ಸಾವರ್ಜರ್ ಪುಣ್ಯತಿಥಿ ; ರಾಷ್ಟ್ರ ನಾಯಕರಿಂದ ಗೌರವ ನಮನ
ನವದೆಹಲಿ, 26 ಫೆಬ್ರವರಿ (ಹಿ.ಸ.) : ಆ್ಯಂಕರ್ : ಮಹಾನ್ ಕ್ರಾಂತಿಕಾರಿ ಹಾಗೂ ರಾಷ್ಟ್ರೀಯ ಚಿಂತಕ ವಿನಾಯಕ ದಾಮೋದರ್ ಸಾವರ್ಕರ್ ಅವರ ಪುಣ್ಯತಿಥಿಯಂದು ರಾಷ್ಟ್ರದ ಪ್ರಮುಖ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ. ಲೋಕ ಸಭಾ ಅಧ್ಯಕ್ಷ ಒಂ ಬಿರ್ಲಾ ಅವರು ಸ್ವಾತಂತ್ರ್ಯವೀರ ಸಾವರ್ಕರ್ ಅವರನ್ನು ಸ್ಮರಿಸಿ, “ಭಾರತ
Savrkar


ನವದೆಹಲಿ, 26 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಮಹಾನ್ ಕ್ರಾಂತಿಕಾರಿ ಹಾಗೂ ರಾಷ್ಟ್ರೀಯ ಚಿಂತಕ ವಿನಾಯಕ ದಾಮೋದರ್ ಸಾವರ್ಕರ್ ಅವರ ಪುಣ್ಯತಿಥಿಯಂದು ರಾಷ್ಟ್ರದ ಪ್ರಮುಖ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ.

ಲೋಕ ಸಭಾ ಅಧ್ಯಕ್ಷ ಒಂ ಬಿರ್ಲಾ ಅವರು ಸ್ವಾತಂತ್ರ್ಯವೀರ ಸಾವರ್ಕರ್ ಅವರನ್ನು ಸ್ಮರಿಸಿ, “ಭಾರತೀಯ ಸ್ವಾತಂತ್ರ್ಯ ಚಳವಳಿಗೆ ತಮ್ಮ ಸರ್ವಸ್ವವನ್ನೇ ಅರ್ಪಿಸಿದ ಮಹಾನ್ ಕ್ರಾಂತಿಕಾರಿ” ಎಂದು ಬಣ್ಣಿಸಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಾವರ್ಕರ್ ಅವರನ್ನು “ ದೇಶಭಕ್ತಿ ಮತ್ತು ಅನುಪಮ ಪ್ರತಿಭೆಯ ವಿಶಿಷ್ಟ ಸಂಗಮ” ಎಂದು ಕೊಂಡಾಡಿದರು.

ರಕ್ಷಣಾ ಸಚಿವ ರಾಜನಾಥ ಸಿಂಗ್ ಸಾವರ್ಕರ್ ಅವರ ಅದಮ್ಯ ಧೈರ್ಯ, ಅನುಪಮ ತ್ಯಾಗ ಮತ್ತು ರಾಷ್ಟ್ರಭಕ್ತಿಯನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಅದ್ಭುತ ಅಧ್ಯಾಯವೆಂದು ವರ್ಣಿಸಿದರು. ಅವರ ಪ್ರಬಲ ಆಲೋಚನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿವೆ ಎಂದರು.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ ಮಾತನಾಡಿ, ಲಂಡನ್ನ ಇಂಡಿಯಾ ಹೌಸ್ನಿಂದ ಸೆಲ್ಯುಲಾರ್ ಜೈಲಿನ ಕತ್ತಲಕೋಣೆಗಳವರೆಗೆ ಸಾಗಿದ ಸಾವರ್ಕರ್ ಅವರ ಜೀವನಗಾಥೆ ರಾಷ್ಟ್ರೀಯ ಚೇತನದ ಪುನರುಜ್ಜೀವನದ ಪ್ರತೀಕವಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande