ಮಡಗಾಸ್ಕರ್ ಜನರೊಂದಿಗೆ ಭಾರತ ಒಗ್ಗಟ್ಟಿನಿಂದ ನಿಲ್ಲುತ್ತದೆ: ರಣಧೀರ್ ಜೈಸ್ವಾಲ್
ನವದೆಹಲಿ, 11 ಮಾರ್ಚ್ (ಹಿ.ಸ.): ಆ್ಯಂಕರ್: ಉಷ್ಣವಲಯದ ಚಂಡಮಾರುತಗಳಿಂದ ಸಂಕಷ್ಟಕ್ಕೊಳಗಾದ ಮಡಗಾಸ್ಕರ್ ಜನರೊಂದಿಗೆ ಭಾರತ ಒಗ್ಗಟ್ಟಿನಿಂದ ನಿಂತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಸಂಭವಿಸಿದ ಉಷ್ಣವಲಯದ ಚಂಡಮಾರುತಗಳಾದ ಸೈಕ್ಲ
Medicine


ನವದೆಹಲಿ, 11 ಮಾರ್ಚ್ (ಹಿ.ಸ.):

ಆ್ಯಂಕರ್:

ಉಷ್ಣವಲಯದ ಚಂಡಮಾರುತಗಳಿಂದ ಸಂಕಷ್ಟಕ್ಕೊಳಗಾದ ಮಡಗಾಸ್ಕರ್ ಜನರೊಂದಿಗೆ ಭಾರತ ಒಗ್ಗಟ್ಟಿನಿಂದ ನಿಂತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಸಂಭವಿಸಿದ ಉಷ್ಣವಲಯದ ಚಂಡಮಾರುತಗಳಾದ ಸೈಕ್ಲೋನ್ ಫಿಟಿಯಾ ಮತ್ತು ಸೈಕ್ಲೋನ್ ಗೆಜಾನಿ ಕಾರಣದಿಂದ ಮಡಗಾಸ್ಕರ್‌ನಲ್ಲಿ ವ್ಯಾಪಕ ಹಾನಿ ಉಂಟಾಗಿತ್ತು. ಇದರ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಭಾರತ ಸರ್ಕಾರ ಮಾನವೀಯ ನೆರವು ಕಳುಹಿಸಿದೆ.

ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ III ವಿಮಾನವು ಸುಮಾರು 12 ಟನ್ ವೈದ್ಯಕೀಯ ನೆರವು ಮತ್ತು 18 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತು ಮಡಗಾಸ್ಕರ್ ರಾಜಧಾನಿ ಅಂತನಾನರಿವೋ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಈ ನೆರವು ಸಾಮಗ್ರಿಗಳಲ್ಲಿ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಡೇರೆಗಳು, ನೀರು ಸಂಗ್ರಹ ಟ್ಯಾಂಕ್‌ಗಳು, ಸ್ವಚ್ಛತಾ ಕಿಟ್‌ಗಳು ಹಾಗೂ ತಕ್ಷಣ ಸೇವಿಸಬಹುದಾದ ಆಹಾರ ಪದಾರ್ಥಗಳು ಸೇರಿವೆ. ಈ ನೆರವು ಪೀಡಿತ ಸಮುದಾಯಗಳಿಗೆ ತುರ್ತು ನೆರವು ನೀಡಲು ಮಹತ್ವದ ಸಹಾಯವಾಗಲಿದೆ ಎಂದು ರಣಧೀರ್ ಜೈಸ್ವಾಲ್ ಎಕ್ಸನಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande