ಮಾರ್ಚ ೨ರಂದು ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಹೋಳಿ ದಹನ
ಉಜ್ಜಯಿನಿ, 26 ಫೆಬ್ರವರಿ (ಹಿ.ಸ.) : ಆ್ಯಂಕರ್ : ಉಜ್ಜಯಿನಿ ಜ್ಯೋತಿರ್ಲಿಂಗ ಕ್ಷೇತ್ರವಾದ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಮಾರ್ಚ್ 2ರಂದು ಹೋಲಿಕಾ ದಹನ್ ಹಾಗೂ ಮಾರ್ಚ್ 3ರಂದು ಧೂಳಂಡಿ ಹಬ್ಬವನ್ನು ಪ್ರಾಚೀನ ಸಂಪ್ರದಾಯದಂತೆ ಆಚರಿಸಲಾಗುವುದು ಎಂದು ದೇವಸ್ಥಾನದ ಆಡಳಿತಾಧಿಕಾರಿ ಪ್ರಥಮ್ ಕೌಶಿಕ್ ತಿಳ
Mahakala


ಉಜ್ಜಯಿನಿ, 26 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಉಜ್ಜಯಿನಿ ಜ್ಯೋತಿರ್ಲಿಂಗ ಕ್ಷೇತ್ರವಾದ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಮಾರ್ಚ್ 2ರಂದು ಹೋಲಿಕಾ ದಹನ್ ಹಾಗೂ ಮಾರ್ಚ್ 3ರಂದು ಧೂಳಂಡಿ ಹಬ್ಬವನ್ನು ಪ್ರಾಚೀನ ಸಂಪ್ರದಾಯದಂತೆ ಆಚರಿಸಲಾಗುವುದು ಎಂದು ದೇವಸ್ಥಾನದ ಆಡಳಿತಾಧಿಕಾರಿ ಪ್ರಥಮ್ ಕೌಶಿಕ್ ತಿಳಿಸಿದ್ದಾರೆ.

ಮಾರ್ಚ್ 2ರ ಸೋಮವಾರ ಸಂಜೆ ಆರತಿಯ ನಂತರ ದೇವಾಲಯದ ಆವರಣದಲ್ಲಿರುವ ಓಂಕಾರೇಶ್ವರ ದೇವಸ್ಥಾನದ ಮುಂದೆ ಹೋಲಿಕೆಗೆ ಪೂಜೆ ಸಲ್ಲಿಸಿ ಹೋಲಿಕಾ ದಹನ ನೆರವೇರಿಸಲಾಗುತ್ತದೆ. ಸಂಜೆ ಆರತಿ ವೇಳೆ ಗಿಡಮೂಲಿಕೆ ಗುಲಾಲ್ ಸಮರ್ಪಣೆ ಮಾಡಲಾಗುತ್ತದೆ. ಸಂಪ್ರದಾಯದಂತೆ ಬಾಬಾ ಮಹಾಕಾಳೇಶ್ವರನಿಗೆ ಸಕ್ಕರೆಯ ಹಾರ ಅರ್ಪಿಸಲಾಗುವುದು ಎಂದು ಅವರು ವಿವರಿಸಿದರು.

ಮಾರ್ಚ್ 3ರಂದು ಧೂಳಂಡಿ ಅಂಗವಾಗಿ ಬೆಳಿಗ್ಗೆ 4 ಗಂಟೆಗೆ ನಡೆಯುವ ಭಸ್ಮಾರತಿ ವೇಳೆ ಪುರೋಹಿತರು ಮೊದಲಿಗೆ ಭಗವಾನ್ ಮಹಾಕಾಳೇಶ್ವರನಿಗೆ ಗಿಡಮೂಲಿಕೆ ಗುಲಾಲ್ ಅರ್ಪಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ದೇವಾಲಯದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಇದೇ ವೇಳೆ, ಚೈತ್ರ ಕೃಷ್ಣ ಪ್ರತಿಪದದಿಂದ ಅಶ್ವಿನ್ ಪೂರ್ಣಿಮೆಯವರೆಗೆ ಆರತಿ ವೇಳೆಯಲ್ಲಿ ಬದಲಾವಣೆ ಇರಲಿದೆ. ಮಾರ್ಚ್ 4ರಿಂದ ಹೊಸ ವೇಳಾಪಟ್ಟಿ ಜಾರಿಯಾಗಲಿದೆ. ಮೊದಲ ಭಸ್ಮಾರತಿ ಬೆಳಿಗ್ಗೆ 4ರಿಂದ 6ರವರೆಗೆ, ದದ್ಯೋದಕ ಆರತಿ ಬೆಳಿಗ್ಗೆ 7ರಿಂದ 7.45ರವರೆಗೆ, ಭೋಗ ಆರತಿ ಬೆಳಿಗ್ಗೆ 10ರಿಂದ 10.45ರವರೆಗೆ ನಡೆಯಲಿದೆ. ಸಂಜೆ ಪೂಜೆ 5ರಿಂದ 5.45ರವರೆಗೆ, ಸಂಜೆ ಆರತಿ 7ರಿಂದ 7.45ರವರೆಗೆ ಹಾಗೂ ಶಯನ ಆರತಿ ರಾತ್ರಿ 10.30ರಿಂದ 11ರವರೆಗೆ ನೆರವೇರಲಿದೆ.

ಮಾರ್ಚ್ 8ರಂದು ರಂಗಪಂಚಮಿ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತದೆ. ಆ ದಿನ ಬಾಬಾ ಮಹಾಕಾಳರ ಧ್ವಜ ಮೆರವಣಿಗೆ ನಡೆಯಲಿದೆ.

ಫಾಲ್ಗುಣ ಶುಕ್ಲ ಪೂರ್ಣಿಮೆಯಾದ ಮಾರ್ಚ್ 3ರಂದು ಸಂಜೆ 6.32ರಿಂದ 6.46ರವರೆಗೆ 14 ನಿಮಿಷಗಳ ಚಂದ್ರಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಪೂಜಾ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ವೇದಕಾಲ ಬೆಳಿಗ್ಗೆ ಸೂರ್ಯೋದಯದಿಂದಲೇ ಆರಂಭವಾಗುವ ಕಾರಣ, ಬೆಳಗಿನ ದದ್ಯೋದಕ ಮತ್ತು ಭೋಗ ಆರತಿಯಲ್ಲಿ ಕೇವಲ ಸಕ್ಕರೆ ಮಾತ್ರ ಸಮರ್ಪಿಸಲಾಗುತ್ತದೆ. ಗ್ರಹಣ ಮುಗಿದ ಬಳಿಕ ದೇವಾಲಯ ಶುದ್ಧೀಕರಣ, ಮಹಾಕಾಳೇಶ್ವರನಿಗೆ ಸ್ನಾನ, ಪೂಜೆ ಹಾಗೂ ಭೋಗ ಸಮರ್ಪಣೆ ನಡೆಸಿ ಸಂಜೆ ಆರತಿ ನೆರವೇರಿಸಲಾಗುತ್ತದೆ ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande