ಮಣಿಪುರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ: 5 ಮಂದಿಯ ಬಂಧನ
ಇಂಫಾಲ, 17 ಮಾರ್ಚ್ (ಹಿ.ಸ.): ಆ್ಯಂಕರ್:ಮಣಿಪುರದಲ್ಲಿ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ನಿರಂತರ ಕಾರ್ಯಾಚರಣೆಯಲ್ಲಿ ಐದು ಉಗ್ರರನ್ನು ಬಂಧಿಸಲಾಗಿದೆ. ಮಣಿಪುರ ಪೊಲೀಸ್ ಪ್ರಧಾನ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಟೆಂಗ್ನೌಪಾಲ್ ಜಿಲ್ಲೆಯ ಮೊರೆಹ್ ಪೊಲೀಸ್ ಠ
Arrest


ಇಂಫಾಲ, 17 ಮಾರ್ಚ್ (ಹಿ.ಸ.):

ಆ್ಯಂಕರ್:ಮಣಿಪುರದಲ್ಲಿ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ನಿರಂತರ ಕಾರ್ಯಾಚರಣೆಯಲ್ಲಿ ಐದು ಉಗ್ರರನ್ನು ಬಂಧಿಸಲಾಗಿದೆ.

ಮಣಿಪುರ ಪೊಲೀಸ್ ಪ್ರಧಾನ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಟೆಂಗ್ನೌಪಾಲ್ ಜಿಲ್ಲೆಯ ಮೊರೆಹ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ (ಬಿಪಿ 73 ಮತ್ತು 75 ನಡುವೆ) ಈ ಕಾರ್ಯಾಚರಣೆ ನಡೆಸಲಾಗಿದೆ. ಮೊರೆಹ್ ಪ್ರದೇಶವು ಮ್ಯಾನ್ಮಾರ್ ದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವುದರಿಂದ ಭದ್ರತಾ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ.

ಬಂಧಿತರಲ್ಲಿ ನಿಷೇಧಿತ ಸಂಘಟನೆಗಳಾದ ಪ್ರೀಪಾಕ್, ಕೆವೈಕೆಎಲ್, ಕೆಸಿಪಿ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಸೇರಿದ್ದಾರೆ.

ಬಂಧಿತರನ್ನು ತಂಗ್ಜಮ್ ಅಶೋಕ್ ಕುಮಾರ್ ಸಿಂಗ್ (ಖೊಂಗ್ಥಾಂಗ್), ಲೈಶ್ರಾಮ್ ನಿಪ್ಮಾಚಾ ಸಿಂಗ್ (ಲೋಯಿಯಾ), ತಂಗ್ಜಮ್ ಮಣಿಮತಮ್ ಮೈಟೈ (ಸನಾ), ಲೈಶ್ರಾಮ್ ಇನಾವೊ ಸಿಂಗ್ (ಸನ್ಮಾಚಾ) ಮತ್ತು ಚಿಂಗಂಗ್ಬಮ್ ಶಕ್ತಿ ಸಿಂಗ್ (ಫೈರಾನ್) ಎಂದು ಗುರುತಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಅವರಿಂದ ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande