ಷೇರು ಮಾರುಕಟ್ಟೆ ಕುಸಿತದೊಂದಿಗೆ ಆರಂಭ
ನವದೆಹಲಿ, 06 ಫೆಬ್ರವರಿ (ಹಿ.ಸ.) : ಆ್ಯಂಕರ್ : ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ದೇಶೀಯ ಷೇರು ಮಾರುಕಟ್ಟೆಗಳು ಕುಸಿತದೊಂದಿಗೆ ವಹಿವಾಟು ಆರಂಭಿಸಿವೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮುಂದುವರಿದ ಮಾರಾಟದ ಒತ್ತಡ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣಕಾಸು ನೀತಿ ಫಲಿತಾಂಶದ ಮುನ್ನ
Stock market


ನವದೆಹಲಿ, 06 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ದೇಶೀಯ ಷೇರು ಮಾರುಕಟ್ಟೆಗಳು ಕುಸಿತದೊಂದಿಗೆ ವಹಿವಾಟು ಆರಂಭಿಸಿವೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮುಂದುವರಿದ ಮಾರಾಟದ ಒತ್ತಡ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣಕಾಸು ನೀತಿ ಫಲಿತಾಂಶದ ಮುನ್ನ ಹೂಡಿಕೆದಾರರಲ್ಲಿ ಕಂಡುಬಂದ ಎಚ್ಚರಿಕೆಯ ಮನಸ್ಥಿತಿಯ ಪರಿಣಾಮವಾಗಿ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ತೆರೆದವು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸೆನ್ಸೆಕ್ಸ್ 212.16 ಅಂಕಗಳು ಅಥವಾ ಶೇಕಡಾ 0.25ರಷ್ಟು ಕುಸಿದು 83,101.77 ಮಟ್ಟದಲ್ಲಿ ವಹಿವಾಟು ಆರಂಭಿಸಿತು. ಅದೇ ವೇಳೆ, ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ನಿಫ್ಟಿ 82.25 ಅಂಕಗಳು ಅಥವಾ ಶೇಕಡಾ 0.32ರಷ್ಟು ಇಳಿಕೆಯಿಂದ 25,560.55 ಮಟ್ಟ ತಲುಪಿತು.

ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ 16 ಕಂಪನಿಗಳ ಷೇರುಗಳು ಲಾಭದೊಂದಿಗೆ ತೆರೆದರೆ, ಉಳಿದ 14 ಕಂಪನಿಗಳ ಷೇರುಗಳು ನಷ್ಟದೊಂದಿಗೆ ವಹಿವಾಟು ಆರಂಭಿಸಿವೆ. ನಿಫ್ಟಿಯ 50 ಷೇರುಗಳಲ್ಲಿ 17 ಷೇರುಗಳು ಹಸಿರು ಬಣ್ಣದಲ್ಲಿ ಇದ್ದರೆ, 33 ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸಿವೆ.

ಮಾರುಕಟ್ಟೆ ಆರಂಭದ ಕೆಲವೇ ಹೊತ್ತಿನಲ್ಲಿ ಮಾರಾಟದ ಒತ್ತಡ ಮತ್ತಷ್ಟು ಹೆಚ್ಚಾಗಿದ್ದು, ಬಿಎಸ್‌ಇ ಸೆನ್ಸೆಕ್ಸ್ 503 ಅಂಕಗಳು ಅಥವಾ ಶೇಕಡಾ 0.60ರಷ್ಟು ಕುಸಿದು 83,313 ಮಟ್ಟಕ್ಕೆ ಇಳಿಯಿತು. ಎನ್‌ಎಸ್‌ಇ ನಿಫ್ಟಿ ಕೂಡ 113 ಅಂಕಗಳು ಅಥವಾ ಶೇಕಡಾ 0.52ರಷ್ಟು ಕುಸಿದು 25,642 ಮಟ್ಟದಲ್ಲಿ ವಹಿವಾಟು ನಡೆಸಿತು.

ಜಾಗತಿಕ ಆರ್ಥಿಕ ಅಸ್ಪಷ್ಟತೆ, ವಿದೇಶಿ ಹೂಡಿಕೆದಾರರ ಮಾರಾಟ ಹಾಗೂ ಆರ್‌ಬಿಐ ನೀತಿ ನಿರ್ಧಾರಗಳ ನಿರೀಕ್ಷೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯ ನಿಲುವು ತಾಳಿರುವುದು ಮಾರುಕಟ್ಟೆಯ ಮೇಲಿನ ಒತ್ತಡಕ್ಕೆ ಪ್ರಮುಖ ಕಾರಣವೆಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande