
ನವದೆಹಲಿ, 18 ಮಾರ್ಚ್ (ಹಿ.ಸ.):
ಆ್ಯಂಕರ್:
ಉಕ್ಕಿನ ಆಮದು ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಉಕ್ಕು ಸಚಿವಾಲಯ ಮಾರ್ಚ್ 23, 2026 ರಂದು ಮುಕ್ತ ಸಭೆ ಆಯೋಜಿಸಿದೆ.
ನವದೆಹಲಿಯ ನೇತಾಜಿ ನಗರದಲ್ಲಿರುವ ಜಿಪಿಒಎ–3 ಕಟ್ಟಡದ ಮೂರನೇ ಮಹಡಿಯ ಸ್ಟೀಲ್ ರೂಮ್‌ನಲ್ಲಿ ಈ ಸಭೆ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಉಕ್ಕು ಆಮದು, ವಿಶೇಷವಾಗಿ ಸಿಮ್ಸ್, ಸರಳ ಸಿಮ್ಸ್ ಮತ್ತು QCO ವಿನಾಯಿತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕಂಪನಿಗಳು ಹಾಗೂ ಉದ್ಯಮ ಸಂಘಗಳು ತಮ್ಮ ಅಹವಾಲುಗಳನ್ನು ಈ ಸಭೆಯಲ್ಲಿ ಮಂಡಿಸಬಹುದು.
ಸಭೆಯಲ್ಲಿ ಭಾಗವಹಿಸಲು ಆಸಕ್ತ ಸಂಸ್ಥೆಗಳು ಮಾರ್ಚ್ 20ರೊಳಗೆ tech-steel@nic.in ಇ-ಮೇಲ್‌ಗೆ ಅರ್ಜಿ ಸಲ್ಲಿಸಿ, ದೃಢೀಕೃತ ಸಮಯ ಸ್ಲಾಟ್ ಪಡೆಯಬೇಕಿದೆ. ಲಾಜಿಸ್ಟಿಕ್ ಕಾರಣಗಳಿಂದ ವಾಕ್-ಇನ್‌ಗೆ ಅವಕಾಶವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇ-ಮೇಲ್‌ನಲ್ಲಿ ಕಂಪನಿ/ಸಂಘದ ಹೆಸರು, ಉದ್ಯಮ ಮತ್ತು ಉತ್ಪನ್ನದ ಪ್ರಕಾರ (ಆಟೋ, ಏರೋಸ್ಪೇಸ್, ಟೆಲಿಕಾಂ, ರಕ್ಷಣಾ ಇತ್ಯಾದಿ), ಸಮಸ್ಯೆಯ ಸ್ವರೂಪ, ಸಂಬಂಧಿತ ಅರ್ಜಿಯ ಉಲ್ಲೇಖ (ಇದ್ದಲ್ಲಿ), ಸಮಸ್ಯೆಯ ಸಂಕ್ಷಿಪ್ತ ವಿವರಣೆ (ಗರಿಷ್ಠ 50 ಪದಗಳು), ಭಾಗವಹಿಸುವವರ ಹೆಸರು, ಹುದ್ದೆ ಹಾಗೂ ಸಂಪರ್ಕ ವಿವರಗಳನ್ನು ನೀಡಬೇಕು. ಮೂರನೇ ವ್ಯಕ್ತಿಯ ಪ್ರತಿನಿಧಿತ್ವಕ್ಕೆ ಅವಕಾಶ ಇರುವುದಿಲ್ಲ.
ವ್ಯಾಪಕ ಭಾಗವಹಿಸುವಿಕೆಯನ್ನು ಖಚಿತಪಡಿಸಲು ಪ್ರತಿ ಸಂಸ್ಥೆಯಿಂದ ಒಬ್ಬ ಪ್ರತಿನಿಧಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa