ವಚನ ಚಳವಳಿ ಲಿಂಗತಾರತಮ್ಯ ನಿವಾರಣೆಗೆ ಶ್ರಮಿಸಿದೆ : ಗಾಯತ್ರಿ ಭಾವಿಕಟ್ಟಿ
ಬಳ್ಳಾರಿ, 28 ಫೆಬ್ರವರಿ (ಹಿ.ಸ.): ಆ್ಯಂಕರ್: ಶರಣರ ವಿಚಾರಧಾರೆಗಳು ಮತ್ತು ವಚನ ಚಳವಳಿಯು ಲಿಂಗ ತಾರತಮ್ಯವನ್ನು ನಿವಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದವು ಎಂದು ಶ್ರೀಮತಿ ಗಾಲಿ ರುಕ್ಮಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭ
ವಚನ ಚಳವಳಿ ಲಿಂಗತಾರತಮ್ಯ ನಿವಾರಣೆಗೆ ಶ್ರಮಿಸಿದೆ : ಗಾಯತ್ರಿ ಭಾವಿಕಟ್ಟಿ


ಬಳ್ಳಾರಿ, 28 ಫೆಬ್ರವರಿ (ಹಿ.ಸ.):

ಆ್ಯಂಕರ್: ಶರಣರ ವಿಚಾರಧಾರೆಗಳು ಮತ್ತು ವಚನ ಚಳವಳಿಯು ಲಿಂಗ ತಾರತಮ್ಯವನ್ನು ನಿವಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದವು ಎಂದು ಶ್ರೀಮತಿ ಗಾಲಿ ರುಕ್ಮಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ಗಾಯತ್ರಿ ಭಾವಿಕಟ್ಟಿ ಅವರು ತಿಳಿಸಿದ್ದಾರೆ.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸತ್ಯಂ ಶಿಕ್ಷಕರ ಶಿಕ್ಷಣ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ಶ್ರೀ ಸಿ.ಎಂ.ವೀರಭದ್ರಯ್ಯ ಮತ್ತು ಶ್ರೀಮತಿ ಸುಮಂಗಲಮ್ಮ ದತ್ತಿ ಹಾಗೂ ಲಿಂಗೈಕ್ಯ ಶ್ರೀ ಅಚ್ಚಪ್ಪ ಸೋಮಪತ್ತ ದತ್ತಿ ಮತ್ತು ಲಿಂಗೈಕ್ಯ ಶ್ರೀ ಬಿ.ಎಂ. ಬಸವರಾಜ ದತ್ತಿ ಉಪನ್ಯಾಸದಲ್ಲಿ ಅವರು `ಅಕ್ಕಮಹಾದೇವಿಯ ವಚನಗಳಲ್ಲಿ ಅಸ್ತಿತ್ವದ ಪ್ರಜ್ಞೆ' ವಿಷಯದ ಉಪನ್ಯಾಸ ನೀಡಿದರು.

ಸಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ವಚನಗಳು ಮತ್ತು ವಚನ ಚಳವಳಿ ಹಾಗೂ ಶರಣರ ವಿಚಾರಧಾರೆಗಳು ನಿಸ್ವಾರ್ಥವಾದ ಸೇವೆಯನ್ನು ಸಲ್ಲಿಸಿದವು.

ನಮ್ಮ ಕನ್ನಡ ಸಾಹಿತ್ಯ ಮತ್ತು ಕನ್ನಡ ನಾಡಿನ ಅನನ್ಯತೆಯೇ ವಚನ ಚಳವಳಿ ಆಗಿದೆ. 12ನೆಯ ಶತಮಾನದ ವಚನಕಾರರು ಮತ್ತು ವಚನ ಸಾಹಿತ್ಯದಲ್ಲಿ ಪ್ರಚಲಿತ ಆಗುಹೋಗುಗಳ, ಪ್ರಸ್ತುತ ವಿಚಾರಗಳ ಪ್ರಸ್ತಾಪವಾಗಿರುವುದು ವಿಶೇಷ ಎಂದರು.

ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಎಚ್.ಎಂ. ಬಸವರಾಜ್ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದತ್ತಿದಾನಿಗಳನ್ನು ಸ್ಮರಿಸಿದರು.

ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶ್ವರಾಮಾಂಜಿನೇಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದತ್ತಿ ದಾನಿಗಳಾದ ನಾಗರಾಜ್ ಅಚ್ಚಪ್ಪ, ಉಪನ್ಯಾಸಕ ಆಲಂಭಾಷ ಅವರು ವೇದಿಕೆಯಲ್ಲಿದ್ದರು. ಉಪನ್ಯಾಸಕಿ ಮಂಗಳಗೌರಿ ಅವರು ಪ್ರಾರ್ಥಿಸಿದರು. ಉಪನ್ಯಾಸಕ ಚಾಂದ್ಪಾಷ ಅವರು ಸ್ವಾಗತಿಸಿದರು. ಉಪನ್ಯಾಸಕಿ ಎಂ. ಅನುಷಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ.ಚಂದ್ರಶೇಖರ್ ಅವರು ವಂದಿಸಿದರು.

ಗಾಯಕ ಡಿ.ಎಸ್. ಗಣೇಶ್ ಅವರು ವಚನ ಹಾಗೂ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande