
ಬಾಗಲಕೋಟೆ, 20 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ., ಜಮಖಂಡಿ ಇದರ ಆಡಳಿತ ಮಂಡಳಿಗೆ ನೂತನ ನಾಮನಿರ್ದೇಶನಕರಾಗಿ ಆಯ್ಕೆಯಾಗಿರುವ ಶಿವಪ್ಪಾ ರಾಮಪ್ಪ ಗಳವೆ ಅವರು ಇಂದು ಕಾಂಗ್ರೆಸ್ ಮುಖಂಡ ಆನಂದ ನ್ಯಾಮಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆನಂದ ನ್ಯಾಮಗೌಡ ಅವರು ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಶಿವಪ್ಪಾ ರಾಮಪ್ಪ ಗಳವೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಶಿವಪ್ಪಾ ಗಳವೆ ಅವರ ಆಯ್ಕೆಯಿಂದ ಬ್ಯಾಂಕ್ ಆಡಳಿತ ಮಂಡಳಿಗೆ ಇನ್ನಷ್ಟು ಬಲ ಸಿಗಲಿದ್ದು, ರೈತರು ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ಸಹಕಾರಿ ವಲಯದಲ್ಲಿ ಉತ್ತಮ ಸೇವೆ ದೊರೆಯುವ ವಿಶ್ವಾಸ ವ್ಯಕ್ತವಾಯಿತು.
ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ತಮ್ಮಿಂದಾದ ಕೊಡುಗೆ ನೀಡುವುದಾಗಿ ಶಿವಪ್ಪಾ ಗಳವೆ ತಿಳಿಸಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande