
ಕೊಪ್ಪಳ, 16 ಮಾರ್ಚ್ (ಹಿ.ಸ.)
ಆ್ಯಂಕರ್: ನಗರಸಭೆ ಮುಂದಿನ ಬಲ್ಡೋಟ ಹಟಾವೋ ಧರಣಿ 137ನೇ ಪೂರೈಸಿತು. ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ 20, ಹಳ್ಳಿಗಳು ಕಾರ್ಖಾನೆ ಧೂಳಿನಿಂದ
ಬಾಧಿತವಾಗಿ ನರಳುತ್ತಿರುವ ಚಿತ್ರಣವನ್ನು ಅಧ್ಯಯನ ಮಾಡಲು, ತನಿಖಾ ವರದಿಗಾಗಿ ಧಾವಿಸಿ ಬರುತ್ತಿರುವುದು ಸ್ವಾಗತಾರ್ಹ. ಆಂಗ್ಲ ಪತ್ರಿಕೆಯೊಂದರ ತನಿಖಾ ವರದಿಗಾರರು ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡು ಚರ್ಚಿಸಿದರು. ಇದರಿಂದ ಹೋರಾಟದಲ್ಲಿ ಸಂಘಟನೆಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಜವಾಬ್ದಾರಿ ಮಾಧ್ಯಮಗಳಿಗೆ ಇದೆ ಎನ್ನುವುದು ತೋರಿಸಿಕೊಟ್ಟಿತು. ಸತ್ಯವನ್ನು ಬಿತ್ತರಿಸಿ ಜನರ ಸಂಕಷ್ಟದ ಹೋರಾಟಕ್ಕೆ ಹೆಗಲಾಗಬೇಕು ಎಂದು ಕೇಳಿಕೊಂಡರು.
ಧರಣಿಯಲ್ಲಿ ಸಾಹಿತಿ ಎ.ಎಂ. ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಡಾ. ಬಸವರಾಜ ಪೂಜಾರ, ಗಂಗಾಧರ ಖಾನಾಪೂರ, ಎಸ್.ಬಿ. ರಾಜೂರು, ಬಿ.ಜಿ. ಕರಿಗಾರ, ಎನ್.ಎಂ.ಸವದತ್ತಿ ವಕೀಲರು, ರಾಜಶೇಖರ ಏಳುಬಾವಿ, ಬಸವರಾಜಪ್ಪ ಶೆಟ್ಟರ್, ಮಾಲಾ ಬಡಿಗೇರ, ರತ್ನಮ್ಮ ದೊಡ್ಡಮನಿ, ಗಂಗಮ್ಮ ಕೊಡೇಕಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ ಶರಣು ಶೆಟ್ಟರ್, ಪಂಪಣ್ಣ ಚಿಂತಪಲ್ಲಿ, ರೇವಣಸಿದ್ದಯ್ಯ ಚಿತ್ರಗಾರ , ವೈ. ಸತ್ಯನಾರಾಯಣ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ವಿಜಯ ಮಹಾಂತೇಶ ಹಟ್ಟಿ, ನಾಗರಾಜ ಕುಷ್ಟಗಿ ಇತರರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್