
ವಿಜಯಪುರ, 17 ಮಾರ್ಚ್ (ಹಿ.ಸ.)
ಆ್ಯಂಕರ್ : ಅಂಬೇಡ್ಕರ್ ಹಬ್ಬ–2026 ಅಂಗವಾಗಿ ವಿದ್ಯಾರ್ಥಿ ಯುವ ಜನರಿಗಾಗಿ ಎರಡನೇ ವರ್ಷದ ‘ಮಹಾನಾಯಕ ಕಪ್’ ಕ್ರಿಕೆಟ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ದಲಿತ ಸಂಘಟನೆಯ ಸಂಘಟಕರು ತಿಳಿಸಿದ್ದಾರೆ.
ಏಪ್ರಿಲ್ 11ರಿಂದ 14ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಯುವಕರು ಭಾಗವಹಿಸುವ ನಿರೀಕ್ಷೆ ಇದೆ.
ಸಮಾನತೆಯ ಸಂದೇಶ ಸಾರುವ ಈ ಹಬ್ಬದಲ್ಲಿ ಕ್ರೀಡೆ ಸೇರಿದಂತೆ ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂಬೇಡ್ಕರ್ ಹಬ್ಬವನ್ನು “ನಮ್ಮೆಲ್ಲರ ಹಬ್ಬ”ವಾಗಿ ಆಚರಿಸುವ ಉದ್ದೇಶದಿಂದ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande