
ಹಾಸನ, 19 ಮಾರ್ಚ್ (ಹಿ.ಸ.):
ಆ್ಯಂಕರ್:
2026ನೇ ಸಾಲಿನಲ್ಲಿ ಹಾಸನ ಜಿಲ್ಲಾ ಬಾಲಭವನ ಯೋಜನೆಯಡಿ 6 ರಿಂದ 16 ವರ್ಷದೊಳಗಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉಚಿತವಾಗಿ ಹಾಗೂ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ರೂ. 100 ಶುಲ್ಕದೊಂದಿಗೆ 200 ಮಕ್ಕಳ ಮಿತಿಯೊಳಗೆ 25 ದಿನಗಳ ಯೋಗ, ಸಂಗೀತ, ನೃತ್ಯ, ಅಬಕಾಸ್, ಆತ್ಮ ರಕ್ಷಣಾ ಕಲೆ, ಕರಾಟೆ, ಗಾಳಿಪಟ ತಯಾರಿ/ಕ್ರಾಫ್ಟ್, ಕ್ಯಾಲಿಗ್ರಾಪಿ, ಹಾಸ್ಯ ಮತ್ತು ಶೈಕ್ಷಣಿಕ ಚಲನಚಿತ್ರ ವೀಕ್ಷಣೆ, ವಾರ್ಲಿಕಲೆ, ಸ್ಪೋಕನ್ ಇಂಗ್ಲೀಷ್, ಬಾಲಕರ ರಂಗೋಲಿ ಸ್ಪರ್ಧೆ ಮತ್ತು ಸಾಂಸ್ಕೃತಿಕ ದಿನ ಈ ಚಟುವಟಿಕೆಗಳನ್ನೊಳಗೊಂಡ ಬೇಸಿಗೆ ಶಿಬಿರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ
ಆಸಕ್ತಿಯುಳ್ಳ ಮಕ್ಕಳು ಬೇಸಿಗೆ ಶಿಬಿರಕ್ಕೆ ಹೆಸರನ್ನು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯಲ್ಲಿ ಮಾ.25 ರೊಳಗೆ ನೋಂದಾಯಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08172-267218 ಬಾಲಭವನ ಕಾರ್ಯಕ್ರಮ ಸಂಯೋಜಕರು: 8197132944 ಹಾಗೂ ಕಚೇರಿ ಸಹಾಯಕರು; 8495839556 ರನ್ನು ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa