚ್ (ಹಿ.ಸ.):

ಆ್ಯಂಕರ್:

ಹೆಸ್ಕಾಂ ಶಹರ ಉಪ ವಿಭಾಗ 2 ರ ಕಛೇರಿಯಲ್ಲಿ ಗ್ರಾಹಕರ ಕುಂದು ಕೊರೆತಗಳ ಸಭೆಯನ್ನು ಮಾರ್ಚ್ 23, 2026 ರಂದು ಸೋಮವಾರ ಮದ್ಯಾಹ್ನ 3 ಗಂಟೆಗೆ ಧಾರವಾಡದ ವಿಜಯಾ ರಸ್ತೆ, ಶಹರ ಉಪ ವಿಭಾಗ 2 ರ ಹೆಸ್ಕಾಂ ಕಚೇರಿಯಲ್ಲಿ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಹೆಸ್ಕಾಂ (ವಿ) ಕಾರ್ಯ ಮತ್ತು ಪಾಲನೆ ಉಪ ವಿಭಾಗ-2, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು ವಹಿಸುವರು.

ಶಹರ ಉಪ ವಿಭಾಗ-2, ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ, ಸಭೆಯ ಸದುಪಯೋಗ ಪಡೆದುಕೊಂಡು ತಮ್ಮ ವಿದ್ಯುತ್ ಬಗ್ಗೆ ಇದ್ದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು ಎಂದು ಹೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande