ಸೋಮವಾರದ ರಾಶಿ ಫಲ
ಹುಬ್ಬಳ್ಳಿ, 16 ಮಾರ್ಚ್ (ಹಿ.ಸ.): ಆ್ಯಂಕರ್: *ಮೇಷ ರಾಶಿ.* ದೂರಪ್ರದೇಶಗಳಿಗೆ ಪ್ರಯಾಣ ಅನುಕೂಲಕರವಾಗಿರುತ್ತದೆ. ಸ್ಥಿರಾಸ್ತಿ ಖರೀದಿ–ಮಾರಾಟಗಳಲ್ಲಿ ನಿರೀಕ್ಷಿತ ಲಾಭ ದೊರಕುವ ಸಾಧ್ಯತೆ ಇದೆ. ವಾಹನ ಸಂಬಂಧಿತ ವ್ಯಾಪಾರಗಳಲ್ಲಿ ಲಾಭದ ಸೂಚನೆಗಳು ಕಂಡುಬರುತ್ತವೆ. ವೃತ್ತಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ
ಸೋಮವಾರದ ರಾಶಿ ಫಲ


ಹುಬ್ಬಳ್ಳಿ, 16 ಮಾರ್ಚ್ (ಹಿ.ಸ.):

ಆ್ಯಂಕರ್:

*ಮೇಷ ರಾಶಿ.*

ದೂರಪ್ರದೇಶಗಳಿಗೆ ಪ್ರಯಾಣ ಅನುಕೂಲಕರವಾಗಿರುತ್ತದೆ. ಸ್ಥಿರಾಸ್ತಿ ಖರೀದಿ–ಮಾರಾಟಗಳಲ್ಲಿ ನಿರೀಕ್ಷಿತ ಲಾಭ ದೊರಕುವ ಸಾಧ್ಯತೆ ಇದೆ. ವಾಹನ ಸಂಬಂಧಿತ ವ್ಯಾಪಾರಗಳಲ್ಲಿ ಲಾಭದ ಸೂಚನೆಗಳು ಕಂಡುಬರುತ್ತವೆ. ವೃತ್ತಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ತೃಪ್ತಿಕರ ವಾತಾವರಣ ಇರುತ್ತದೆ. ಆರ್ಥಿಕ ಪ್ರಗತಿ ಕಂಡುಬರುತ್ತದೆ. ಇತರರೊಂದಿಗೆ ಸೌಹಾರ್ದತೆಯಿಂದ ವರ್ತಿಸುತ್ತೀರಿ.

*ವೃಷಭ ರಾಶಿ.*

ಬಂಧು-ಮಿತ್ರರೊಂದಿಗೆ ವಿನಾಕಾರಣ ವಿವಾದಗಳಿಂದ ದೂರವಿರುವುದು ಒಳ್ಳೆಯದು. ಪ್ರಮುಖ ಕಾರ್ಯಗಳಲ್ಲಿ ಕೆಲವು ಅಡೆತಡೆಗಳು ಉಂಟಾದರೂ ಬುದ್ಧಿವಂತಿಕೆಯಿಂದ ಪೂರ್ಣಗೊಳಿಸುತ್ತೀರಿ. ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಪಾಲುದಾರಿಕೆ ವ್ಯಾಪಾರಗಳಲ್ಲಿ ನಷ್ಟ ಸೂಚನೆಗಳಿವೆ. ಪ್ರಯಾಣದ ವೇಳೆ ವಾಹನ ಸಂಬಂಧಿತ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ.

*ಮಿಥುನ ರಾಶಿ.*

ಪ್ರಮುಖ ಕಾರ್ಯಗಳಲ್ಲಿ ಜೀವನ ಸಂಗಾತಿಯ ಸಹಕಾರ ಲಭಿಸುತ್ತದೆ. ಆದಾಯ ಸಂಬಂಧಿತ ವಿಚಾರಗಳು ಇನ್ನಷ್ಟು ಉತ್ತಮಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರ ವಿಸ್ತರಣೆಗೆ ಹೊಸ ಅವಕಾಶಗಳು ದೊರೆಯುತ್ತದೆ. ಹಣ ವಸೂಲಾಗುವ ಸಾಧ್ಯತೆ ಇದೆ. ಬಂಧು-ಮಿತ್ರರ ಆದರ ಮತ್ತು ಬೆಂಬಲ ದೊರೆಯುತ್ತದೆ. ಪ್ರಯಾಣದ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸುವುದು ಒಳಿತು.

*ಕಟಕ ರಾಶಿ.*

ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯುಕ್ತವಾಗುವ ಸಾಧ್ಯತೆ ಇದೆ. ವೃತ್ತಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುತ್ತೀರಿ. ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವ ಸಾಧ್ಯತೆ ಇದೆ. ಸಮಾಜದಲ್ಲಿ ನಿಮ್ಮ ಮಾತಿಗೆ ಗೌರವ ಮತ್ತು ಮೌಲ್ಯ ಹೆಚ್ಚಾಗುತ್ತದೆ. ಆಕಸ್ಮಿಕ ಧನಲಾಭದ ಸೂಚನೆಗಳಿವೆ. ಉದ್ಯೋಗ ಕ್ಷೇತ್ರದಲ್ಲಿ ಶುಭವಾರ್ತೆಗಳು ದೊರೆಯುವ ಸಾಧ್ಯತೆ ಇದೆ.

*ಸಿಂಹ ರಾಶಿ.*

ವೃತ್ತಿ ಹಾಗೂ ವ್ಯಾಪಾರ ಕಾರ್ಯಗಳು ಅಭಿವೃದ್ಧಿಯ ಮಾರ್ಗದಲ್ಲಿ ಸಾಗುವ ಸೂಚನೆಗಳಿವೆ. ಗೃಹ ಮತ್ತು ವಾಹನ ಸಂಬಂಧಿತ ಖರೀದಿ–ಮಾರಾಟಗಳಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯಬಹುದು. ಕುಟುಂಬ ಸದಸ್ಯರ ಸಹಕಾರದಿಂದ ಹೊಸ ಕಾರ್ಯಗಳನ್ನು ಆರಂಭಿಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆ ಇದೆ. ಧನ ಸಂಬಂಧಿತ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ.

*ಕನ್ಯಾ ರಾಶಿ.*

ಮೌಲ್ಯಯುತ ಗೃಹೋಪಕರಣಗಳನ್ನು ಖರೀದಿಸುವ ಸಾಧ್ಯತೆ ಇದೆ. ದೀರ್ಘಕಾಲದ ಸಾಲಗಳಿಂದ ಸ್ವಲ್ಪ ಮಟ್ಟಿಗೆ ನಿವಾರಣೆ ದೊರೆಯುತ್ತದೆ. ವೃತ್ತಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಹೆಚ್ಚಾದರೂ ಸಮರ್ಥವಾಗಿ ನಿರ್ವಹಿಸುತ್ತೀರಿ. ಸನ್ನಿಹಿತರೊಂದಿಗೆ ಇರುವ ಭಿನ್ನಾಭಿಪ್ರಾಯಗಳು ಪರಿಹಾರವಾಗುತ್ತವೆ. ವ್ಯಾಪಾರ ಕಾರ್ಯಗಳು ಉತ್ಸಾಹದಿಂದ ಸಾಗುತ್ತವೆ. ಸ್ವಲ್ಪ ಧನಲಾಭದ ಸೂಚನೆಗಳಿವೆ.

*ತುಲಾ ರಾಶಿ.*

ವೃತ್ತಿ ಹಾಗೂ ವ್ಯಾಪಾರ ಕಾರ್ಯಗಳಲ್ಲಿ ಕೆಲವು ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ಹೊಸ ವಾಹನ ಖರೀದಿ ಯತ್ನಗಳನ್ನು ಮುಂದೂಡುವುದು ಒಳಿತು. ಸಹೋದರರೊಂದಿಗೆ ಇರುವ ಆಸ್ತಿ ಸಂಬಂಧಿತ ವಿವಾದಗಳು ಪರಿಹಾರವಾಗುವ ಸಾಧ್ಯತೆ ಇದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ವ್ಯಾಪಾರ ಕಾರ್ಯಗಳು ನಿಧಾನಗತಿಯಲ್ಲಿ ಸಾಗುವ ಸಾಧ್ಯತೆ ಇದೆ.

*ವೃಶ್ಚಿಕ ರಾಶಿ.*

ದೂರದ ಬಂಧುಗಳಿಂದ ಕೆಲವು ಪ್ರಮುಖ ಮಾಹಿತಿಗಳು ದೊರೆಯಬಹುದು. ಮೌಲ್ಯಯುತ ವಸ್ತುಗಳ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಒಳಿತು. ಕೈಗೊಂಡ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸನ್ನಿಹಿತರೊಂದಿಗೆ ಇರುವ ವಿವಾದಗಳು ಶಮನವಾಗುತ್ತವೆ. ಉದ್ಯೋಗದಲ್ಲಿ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.

*ಧನುಸ್ಸು ರಾಶಿ.*

ದೂರದ ಬಂಧುಗಳಿಂದ ಶುಭಕಾರ್ಯಗಳಿಗೆ ಆಹ್ವಾನಗಳು ದೊರೆಯುತ್ತದೆ . ಮನೆಯಲ್ಲಿ ಬಂಧು-ಮಿತ್ರರೊಂದಿಗೆ ಸಂತೋಷಕರ ಸಮಯ ಕಳೆಯುವಿರಿ. ಕೈಗೊಂಡ ಕಾರ್ಯಗಳಲ್ಲಿ ಶ್ರಮ ಹೆಚ್ಚಾದರೂ ನಿಧಾನವಾಗಿ ಯಶಸ್ಸು ಸಾಧಿಸುವಿರಿ. ವೃತ್ತಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಲಾಭದಾಯಕ ಸ್ಥಿತಿ ಕಂಡುಬರುತ್ತದೆ. ಉದ್ಯೋಗದಲ್ಲಿ ಪ್ರಗತಿ ಸಂಭವಿಸುತ್ತದೆ. ನಿರುದ್ಯೋಗಿಗಳಿಗೆ ಶುಭವಾರ್ತೆ ದೊರೆಯುವ ಸಾಧ್ಯತೆ ಇದೆ.

*ಮಕರ ರಾಶಿ.*

ಧಾರ್ಮಿಕ ಹಾಗೂ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ . ಆದಾಯ ಸಂಬಂಧಿತ ವ್ಯವಹಾರಗಳು ಸಾಮಾನ್ಯ ಮಟ್ಟದಲ್ಲಿರಬಹುದು. ಮಾಡದ ಕಾರ್ಯಕ್ಕೂ ಇತರರಿಂದ ಟೀಕೆ ಎದುರಾಗುವ ಸಾಧ್ಯತೆ ಇದೆ. ಕೈಗೊಂಡ ಕಾರ್ಯಗಳಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯದ ಸಂದರ್ಭಗಳು ಉಂಟಾಗಬಹುದು. ಹೊಸ ವ್ಯಾಪಾರ ಆರಂಭಕ್ಕೆ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಉದ್ಯೋಗ ಸಂಬಂಧಿತ ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಳ್ಳುವುದು ಒಳಿತು.

*ಕುಂಭ ರಾಶಿ.*

ಸನ್ನಿಹಿತರೊಂದಿಗೆ ಇರುವ ವಿವಾದಗಳು ಪರಿಹಾರವಾಗುತ್ತವೆ. ಕುಟುಂಬ ಸದಸ್ಯರಿಂದ ಅನಿರೀಕ್ಷಿತ ಉಡುಗೊರೆಗಳು ದೊರೆಯುವ ಸಾಧ್ಯತೆ ಇದೆ. ಮನೆಯಲ್ಲಿ ವಿವಾಹ ಸಂಬಂಧಿತ ಶುಭಕಾರ್ಯಗಳ ಯತ್ನಗಳು ಫಲಿಸುವ ಸಾಧ್ಯತೆ ಇದೆ. ಮನೆ ಹಾಗೂ ಹೊರಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಪ್ರಮುಖ ಕಾರ್ಯಗಳು ಯಶಸ್ವಿಯಾಗಿ ಸಾಗುವ ಸೂಚನೆಗಳಿವೆ. ಮಕ್ಕಳ ಶಿಕ್ಷಣ ಮತ್ತು ಉದ್ಯೋಗ ಪ್ರಯತ್ನಗಳು ಫಲಪ್ರದವಾಗುತ್ತವೆ.

*ಮೀನ ರಾಶಿ.*

ಕುಟುಂಬ ಸದಸ್ಯರೊಂದಿಗೆ ದೈವದರ್ಶನ ಮಾಡುವ ಅವಕಾಶ ದೊರೆಯುತ್ತದೆ. ಮಕ್ಕಳ ಸಂಬಂಧಿತ ವಿಷಯಗಳಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಿರಿ. ಆದಾಯ ನಿರೀಕ್ಷಿಸಿದಂತೆ ದೊರೆಯುವ ಸಾಧ್ಯತೆ ಇದೆ. ವೃತ್ತಿ ಹಾಗೂ ವ್ಯಾಪಾರ ಕಾರ್ಯಗಳಲ್ಲಿ ಮಿಶ್ರ ಫಲಿತಾಂಶಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಆದರಣೆ ಹೆಚ್ಚಾಗುತ್ತದೆ. ಆರ್ಥಿಕ ಲಾಭ ದೊರೆಯಬಹುದು. ಮಿತ್ರರಿಂದ ಶುಭವಾರ್ತೆ ಸಿಗುವ ಸಾಧ್ಯತೆ ಇದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande