


ಕೊಪ್ಪಳ, 13 ಮಾರ್ಚ್ (ಹಿ.ಸ.):
ಆ್ಯಂಕರ್: ನನ್ನ ವ್ಯಾಪ್ತಿಯಲ್ಲಿ ಮಾಲಿನ್ಯ ನಿಯಂತ್ರಣ ಮಾತ್ರ ಬರುತ್ತದೆ ಎಂದು ಮಂಡಳಿಯ ಅಧ್ಯಕ್ಷ ಎಂ.ಪಿ. ನರೇಂದ್ರ ಸ್ವಾಮಿ 134ನೇ ದಿನದ ಧರಣಿ ಹೋರಾಟದ ವೇದಿಕೆಯಲ್ಲಿ ಹೇಳಿದರು.
ಅವರು ಕಾರ್ಖಾನೆ ಬಾಧಿತ ಹಿರೇಬಗನಾಳ, ಕುಣಿಕೇರಿ ಗ್ರಾಮದ ರೈತರನ್ನು ಭೇಟಿಮಾಡಿ ಅಹವಾಲು ಆಲಿಸಿದಾಗ ಮಾಲಿನ್ಯಕಾರಕ ಕಾರ್ಖಾನೆಗಳನ್ನು ಬಂದ್ ಮಾಡಿ ಜೀವ ಉಳಿಸಿ ಇಲ್ಲವೆ ತೊಟ್ಟು ವಿಷ ಕೊಟ್ಟುಬಿಡಿ ಎನ್ನುವ ಧಾರುಣ ಸನ್ನಿವೇಶ ಮನ ಕಲಕಿತು.
ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ನರೇಂದ್ರ ಸ್ವಾಮಿ ಪ್ರಕಟಿಸಿದ ನಿಲುವು ಅನುಮಾನಾಸ್ಪದ ಆಗಿದ್ದು, ಕಾರ್ಖಾನೆಗಳನ್ನು ಶಾಶ್ವತವಾಗಿ ಮುಚ್ಚುವುದು ಆಗದು ಎನ್ನುವ ಧೋರಣೆ ಸರಿಯಲ್ಲ. ಜೀವಕ್ಕಿಂತ ಕಾರ್ಖಾನೆಗಳು ಮುಖ್ಯ ಎಂದಾದರೆ ಜನರು ಮತ್ತಷ್ಟು ದಯಾನೀಯ ಸ್ಥಿತಿಗೆ ತಲುಪುವುದು ಶತಸಿದ್ಧ. ಧರಣಿ ಸ್ಥಳಕ್ಕೆ ಬಂದು ನರೇಂದ್ರ ಸ್ವಾಮಿ ಮನವಿ ಸ್ವೀಕರಿಸಿ ನನ್ನ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳಿಗೆ ಶೀಘ್ರ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಆಗ ಸಂಘಟಕರು ಕಾರ್ಖಾನೆ ಬಂದಾದ ಮೇಲೆ ನಿಮ್ಮ ಕ್ರಮ ಬೇಕಾಗಿಲ್ಲ. ಜನರ ಜೀವ ಹೋಗುವಾಗ ಕಾರ್ಖಾನೆಗಳ ಮೇಲೆ ಅನಕಂಪ ಬೇಡ ಎಂದರು.
ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಡಿ.ಎಂ. ಬಡಿಗೇರ, ಎಸ್.ಬಿ. ರಾಜೂರು, ಶರಣು ಗಡ್ಡಿ, ರವಿ ಕಾಂತನವರ, ಶಂಭುಲಿಂಗಪ್ಪ ಹರಗೇರಿ, ಶರಣು ಪಾಟೀಲ್, ಸುಭಾನ್ ಸಾಬ್ ನೀರಲಗಿ, ಜಿ.ಬಿ. ಪಾಟೀಲ್, ವಿನಯ ಸಜ್ಜನ್, ನಟರಾಜ ಸವಡಿ, ಡಾ. ಬಸವರಾಜ ಪೂಜಾರ, ರಾಜಶೇಖರ ಏಳುಬಾವಿ, ಗಂಗಾಧರ ಖಾನಾಪೂರ, ವೈ. ಸತ್ಯನಾರಾಯಣ, ಶಂಕರ ವಾಲಿಕಾರ, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಶಿವಪ್ಪ ಬನಪ್ಪನವರ, ಶಿವಾನಂದಯ್ಯ ಬೀಳಗಿಮಠ, ರೇವಣಸಿದ್ದಯ್ಮ ಚಿತ್ರಗಾರ, ಎಸ್.ಕೆ. ಸಿದ್ನೆಕೊಪ್ಪ, ಮಹಾದೇವಪ್ಪ ಮಾವಿನಮಡು, ಮಂಜುನಾಥ ಕವಲೂರು, ನಾಗರಾಜ ಕುಷ್ಟಗಿ, ಶಿವರಾಜ ಪೂಜಾರಿ ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್