ರಣಜಿ ಟ್ರೋಫಿ ಫೈನಲ್ ; ಜಮ್ಮು–ಕಾಶ್ಮೀರ ಚಾಂಪಿಯನ್
ಹುಬ್ಬಳ್ಳಿ, 28 ಫೆಬ್ರವರಿ (ಹಿ.ಸ.) : ಆ್ಯಂಕರ್ : ರಣಜಿ ಟ್ರೋಫಿ ಫೈನಲ್ನಲ್ಲಿ ಇತಿಹಾಸ ನಿರ್ಮಾಣವಾಗಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿದ್ದ ಜಮ್ಮು–ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕವನ್ನು ಏಕಪಕ್ಷೀಯವಾಗಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಹುಬ್ಬಳ್ಳಿ ಕೆ ಎಸ್ ಸಿಎ ಮೈದಾನದಲ್ಲಿ ನ
champions


ಹುಬ್ಬಳ್ಳಿ, 28 ಫೆಬ್ರವರಿ (ಹಿ.ಸ.) :

ಆ್ಯಂಕರ್ : ರಣಜಿ ಟ್ರೋಫಿ ಫೈನಲ್ನಲ್ಲಿ ಇತಿಹಾಸ ನಿರ್ಮಾಣವಾಗಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿದ್ದ ಜಮ್ಮು–ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕವನ್ನು ಏಕಪಕ್ಷೀಯವಾಗಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಹುಬ್ಬಳ್ಳಿ ಕೆ ಎಸ್ ಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 15ನೇ ಬಾರಿ ಫೈನಲ್ ತಲುಪಿದ್ದ ಕರ್ನಾಟಕ ತಂಡ ತವರು ನೆಲದ ಪ್ರಯೋಜನ ಪಡೆದು ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿತ್ತು.

ಕರ್ನಾಟಕ ತಂಡದಲ್ಲಿ ಅನುಭವಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಮತ್ತು ದೇವದತ್ ಪಡಿಕ್ಕಲ್ ಅವರಂತ ಖ್ಯಾತ ಬ್ಯಾಟ್ಸ್ಮನ್ಗಳು ಇದ್ದರು. ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ರಂತಹ ಪ್ರತಿಭಾವಂತರಿದ್ದರು.

ಆದರೆ ಪಂದ್ಯ ಆರಂಭವಾದ ಮೊದಲ ದಿನದಿಂದಲೇ ಜಮ್ಮು ಕಾಶ್ಮೀರ ತಂಡ ಆಟದ ಮೇಲೆ ಹಿಡಿತ ಸಾಧಿಸಿ, ಕೊನೆಯವರೆಗೂ ಕರ್ನಾಟಕಕ್ಕೆ ಒಂದೇ ಒಂದು ಅವಕಾಶ ನೀಡಲಿಲ್ಲ. ಶಿಸ್ತಿನ ಬ್ಯಾಟಿಂಗ್ ಮತ್ತು ಕಟ್ಟುಬದ್ಧ ಬೌಲಿಂಗ್ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ಆಳಿದ ಜಮ್ಮು–ಕಾಶ್ಮೀರ ತಂಡ, ಇತಿಹಾಸದಲ್ಲೇ ಸ್ಮರಣೀಯ ಜಯ ದಾಖಲಿಸಿತು.

ಜಮ್ಮು ಕಾಶ್ಮೀರ ತಂಡ ಗೆಲುವಿನ ಸಂಭ್ರಮದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡಾ ಭಾಗಿಯಾದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande