ಅಂತಾರಾಷ್ಟ್ರೀಯ ಕಿಕ್ಬಾಕ್ಸಿಂಗ್ ಸಾಧಕರಿಗೆ ಸಚಿವರಿಂದ ಸನ್ಮಾನ
ಬೀದರ್, 25 ಫೆಬ್ರವರಿ (ಹಿ.ಸ.) : ಆ್ಯಂಕರ್ : ಅಂತಾರಾಷ್ಟ್ರೀಯ ಕಿಕ್ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಬೀದರ್ ಜಿಲ್ಲೆಯ ನಿಶಿಕಾಂತ್ ಹಾಗೂ ಬೆಳ್ಳಿ ಪದಕ ವಿಜೇತ ಪರ್ವೇಜ್ ಅವರನ್ನು ಇಂದು ರಾಜ್ಯ ಸಚಿವ ಈಶ್ವರ ಖಂಡ್ರೆ ಅವರು ತಮ್ಮ ಭಾಲ್ಕಿ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಇವರಿಗೆ
felicitates


ಬೀದರ್, 25 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಅಂತಾರಾಷ್ಟ್ರೀಯ ಕಿಕ್ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಬೀದರ್ ಜಿಲ್ಲೆಯ ನಿಶಿಕಾಂತ್ ಹಾಗೂ ಬೆಳ್ಳಿ ಪದಕ ವಿಜೇತ ಪರ್ವೇಜ್ ಅವರನ್ನು ಇಂದು ರಾಜ್ಯ ಸಚಿವ ಈಶ್ವರ ಖಂಡ್ರೆ ಅವರು ತಮ್ಮ ಭಾಲ್ಕಿ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಇವರಿಗೆ ತರಬೇತಿ ನೀಡಿದ ಕೋಚ್ ಸುವಿತ್ ಮೊರೆ ಅವರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಸಾಧಕರಿಗೆ ಹಾರ ಹಾಕಿ, ಸ್ಮರಣಿಕೆ ನೀಡಿ ಸನ್ಮಾನಿಸಿದ ಸಚಿವರು, ಜಿಲ್ಲೆಯ ಯುವಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದುಕೊಟ್ಟಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಕಠಿಣ ಪರಿಶ್ರಮ, ಶಿಸ್ತು ಮತ್ತು ತರಬೇತಿಯ ಮೂಲಕ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಪ್ರಶಂಸಿಸಿದರು.

ಯುವಕರಿಗೆ ಕಿಕ್ಬಾಕ್ಸಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಉತ್ತಮ ತರಬೇತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಕ್ರೀಡಾಪಟುಗಳು ಒಲಿಂಪಿಕ್ಸ್ ಮಟ್ಟದವರೆಗೆ ತಲುಪಲು ಅಗತ್ಯವಾದ ಮೂಲಸೌಕರ್ಯ, ಆರ್ಥಿಕ ನೆರವು ಹಾಗೂ ತರಬೇತಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಈಶ್ವರ ಖಂಡ್ರೆ ಭರವಸೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande